ಈ ಬಾರಿ ಎಕ್ಸಿಟ್ ಪೋಲ್‌ನಲ್ಲಿ ಹೈದರಾಬಾದ್ ಓವೈಸಿ ಕುಟುಂಬದಿಂದ ಜಾರಿ ಬಿಜೆಪಿ ತೆಕ್ಕೆಗೆ ಬೀಳುತ್ತಾ ಎಂಬ ಕುತೂಹಲ ಮನೆ ಮಾಡಿದೆ. ಹೈದರಾಬಾದ್ ಕ್ಷೇತ್ರದ ಕುರಿತು ಎಕ್ಸಿಟ್‌ ಪೋಲ್ ಏನು ಹೇಳಿವೆ ಎಂಬುದರ ಮಾಹಿತಿ ಇಲ್ಲಿದೆ. 

ಹೈದರಾಬಾದ್: ಇಡೀ ದೇಶವೇ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ (Loksabha Election 2024) ಕಾಯುತ್ತಿದೆ. ಜೂನ್ 1ರ ಸಂಜೆ 6.30ರ ನಂತರ ಹಲವು ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು (Exit Polls) ಪ್ರಕಟಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸರಳವಾಗಿ ಬಹುಮತ ಪಡೆಯಲಿದ್ದು, ಮೂರನೇ ಬಾರಿ ಸರ್ಕಾರ ರಚನೆ ಮಾಡಲಿವೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ. ಮೂರನೇ ಬಾರಿ ಪ್ರಧಾನಿ ಸ್ಥಾನ ಅಲಂಕರಿಸುವ ಮೂಲಕ ನರೇಂದ್ರ ಮೋದಿ (PM Narendra Modi) ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ. ಈ ಹಿಂದೆ ಗುಜರಾತಿನಲ್ಲಿ ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆ ಏರುವ ಮೋದಿಯವರು ದಾಖಲೆ ಬರೆದಿದ್ದರು. 

ನೆರೆಯ ತೆಲುಗು ಪ್ರದೇಶದ ರಾಜಧಾನಿ ಹೈದರಾಬಾದ್ ಲೋಕಸಭಾ ಕ್ಷೇತ್ರ ಎಐಎಂಐಎಂ ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (asaduddin Owaisi) ಇಲ್ಲಿಯ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಹೈದರಾಬಾದ್ ಓವೈಸಿ ಕುಟುಂಬದ ಭದ್ರಕೋಟೆಯಾಗಿದೆ. ಆದರೆ ಈ ಬಾರಿ ಎಕ್ಸಿಟ್ ಪೋಲ್‌ನಲ್ಲಿ ಹೈದರಾಬಾದ್ ಓವೈಸಿ ಕುಟುಂಬದಿಂದ ಜಾರಿ ಬಿಜೆಪಿ ತೆಕ್ಕೆಗೆ ಬೀಳುತ್ತಾ ಎಂಬ ಕುತೂಹಲ ಮನೆ ಮಾಡಿದೆ. ಹೈದರಾಬಾದ್ ಕ್ಷೇತ್ರದ ಕುರಿತು ಎಕ್ಸಿಟ್‌ ಪೋಲ್ ಏನು ಹೇಳಿವೆ ಎಂಬುದರ ಮಾಹಿತಿ ಇಲ್ಲಿದೆ. 

ಇಂಡಿಯಾ ಟುಡೇ ಎಕ್ಸಿಟ್ ಪೋಲ್ 

ಇಂಡಿಯಾ ಟುಡೇ-ಮೈ ಆಕ್ಸಿಸ್ ಎಕ್ಸಿಟ್ ಪೋಲ್, ದೇಶದಾದ್ಯಂತ ಬಿಜೆಪಿ ಪರ ಅಲೆ ಇರೋದನ್ನು ಹೇಳಿದೆ.ತ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನ ಕಾಣಲಿದೆ. ತೆಲಂಗಾಣದ 17 ಕ್ಷೇತ್ರಗಳಲ್ಲಿ 11 ರಿಂದ 12 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಯವರ ಗೆಲುವು ಅಷ್ಟು ಸುಲಭವಾಗಿಲ್ಲ ಎಂದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ. ಅಸಾದುದ್ದೀನ್ ಓವೈಸಿ ಅವರಿಗೆ ಬಿಜೆಪಿ ಅಭ್ಯರ್ಥಿ ಮಾಧವಿಲತಾ (madhavi latha) ತೀವ್ರ ಪೈಪೋಟಿ ನೀಡಲಿದ್ದಾರೆ. 

ದಕ್ಷಿಣ ಭಾರತದಿಂದ ಬಿಜೆಪಿಗೆ ಸಿಗಲಿದೆ ಹೆಚ್ಚಿನ ಸ್ಥಾನ, ಮತಗಟ್ಟೆ ಸಮೀಕ್ಷೆಗೆ ಕಾಂಗ್ರೆಸ್ ಅಸಮಾಧಾನ!

ಮಾಧವಿಲತಾ ಅವರ ಅದ್ಧೂರಿ ಪ್ರಚಾರ, ಆಕ್ರಮಣಕಾರಿ ಶೈಲಿಯ ಮಾತುಗಳು ಅವರ ಪ್ಲಸ್ ಪಾಯಿಂಟ್. ಹಿಂದೂಗಳ ಮತಗಳನ್ನು ಕ್ರೋಢಿಕರಣ ಮಾಡುವಲ್ಲಿ ಮಾಧವಿಲತಾ ಯಶಸ್ವಿಯಾಗಿದ್ದಾರಂತೆ. ಇದರ ಜೊತೆ ಬಿಜೆಪಿಯ ಪ್ರಮುಖ ನಾಯಕರೆಲ್ಲಾ ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಪ್ರಕಾರ ಮಾಧವಿ ಲತಾ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. 

ಆರಾ ಮಸ್ತಾನ್ ಎಕ್ಸಿಟ್ ಪೋಲ್ 

ಆರಾ ಮಸ್ತಾನ್ ಎಕ್ಸಿಟ್ ಪೋಲ್ ಸಹ ಅಸಾದುದ್ದೀನ್ ಓವೈಸಿ ಮತ್ತು ಮಾಧವಿಲಾ ನಡುವೆ ತೀವ್ರ ಸ್ಪರ್ಧೆ ಇರಲಿದೆ. ಆರಾ ಮಸ್ತಾನ್ ಎಕ್ಸಿಟ್ ಪೋಲ್ ಪ್ರಕಾರ, ತೆಲಂಗಾಣದ 17 ಕ್ಷೇತ್ರಗಳ ಪೈಕಿ ಬಿಜೆಪಿ 8 ರಿಂದ 9 ಮತ್ತು ಕಾಂಗ್ರೆಸ್ 7 ರಿಂದ 8 ಸ್ಥಾನ ಗೆಲ್ಲುವ ನಿರೀಕ್ಷೆಗಳಿವೆ. ಬಿಆರ್‌ಎಸ್‌ ಖಾತೆ ತೆರೆಯಲು ವಿಫಲವಾಗಲಿದೆ ಎಂದು ಹೇಳಿದೆ. ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಐಎಂಐಎಂ ಅಸಾದುದ್ದೀನ್ ಓವೈಸಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹಾಗಂತ ಮಾಧವಿಲತಾ ಗೆಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಆರಾ ಮಸ್ತಾನ್ ಎಕ್ಸಿಟ್ ಪೋಲ್ ಹೇಳಿದೆ. 

'ಕನ್ಯಾಕುಮಾರಿಯ ಹೊಸ ಸಂಕಲ್ಪಗಳು' - ಪ್ರಧಾನಿ ಮೋದಿಯವರ ವಿಶೇಷ ಲೇಖನ ಇಲ್ಲಿದೆ

ಪೋಲಿಟ್ರಿಕ್ ಪರ್ಪೆಟ್ ಎಕ್ಸಿಟ್ ಪೋಲ್ 

ಪೋಲಿಟ್ರಿಕ್ ಪರ್ಪೆಟ್ ಎಂಬ ಸ್ಥಳೀಯ ಸಮೀಕ್ಷೆ ನಡೆಸಿದ ಎಕ್ಸಿಟ್ ಪೋಲ್ ಪ್ರಕಾರ ತೆಲಂಗಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಸಮೀಕ್ಷೆಯ ಪ್ರಕಾರ ಬಿಆರ್‌ಎಸ್ ಖಾತೆ ತರೆಯಲ್ಲ. ಬಿಜೆಪಿ 8 ರಿಂದ 9 ಮತ್ತು ಕಾಂಗ್ರೆಸ್ 7 ರಿಂದ 8 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶೇ.31 ಮತ್ತು ಎಐಎಂಐಎಂ ಶೇ.49ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಕಳೆದ ಬಾರಿಗಿಂತ ಬಿಜೆಪಿ ಮತಗಳಿಕೆ ಏರಿಕೆಯಾಗುತ್ತದೆ.ಆದ್ರೆ ಅಸಾದುದ್ದೀನ್ ಓವೈಸಿ ಗೆಲ್ಲುತ್ತಾರೆ ಎಂದು ಪೋಲಿಟ್ರಿಕ್ ಪರ್ಪೆಟ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.