Min read

ಪತ್ನಿಯ ನೆಚ್ಚಿನ ಕಾರ್ ಖರೀದಿಸಿ ಬಿಕ್ಕಿ ಬಿಕ್ಕಿ ಅತ್ತ ಪತಿ! ಗಂಡನೆಂದ್ರೆ ಹೀಗಿರಬೇಕೆಂದ ಲೇಡೀಸ್! 

Husband breaks down in tears after buying wife s favorite car emotional video goes viral mrq
Husband Cry

Synopsis

Emotional Video: ಯುವಕನೊಬ್ಬ ತನ್ನ ಪತ್ನಿಯ ನೆಚ್ಚಿನ ಕಾರನ್ನು ಖರೀದಿಸಿ ಭಾವುಕನಾಗಿ ಕಣ್ಣೀರಿಟ್ಟ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ  ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಕೆಲವೊಂದು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗಿ ನೋಡುಗರ ಮನಸ್ಸನ್ನು ಭಾರವಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದೇ ಮಾದರಿಯ ವಿಡಿಯೋವೊಂದು ಅತ್ಯಂತ ವೇಗವಾಗಿ ಮಿಂಚಿನಂತೆ ವೈರಲ್ ಆಗುತ್ತಿದ್ದು, ನೋಡುಗರು ಭಾವುಕರಾಗಿ ಕಮೆಂಟ್ ಮಾಡೋದರ ಜೊತೆಗೆ ಶೇರ್ ಸಹ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಡಿಯೋ ಅಂದ್ರೆ ಗಂಡನೆಂದ್ರೆ ಹೀಗಿರಬೇಕು ಎಂದು ಲೇಡಿಸ್ ಮಾತನಾಡಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ ಖಾರ್ ಖರೀದಿಸಿದ ಬಳಿಕ ಭಾವುಕನಾಗಿ ಕಣ್ಣೀರು ಹಾಕುತ್ತಾನೆ. ಕೇವಲ 35 ಸೆಕೆಂಡಿನ ಈ ವಿಡಿಯೋ ಎಲ್ಲರಿಗೂ ಹತ್ತಿರವಾಗುತ್ತಿದೆ. 

ವೈರಲ್ ಆಗುತ್ತಿರುವ ಮನಕಲಕುವ ವಿಡಿಯೋವನ್ನು @Sarvagy_ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಅಂದ್ರೆ ಏಪ್ರಿಲ್ 14ರಂದು ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋಗೆ 78 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ಸಾವಿರಕ್ಕೂ ಅಧಿಕ ಲೈಕ್ಸ್, ಕಮೆಂಟ್ ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇದೊಂದು ಭಾವುಕ ಕ್ಷಣ. ಆ ವ್ಯಕ್ತಿ ತನ್ನ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದ ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ? 
ಸುಮಾರು ಏಳೆಂಟು ಜನರು ಹೊಸ ಕಾರ್ ಮೇಲಿರುವ ಕವರ್ ತೆಗೆದು ಸಂಭ್ರಮಿಸುತ್ತಾರೆ. ಕಪ್ಪು ಟೀ ಶರ್ಟ್ ಧರಿಸಿದ ವ್ಯಕ್ತಿ ಕೈಯಲ್ಲೊಂದು ಫೋಟೋ ಹಿಡಿದುಕೊಂಡು ನಿಂತಿರುತ್ತಾನೆ. ಕವರ್ ಓಪನ್ ಮಾಡ್ತಿದ್ದಂತೆ ಕೈಯಲ್ಲಿದ್ದ ಫೋಟೋವನ್ನು ಮುಂದಿನ ಸೀಟ್‌ ಮೇಲೆ ಇರಿಸುತ್ತಾನೆ. ನಂತರ ಸುಂದರವಾದ ಹೂಗುಚ್ಛವನ್ನು ಇರಿಸುತ್ತಾನೆ. ಈ ವೇಳೆಗೆ ಭಾವುಕನಾದ ಯುವಕ ಕಣ್ಣೀರು ಹಾಕುತ್ತಾನೆ. ಕೊನೆಗೆ ತನ್ನ ನೆಚ್ಚಿನ ಮಹಿಳೆಯ ಪೋಟೋಗೆ ಮುತ್ತಿಟ್ಟು, ಕೆಳಗೆ ಕುಳಿತು ಮತ್ತಷ್ಟು ಜೋರಾಗಿ ಅಳಲು ಶುರು ಮಾಡುತ್ತಾನೆ. ಸದ್ಯ ಈ ಹುಡುಗ ಎಲ್ಲರ ಮನವನ್ನು ಮುಟ್ಟುತ್ತಿದೆ. 

ಇದನ್ನೂ ಓದಿ: ಮನಕಲುಕುವ ವಿಡಿಯೋ, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳೋ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ಬಾಲಕ

ಸುಂದರ ಸಾಲುಗಳೊಂದಿಗೆ ವಿಡಿಯೋ ಪೋಸ್ಟ್!
ಓರ್ವ ಪುರುಷ ನಂಬಿಕಸ್ಥ ಮತ್ತು ಪ್ರಾಮಾಣಿಕನಾಗಿರಲು ನಿರ್ಧರಿಸಿದ್ರೆ ಆತ ತನ್ನ ನೆಚ್ಚಿನ ಮಹಿಳೆಯನ್ನು ಆಕೆ ಸಾವಿನ ನಂತರವೂ ಬಿಡಲ್ಲ. ತನ್ನ ಇಡೀ ಜೀವನದಲ್ಲಿ ಆಕೆಯನ್ನು ಬಿಟ್ಟು ಕೊಡಲಾರ ಎಂಬ ಸುಂದರ ಸಾಲುಗಳೊಂದಿಗೆ ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಪ್ಯಾರ್ ಜುಕ್ತಾ ನಹೀ ಸಿನಿಮಾದ 'ತುಮ್ ಸೇ ಮಿಲ್ಕರ್, ನಾ ಜಾನೇ ಕ್ಯೂಂ, ಔರ್ ಬಿ ಕುಚ್ ಯಾದ್ ಆತಾ ಹೈ ' ಹಾಡು ಸಹ ಸೇರಿಸಲಾಗಿದೆ. ಪ್ಯಾರ್ ಜುಕ್ತಾ ನಹೀ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಪದ್ಮಿನಿ ಕೋಲ್ಹಾಪುರೆ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಭಾವುಕ ಕ್ಷಣಕ್ಕೆ ಕಣ್ಣೀರಾದ ನೆಟ್ಟಿಗರು!
ಈ ವಿಡಿಯೋ ನೋಡಿದ ನೆಟ್ಟಿಗರು, ಈ ಕಾರ್ ಆತನ ಮಡದಿಯ ಕನಸು ಆಗಿರಬೇಕು ಮತ್ತು ತನ್ನ ಪಕ್ಕದಲ್ಲಿ ಪತ್ನಿಯೇ ಕುಳಿತುಕೊಳ್ಳಬೇಕೆಂಬ ಆಸೆ ಅವನದ್ದಾಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಶುದ್ಧವಾದ ಪ್ರೇಮಕ್ಕೆ ಎಂದಿಗೂ ಸಾವಿಲ್ಲ. ಈ ವಿಡಿಯೋ ನೋಡಿ ದುಃಖವಾಗುತ್ತಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ತಿಳಿದವರಿಗೆ ಮಾತ್ರ ಗೊತ್ತಿರುತ್ತದೆ ಎಂದು ಕಣ್ಣೀರು ಹಾಕುತ್ತಿರೋ ಎಮೋಜಿಗಳನ್ನು ಕಮೆಂಟ್ ರೂಪದಲ್ಲಿ ಹಾಕುತ್ತಿದ್ದಾರೆ. ಎಕ್ಸ್ ಜೊತೆ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಈ ವಿಡಿಯೋ ಹರಿದಾಡುತ್ತಿದೆ. ಆದರೆ ಈ  ಯುವಕ ಯಾರು? ಇಷ್ಟು ಚಿಕ್ಕ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದೇಗೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ. 

ಇದನ್ನೂ ಓದಿ: ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

Latest Videos