ಪಾಕಿಸ್ತಾನದಲ್ಲಿ ಅನಾಮಿಕರಿಂದ ಉಗ್ರರ ಬೇಟೆ ಮುಂದುವರೆದಿದೆ ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಆಮೀರ್ ಹಮ್ಜಾ ಅನಾಮಿಕರ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.
ನವದೆಹಲಿ: ಕೆಲ ದಿನಗಳ ಹಿಂದೆ ಬೆಂಗಳೂರು ದಾಳಿ ಸಂಚುಕೋರ ಅಬು ಸೈಫುಲ್ಲಾ ಅನಾಮಿಕರ ಗುಂಡಿಗೆ ಬಲಿಯಾದ ಬೆನ್ನಲ್ಲೇ ಮತ್ತೋರ್ವ ಉಗ್ರ ಅನಾಮಿಕರ ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಉಗ್ರ ಆಮೀರ್ ಹಮ್ಜಾ ಅನಾಮಿಕರ ಗುಂಡಿನ ದಾಳಿಯಿಂದ ಗಂಭೀರಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈತ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ. ಅನಾಮಿಕ ವ್ಯಕ್ತಿಗಳು ಹಮ್ಜಾ ಮನೆಯ ಸಮೀಪದಲ್ಲಿಯೇ ದಾಳಿ ಮಾಡಿದ್ದಾರೆ. ಕೂಡಲೇ ಹಮ್ಜಾನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಈತನನ್ನು ಐಎಸ್‌ಐ ಭದ್ರತೆಯಲ್ಲಿ ಲಾಹೋರ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಷ್ಕರ್ ಕಾರ್ಯಕರ್ತ ಹಾಗೂ ಲಷ್ಕರ್‌ನ ಪ್ರಮುಖ ನೇಮಕಾತಿದಾರ ಅಬು ಸೈಫುಲ್ಲಾನನ್ನು ಅಪರಿಚಿತ ಬಂಧೂಕುದಾರಿಗಳು ಹತ್ಯೆಗೈದ ಮೂರು ದಿನದ ನಂತರ ಈ ಘಟನೆ ನಡೆದಿದೆ.
ಈತ ಉಗ್ರ ಹಫೀಜ್ ಮತ್ತು ಅಬ್ದುಲ್ ರೆಹ್ಮಾನ್ ಮಕ್ಕಿ ಆಪ್ತನಾಗಿದ್ದು ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಅದರ 17 ಸಹ ಸಂಸ್ಥಾಪಕರಲ್ಲಿ ಈತನೂ ಒಬ್ಬನಾಗಿದ್ದಾನೆ. ಸಂಘಟನೆಯ ಪ್ರಮುಖ ವಿಚಾರವಾದಿಯಾಗಿ ಹಮ್ಹಾ ಕೆಲಸ ಮಾಡುತ್ತಿದ್ದ. ಜೊತೆಗೆ ಲಷ್ಕರ್ ಪತ್ರಿಕೆಯ ಸಂಪಾದಕನಾಗಿಯು ಕೆಲಸ ಮಾಡಿದ್ದ. ಜೊತೆಗೆ ಹಫೀಜ್ ಅಧ್ಯಕ್ಷತೆಯ ಲಷ್ಕರ್ ವಿಶ್ವವಿದ್ಯಾಲಯದ ಮಂಡಳಿಯಲ್ಲಿಯೂ ಸದಸ್ಯನಾಗಿದ್ದ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ನಿವಾಸಿಯಾಗಿದ್ದ ಮೀರ್ ಹಮ್ಜಾನನ್ನು 2012ರಲ್ಲಿ ಅಮೆರಿಕಾ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಎಷ್ಕರ್ ಎ ತೊಯ್ಬಾದ ಪ್ರಮುಖ ಸಿದ್ಧಾಂತವಾದಿಯಾಗಿದ್ದ ಈತನನ್ನು ಅಫ್ಘಾನ್ ಮುಜಾಹಿದ್ದೀನ್ ಎಂದು ಕರೆಯಲಾಗುತ್ತಿತ್ತು. ಲಷ್ಕರ್‌ನ ಪ್ರಚಾರವನ್ನು ನಿರ್ವಹಿಸುವ ಮೊದಲು ಹಮ್ಜಾ 2000 ದಶಕದ ಆರಂಭದಲ್ಲಿ ಭಾರತದಲ್ಲಿ ಸಕ್ರಿಯ ಭಯೋತ್ಪಾದಕನಾಗಿದ್ದಈ ಆಮೀರ್ ಹಮ್ಜಾ ಹಾಗೂ ಸೈಫುಲ್ಲಾ 2005ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಭವನದ ದಾಳಿಯ ಹಿಂದಿನ ರೂವಾರಿಯಾಗಿದ್ದರು.
ಆಮೀರ್ ಹಮ್ಜಾ ಲಷ್ಕರ್‌ನ ಪ್ರಕಟಣಾ ವಿಭಾಗದ ಮುಖ್ಯಸ್ಥನಾಗಿದ್ದು, ಖಾಫಿಲಾ ದವತ್(ಮತಾಂತರ ಹಾಗೂ ಹುತಾತ್ಮತೆಯ ಕಾರವಾನ್), ಶಹರಾ-ಎ ಬಹಿಷ್ತ್(ಸ್ವರ್ಗಕ್ಕೆ ದಾರಿ) ಮುಂತಾದ ಪುಸ್ತಕಗಳನ್ನು ಬರೆದಿದ್ದಾನೆ.

