fancy number plate: ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಬಹುತೇಕ ವಾಹನಗಳ ಮಾಲೀಕರು ಬಯಸುತ್ತಾರೆ. ಅನೇಕ ಸೆಲೆಬ್ರಿಟಿಗಳು ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ನಂಬರ್ ಪ್ಲೇಟ್ ದುಬಾರಿ ಮೊತ್ತಕ್ಕೆ ಸೇಲ್ ಆಗಿದೆ.
ಇದು ದೇಶದ ಅತೀ ದುಬಾರಿ ನಂಬರ್ ಪ್ಲೇಟ್:
ಫ್ಯಾನ್ಸಿ ನಂಬರ್ ಪ್ಲೇಟ್ ಅದೃಷ್ಟದ ಸಂಖ್ಯೆಯ ನಂಬರ್ ಪ್ಲೇಟ್ ಪಡೆಯುವುದಕ್ಕೆ ಬಹುತೇಕ ವಾಹನಗಳ ಮಾಲೀಕರು ಬಯಸುತ್ತಾರೆ. ಅನೇಕ ಸೆಲೆಬ್ರಿಟಿಗಳು ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಕೆಲವರು ಲಕ್ಷ ಕೋಟಿಯವರೆಗೆ ವೆಚ್ಚ ಮಾಡುತ್ತಾರೆ. ಈ ಸಮಯದಲ್ಲಿ ಒಂದೇ ಸಂಖ್ಯೆಗೆ ಹಲವರು ಬೇಡಿಕೆ ಸಲ್ಲಿಸಿದಾಗ ಹರಾಜು ಕೂಗುವ ಮೂಲಕ ಆ ನಂಬರ್ ಪ್ಲೇಟ್ ನೀಡಲಾಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಫೇವರೀಟ್ ನಂಬರ್ ಪ್ಲೇಟ್‌ಗಾಗಿ ಬರೋಬ್ಬರಿ 45 ಜನ ಪ್ರಯತ್ನಿಸಿದರು ಕಡೆಯದಾಗಿ ಈ ನಂಬರ್ ಪ್ಲೇಟ್ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಸೇಲ್ ಆಗಿದೆ.
ಈ ನಂಬರ್ ಪ್ಲೇಟ್ ಸೇಲ್ ಆಗಿದ್ದು ಎಷ್ಟು ಕೋಟಿಗೆ?
ಹೌದು HR88B8888 ಈ ಸಂಖ್ಯೆಯ ನಂಬರ್ ಪ್ಲೇಟ್ ಪಡೆಯುವುದಕ್ಕೆ 45 ಜನರು ಪೈಪೋಟಿಗೆ ಬಿದ್ದಿದ್ದು, ಕಡೆಗೆ ಈ ನಂಬರ್ ಪ್ಲೇಟ್ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಸೇಲ್ ಆಯ್ತು. ಈ ಮೂಲಕ ಇದು ಭಾರತದ ಅತ್ಯಂತ ದುಬಾರಿ ಕಾರು ರಿಜಿಸ್ಟ್ರೇಷನ್ ಎನಿಸಿದೆ. ಹರ್ಯಾಣದಲ್ಲಿ ಈ ದುಬಾರಿ ನಂಬರ್ ಪ್ಲೇಟ್ ನೋಂದಣಿಯಾಗಿದೆ. ಹರ್ಯಾಣದಲ್ಲಿ ಆರ್‌ಟಿಒ ಪ್ರತಿ ವಾರ ವಿಐಪಿಗಳಿಗಾಗಿ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗಾಗಿ ಆನ್‌ಲೈನ್ ಹರಾಜು ನಡೆಸುತ್ತದೆ. ಅದೇ ರೀತಿ ಕಳೆದ ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳಗ್ಗೆ9 ರವರೆಗೆ, ಬಿಡ್ಡರ್‌ಗಳು ತಮ್ಮ ಆಯ್ಕೆಯ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದಿತ್ತು. ಇದಾದ ನಂತರ ಬುಧವಾರ ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತದೆ. ಅಧಿಕೃತ ವೆಬ್‌ಸೈಟ್ fancy.parivahan.gov.in ಪೋರ್ಟಲ್‌ನಲ್ಲಿ ಈ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ.
ಇದನ್ನೂ ಓದಿ: ಚೀನಾದ 9 ಗಗನಚುಂಬಿ ವಸತಿ ಸಂಕೀರ್ಣದಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ: 13 ಜನ ಸಜೀವ ದಹನ
ಈ ವಾರ, ಬಿಡ್ಡಿಂಗ್‌ಗೆ ಸಿದ್ಧವಾಗಿದ್ದ ಒಟ್ಟು ಸಂಖ್ಯೆಗಳಲ್ಲಿ, HR88B8888' ನೋಂದಣಿ ಸಂಖ್ಯೆಗೆ ಅತಿ ಹೆಚ್ಚು ಅರ್ಜಿಗಳು ಬಂದಿದ್ದವು ಒಟ್ಟು 45ಜನ ಈ ನಂಬರ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಂಬರ್‌ಗೆ ಮೂಲ ಹರಾಜು ಬೆಲೆಯನ್ನು 50,000 ರೂ. ಗೆ ನಿಗದಿಪಡಿಸಲಾಗಿತ್ತು. ಇದು ಪ್ರತಿ ನಿಮಿಷ ಕಳೆದಂತೆ ಹೆಚ್ಚುತ್ತಲೇ ಇತ್ತು ಹಾಗೂ ಸಂಜೆ 5 ಗಂಟೆಗೆಲ್ಲಾ ಇದು 1.17 ಕೋಟಿ ರೂ.ಗಳಿಗೆ ಕೊನೆಯದಾಗಿ ಹರಾಜಾಯ್ತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಈ ನಂಬರ್‌ಗೆ ಬಿಡ್ಡಿಂಗ್ ಬೆಲೆ 88 ಲಕ್ಷ ರೂ.ಗಳಷ್ಟಿತ್ತು. ಆದರೆ ಸಂಜೆಯ ವೇಳೆಗೆ ಕೋಟಿಗೆ ತಲುಪಿದೆ. ಕಳೆದ ವಾರ HR22W222 ನೋಂದಣಿ ಸಂಖ್ಯೆಯೂ 37.91 ಲಕ್ಷ ರೂ.ಗಳಿಗೆ ಸೇಲ್ ಆಗಿತ್ತು..
HR88B8888ಯ ವಿಶೇಷತೆ ಏನು?
HR88B8888 ಬಿಡ್ಡಿಂಗ್ ಮೂಲಕ ಪ್ರೀಮಿಯಂನಲ್ಲಿ ಖರೀದಿಸಿದ ವಿಶಿಷ್ಟ ವಾಹನ ಸಂಖ್ಯೆ ಅಥವಾ VIP ಸಂಖ್ಯೆಯಾಗಿದೆ. HR ಎಂಬುದು ರಾಜ್ಯದ ಸಂಕೇತವಾಗಿದ್ದು, ವಾಹನವು ಹರಿಯಾಣದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. 88 ವಾಹನವನ್ನು ನೋಂದಾಯಿಸಿರುವ ಹರಿಯಾಣದ ನಿರ್ದಿಷ್ಟ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಥವಾ ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ನಿರ್ದಿಷ್ಟ RTO ಒಳಗೆ ವಾಹನ ಸರಣಿ ಕೋಡ್ ಅನ್ನು ಸೂಚಿಸಲು B ಅನ್ನು ಬಳಸಲಾಗುತ್ತದೆ. 8888 ಎಂಬುದು ವಾಹನಕ್ಕೆ ನಿಯೋಜಿಸಲಾದ ವಿಶಿಷ್ಟ, ನಾಲ್ಕು ಅಂಕಿಯ ನೋಂದಣಿ ಸಂಖ್ಯೆಯಾಗಿದೆ. ಈ ನಂಬರ್ ಪ್ಲೇಟ್ ವಿಶೇಷವೆಂದರೆ 'B'ಅನ್ನು ದೊಡ್ಡಕ್ಷರದಲ್ಲಿ ಬರೆದರೆ ಎಂಟುಗಳ ಸರಮಾಲೆಯಂತೆ ಕಾಣುತ್ತದೆ ಮತ್ತು ಒಂದೇ ಒಂದು ಅಂಕೆ ಪುನರಾವರ್ತನೆಯಾಗುತ್ತದೆ.
46 ಲಕ್ಷ ರೂಪಾಯಿ ಮೌಲ್ಯದ ನಂಬರ್ ಪ್ಲೇಟ್ ಖರೀದಿಸಿದ್ದ ಕೇರಳದ ವ್ಯಕ್ತಿ
ಈ ಹಿಂದೆ ಏಪ್ರಿಲ್‌ನಲ್ಲಿ, ಕೇರಳದ ಟೆಕ್ ಬಿಲಿಯನೇರ್ ವೇಣು ಗೋಪಾಲಕೃಷ್ಣನ್ ಅವರು ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್‌ಗಾಗಿ KL 07 DG 0007 ಎಂಬ ವಿಐಪಿ ಫಲಕವನ್ನು 45.99 ಲಕ್ಷ ರೂ.ಗಳಿಗೆ ಖರೀದಿಸಿದ್ದರು.
ಇದನ್ನೂ ಓದಿ: ಮಾಜಿ ಗೆಳತಿಯಿಂದ ರೇಪ್ ಕೇಸ್: ಚೇತೇಶ್ವರ್ ಪೂಜಾರ್ ಭಾಮೈದ ಸಾವಿಗೆ ಶರಣು


