ಲಿಫ್ಟ್‌ನಲ್ಲಿ ಮಹಿಳಾ ಉದ್ಯೋಗಿಯನ್ನು ಲೈ0ಗಿಕವಾಗಿ ಬಳಸಿಕೊಂಡ ಆರೋಪದಿಂದ ರಿಲೀಫ್ ಪಡೆದಿದ್ದ ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆಯಾಗಿದ್ದು ಹೇಗೆ? ಏನಿದು ಉದ್ಯೋಗಿ ಪ್ರಕರಣ?
ಮುಂಬೈ (ಆ.06) ತೆಹಲ್ಕಾ ಸುದ್ದಿ ಸಂಸ್ಥೆಯನ್ನು ಹುಟ್ಟುಹಾಕಿದ ತರುಣ್ ತೇಜ್‌ಪಾಲ್‌ಗೆ ಬಾಂಬೈ ಹೈಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್‌ನಿಂದಲೇ ರಿಲೀಫ್ ಪಡೆದಿದ್ದ ತರುಣ್ ತೇಜ್‌ಪಾಲ್‌ಗೆ ಹೈಕೋರ್ಟ್ ಇದೀಗ ಕಠಿಣ ಶಿಕ್ಷೆ ವಿಧಿಸಿದೆ. ತೆಹಲ್ಕಾ ಪತ್ರಿಕೆ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಮಹಿಳಾ ಉದ್ಯೋಗಿ ಮೇಲಿನ ಲೈ0ಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ 10 ವರ್ಷ ಜೈಲು ಶಿಕ್ಷೆ ನೀಡಿದೆ.
2021ರಲಲಿ ಗೋವಾದ ವಿಚಾರಣಾ ನ್ಯಾಯಾಲಯ ತರುಣ್ ತೇಜ್‌ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು. ಈ ತೀರ್ಪಿನ ವಿರುದ್ದ ಗೋವಾ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲದ ತೀರ್ಪು ದೋಷಪೂರಿತ ಎಂದ ಹೈಕೋರ್ಟ್, ತರುಣ್ ತೇಜಪಾಲ್ ತಪ್ಪಿತಸ್ಥ ಎಂದು 10 ವರ್ಷ ಜೈಲು ಶಿಕ್ಷೆ ವಿಧಿಸಿತು.
ಏನಿದು ಪ್ರಕರಣ?
2013ರ ವೇಳೆ ತೆಹಲ್ಕಾ ನಿಯತಕಾಲಿಕೆ ಸುದ್ದಿ ಮಾಧ್ಯಮವಾಗಿ ಭಾರಿ ಜನಪ್ರಿಯತೆ ಪಡೆದಿತ್ತು. ತೆಹಲ್ಕಾ ಹಲವು ಕಾರ್ಯಕ್ರಮಗಳನ್ನು ದೇಶದ ವಿವಿದೆಡೆ ಆಯೋಜಿಸಿತ್ತು. ಹೀಗೆ 2013ರ ನವೆಂಬರ್ ತಿಂಗಳಲ್ಲಿ ಗೋವಾದಲ್ಲಿ ತೆಹಲ್ಕಾ ಸಂಸ್ಥಖೆ ಥಿಂಕ್ ಫೆಸ್ಟ್ ಕಾರ್ಯಕ್ರಮ ಆಯೋಜಿಸಿತ್ತು. ಗೋವಾದ ಐಷಾರಾಮಿ ಹೊಟೆಲ್‌ನಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದ ನಡುವೆ ತರಣ್ ತೇಜಪಾಲ್ ಹೊಟೆಲ್‌ನ ಲಿಫ್ಟ್‌ನಲ್ಲಿ ಮಹಿಳಾ ಸಹೋದ್ಯೋಗಿ ಹಾಗೂ ಪತ್ರಕರ್ತೆ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಯವ ಮಹಿಳಾ ಪತ್ರಕರ್ತೆ ಗೋವಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ದೂರು ಆಧಿರಿಸಿ ತರುಣ್ ತೇಜಪಾಲ್ ಮೇಲೆ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್ 30, 2013ರಲ್ಲಿ ತೇಜಪಾಲ್ ಅರೆಸ್ಟ್ ಮಾಡಲಾಗಿತ್ತು. ಈ ಬಂಧನ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಪರ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಜಾಮೀನು ಮೂಲಕ ತೇಜ್‌ಪಾಲ್ ಹೊರಬಂದಿದ್ದರು.
ಗೋವಾದ ವಿಚಾರಣಾ ನ್ಯಾಯಾಲಯ ತರುಣ್ ತೇಜಪಾಲ್ ಮೇಲಿನ ಆರೋಪ ಖುಲಾಸೆಗೊಳಿಸಿತ್ತು. ಇದರಿಂಗ ಬಿಗ್ ರಿಲೀಫ್ ಪಡೆದಿದ್ದ ತರಣ್ ತೇಜಪಾಲ್‌ಗೆ ಇದೀಗ ಬಾಂಬೆ ಹೈಕೋರ್ಟ್ ಶಾಕ್ ನೀಡಿದೆ. ಗೋವಾ ಮೇಲ್ಮನವಿ ಪುರಸ್ಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್, ತರುಣ್ ತೇಜಪಾಲ್ ಎಸಗಿರುವ ದೌರ್ಜನ್ಯ ಸಾಬೀತಾಗಿದೆ. ತರುಣ್ ತೇಜಪಾಲ್ ದೋಷಿ ಎಂದು ತೀರ್ಪು ನೀಡಿದೆ.


