ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಲಸಿಕೆ ನೀಡಲು ಏಮ್ಸ್ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ಸಜ್ಜಾಗಿದ್ದರು. ದಿಢೀರ್ ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆ ಆಗಮಿಸಿದ್ದಾರೆ. ಪ್ರಧಾನಿ ಆಗಮನದಿಂದ ನರ್ಸ್‌ಗಳು ಕೊಂಚ ಗಲಿಬಿಲಿಗೊಂಡಿದ್ದರು. ಪರಿಸ್ಥಿತಿ ಹಗುರಗೊಳಿಸಲು ಮೋದಿ ದಪ್ಪದ ಚರ್ಮದ ರಾಜಕಾರಣಿಗಳ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಲಸಿಕೆ ನೀಡುವ ವೇಳೆ ಮೋದಿ ಹಾಗೂ ನರ್ಸ್ ನಡುವೆ ನಡೆದ ಸಂಪೂರ್ಣ ಸಂಭಾಷಣೆ ಇಲ್ಲಿದೆ.

How PM Modi used humour to lighten up atmosphere during COVID vaccination ckm

ನವದೆಹಲಿ(ಮಾ.01): ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧ ಲಸಿಕೆ ಪ್ರಯೋಗ 3ನೇ ಹಂತ ತಲುಪಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಲಸಿಕೆ ನೀಡಿವಿಕೆ ಇಂದಿನಿಂದ ಆರಂಭಗೊಂಡಿದೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಏಮ್ಸ್ ಆಸ್ಪತ್ರೆಗೆ ತೆರಳಿ ಕೋವ್ಯಾಕ್ಸಿನ್ ಲಸಿಕೆ ಮೊದಲ ಡೋಸ್ ಪಡೆದುಕೊಂಡರು. ಈ ವೇಳೆ ಮೋದಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ನಡುವಿನ ಸಂಭಾಷಣೆ ವಿವರ ಬಹಿರಂಗವಾಗಿದೆ.

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ಏಮ್ಸ್‌ನಲ್ಲಿ ಲಸಿಕೆ ಪಡೆದ ಮೋದಿ

ಇಂದು ಮುಂಜಾನೆ ಪ್ರಧಾನಿ ಮೋದಿ ಲಸಿಕೆ ಪಡೆಯಲು ದೆಹಲಿಯ ಏಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ದೇಶದ ಪ್ರಧಾನಿಯನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ, ನರ್ಸ್ ಕೊಂಚ ಗಲಿಬಿಲಿ ಗೊಂಡಿದ್ದಾರೆ.  ಇದನ್ನು ಅರ್ಥ ಮಾಡಿಕೊಂಡು ನರೇಂದ್ರ ಮೋದಿ, ಪರಿಸ್ಥಿತಿಯನ್ನು ಹಗುರಗೊಳಿಸಲು ರಾಜಕಾರಣಿಗಳ ದಪ್ಪ ಚರ್ಮದ ಹಾಸ್ಯ ಚಟಾಕಿ ಹಾರಿಸಿದರು.

ಏಮ್ಸ್ ಸಿಬ್ಬಂದಿಗಳು ಗಾಬರಿಗೊಂಡಿರುವುದನ್ನು ಗಮನಿಸಿದ ಮೋದಿ, ನರ್ಸ್‌ ಜೊತೆ ಸಂಭಾಷಣೆ ನಡೆಸಿದ್ದಾರೆ. ಎಲ್ಲರ ಹೆಸರು, ಅವರ ಊರುಗಳ ವಿವರಗಳನ್ನು ಕೇಳಿದ್ದಾರೆ.  ಇದರಿಂದ ಗಲಿಬಿಲಿ ಮಾತಾವರಣ ತಿಳಿಗೊಂಡಂತೆ ಕಾಣಿಸಲಿಲ್ಲ.  ಹೀಗಾಗಿ ಲಸಿಕೆಗೆ ಪಶುವೈದ್ಯರು ಬಳಸುವ ದಪ್ಪ ಸೂಜಿಯನ್ನು ಬಳುಸುತ್ತೀರಾ ಎಂದು ಮೋದಿ ಪ್ರಶ್ನಿಸಿದ್ದಾರೆ.

ಹಿರಿಯ ನಾಗರೀಕರಿಗೆ ಕೋವಿಡ್ ಚುಚ್ಚುಮದ್ದು ಮಾರ್ಗದರ್ಶಿ!.

ಇಲ್ಲ ಎಂದು ಉತ್ತರ ನೀಡಿದ ನರ್ಸ್‌ಗಳಿಗೆ ಪ್ರಶ್ನೆ ಯಾಕೆ ಕೇಳಿದ್ದಾರೆ ಅನ್ನೋದು ಅರ್ಥವಾಗಲಿಲ್ಲ.  ರಾಜಕಾರಣಿಗಳು ದಪ್ಪ ಚರ್ಮದವರು ಎಂದೇ ಗುರುತಿಸಿಕೊಂಡಿದ್ದಾರೆ.  ಹೀಗಾಗಿ ನರ್ಸ್ ರಾಜಕಾರಣಿಗಳಿಗೆ ಲಸಿಕೆ ನೀಡಲು ವಿಶೇಷ ದಪ್ಪ ಸೂಜಿಯನ್ನು ಬಳಲು ಯೋಚಿಸುತ್ತಿದ್ದಾರೆ ಎಂದು ಮೋದಿ ತಮ್ಮ ಪ್ರಶ್ನೆ ಕುರಿತು ವಿವರಣೆ ನೀಡಿದ್ದಾರೆ. 

 

ಮೋದಿ ಮಾತಿಗೆ ನರ್ಸ್ ಹಾಗೂ ಸಿಬ್ಬಂದಿಗಳಿಗೆ ನಗು ತಡೆಯಲಾಗಲಿಲ್ಲ. ಇಷ್ಟೇ ಅಲ್ಲ ಗಲಿಬಿಲಿಗೊಂಡಿದ್ದ ಪರಿಸ್ಥಿತಿ ತಿಳಿಗೊಂಡಿದೆ.  ಲಸಿಕೆ ನೀಡುವಿಕೆ ಪ್ರಕ್ರಿಯೆ ಮುಗಿದಿದೆ ಎಂದು ನರ್ಸ್ ಹೇಳಿದಾಗ, ಯಾವಾಗ ನೀಡಿದ್ದೀರಿ ಎಂದೇ ಗೊತ್ತಾಗಲಿಲ್ಲ ಎಂದು ಮೋದಿ ಹೇಳಿದ್ದಾರೆ.  ಇದೀಗ ಮೋದಿ ಹಾಗೂ ನರ್ಸ್‌ ನಡುವಿನ ಸಂಭಾಷಣೆ ಭಾರಿ ಸದ್ದು ಮಾಡುತ್ತಿದೆ.

Latest Videos
Follow Us:
Download App:
  • android
  • ios