ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ 10 ದಿನದಲ್ಲಿ ಎಷ್ಟು ಹಣ ಗಳಿಸಿದ್ದಾರೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಈ ಬಗ್ಗೆ ಕುಂಭಮೇಳ ಸುಂದರಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಮಹಾಕುಂಭ ಮೇಳದ ಸುಂದರಿ ಮೊನಾಲಿಸಾ ಇಡೀ ದೇಶದ ತುಂಬೆಲ್ಲಾ ಸದ್ದು ಮಾಡಿದ್ದಾರೆ. ರುದ್ರಾಕ್ಷಿ ಮತ್ತು ಮುತ್ತಿನ ಹಾರಗಳನ್ನು ಮಾರಾಟ ಮಾಡಲು ಬಂದಿದ್ದ, ಇಂದೋರ್ ಮೂಲದ ಮೊನಾಲಿಸಾ ಮಾಡೆಲ್ ಆಗುತ್ತಿದ್ದಾರೆ ಎಂದು ವರದಿಗಳು ಸಹ ಪ್ರಕಟವಾಗುತ್ತಿವೆ. ಅಷ್ಟು ಮಾತ್ರವಲ್ಲ ಮೊನಾಲಿಸಾ ಕುರಿತ ಸುದ್ದಿಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ 10 ದಿನ ಕುಂಭಮೇಳದಲ್ಲಿದ್ದ ಮೊನಾಲಿಸಾ ಸಂಪಾದಿಸಿದ ಹಣವೆಷ್ಟು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೊನಾಲಿಸಾ ತಾನು ಧರಿಸಿದ್ದ ಶ್ವೇತ ವರ್ಣದ ಮುತ್ತುಗಳ ಹಾರದ ಬೆಲೆ 11 ಸಾವಿರ ರೂಪಾಯಿ ಎಂದು ಹೇಳಿದ್ದಳು. ಆದ್ರೆ ಯುಟ್ಯೂಬರ್, ವ್ಲಾಗರ್‌ಗಳು ಮೊನಾಲಿಸಾ ಹಿಂದೆಯೇ ಬಿದ್ದಿದ್ದರಿಂದ ವ್ಯಾಪಾರ ಮೊಟಕುಗೊಳಿಸಿ ಇಂದೋರ್‌ಗೆ ಹಿಂದಿರುಗಿದ್ದರು. ಕುಂಭಮೇಳದ ಸುಂದರಿ 10 ದಿನದಲ್ಲಿ 10 ಕೋಟಿ ರೂಪಾಯಿ ಸಂಪಾದಿಸಿದ್ದಾಳೆ ಎಂಬ ಬರಹವುಳ್ಳ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ಬಗ್ಗೆ ಮೊನಾಲಿಸಾ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್
ಮೊನಾಲಿಸಾ ಹೇಳಿದ್ದೇನು?
ಒಂದು ವೇಳೆ ಇಷ್ಟೊಂದು ಹಣ ಸಂಪಾದಿಸಿದ್ರೆ ನಾನೇಕೆ ಹೀಗೆ ಇರುತ್ತಿದ್ದೆ. ವೈರಲ್ ಆಗಿರುವ ಪೋಸ್ಟ್ ಸತ್ಯಕ್ಕೆ ದೂರವಾದದ್ದು ಎಂದು ಮೊನಾಲಿಸಾ ಹೇಳಿದ್ದಾರೆ. ಇಂದೋರ್ ನಗರದ ನಿವಾಸಿಯಾಗಿರುವ ಮೊನಾಲಿಸಾ, ಕುಟುಂಬಸ್ಥರೊಂದಿಗೆ ರುದ್ರಾಕ್ಷಿ, ಮುತ್ತಿನ ಮಾಲೆಗಳನ್ನು ಮಾರಾಟ ಮಾಡಲು ಬಂದಿದ್ದರು. ಎಲ್ಲರ ಸೆಳೆಯುವ ಅತ್ಯಾಕರ್ಷಕ ಕಣ್ಣುಗಳನ್ನು ಹೊಂದಿರುವ ಮೊನಾಲಿಸಾ ಕೆಲವ ದಿನಗಳಲ್ಲಿ ದೇಶದ ಮನೆಮಾತರಾದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ಮೊನಾಲಿಸಾ ನೋಡಲು ಜನರು ಸುತ್ತುವರಿಯಲು ಆರಂಭಿಸಿದ್ದರಿಂದ ಪೋಷಕರು ಮಗಳನ್ನು ಮನೆಗೆ ಕರೆಸಿಕೊಂಡಿದ್ದರು.
ಮಹಾಕುಂಭಮೇಳಕ್ಕೆ ಆಗಮಿಸಿದ್ದ ಯುಟ್ಯೂಬರ್‌ಗಳಿಂದ ಹಿಡಿದು ಸಾಮಾನ್ಯ ಜನರು ಸಹ ಮೊನಾಲಿಸಾ ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಇದರಿಂದ ಮೊನಾಲಿಸಾ ವ್ಯಾಪಾರದ ಮೇಲೆ ನಕರಾತ್ಮಕ ಪರಿಣಾಮ ಬೀರಿತ್ತು. ನನ್ನನ್ನು ಕೆಲವರು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರು ಎಂಬ ಗಂಭೀರ ಆರೋಪವನ್ನು ಮೊನಾಲಿಸಾ ಮಾಡಿದ್ದರು. ಮೊನಾಲಿಸಾ ಕಣ್ಣುಗಳು ಮತ್ತು ಸರಳತೆ ಜನರ ಹೃದಯವನ್ನು ಗೆದ್ದಿದೆ. ಮಹಾಕುಂಭದಲ್ಲಿ ವೈರಲ್ ಆದ ಮೊನಾಲಿಸಾ ಬಗ್ಗೆ ತಿಳಿಯಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ. ಜನರು ಮೊನಾಲಿಸಾ ಕುರಿತು ವಿವಿಧ ರೀತಿಯ ಮಾಹಿತಿಗಾಗಿ ಹುಡುಕುತ್ತಿದ್ದಾರೆ.
ಇದನ್ನೂ ಓದಿ: ಸಹಜ ಸುಂದರಿ ಅಂತ ಹೊಗಳ್ತಾ ಇದ್ರೆ ಆ ಪೆದ್ದು ಹೋಗಿ ಬ್ಯೂಟಿ ಪಾರ್ಲರ್‌ನಲ್ಲಿ ಕುಂತೈತೆ!
