ಬರೋಬರಿ ದಂಡ ಸಂಗ್ರಹಿಸಿದ ಕೇರಳ ಸರ್ಕಾರ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದವರಿಂದ ದಂಡ ವಸೂಲಿ ಇದುವರೆಗೆ ಸಂಗ್ರಹಿಸಿದ ದಂಡ ಎಷ್ಟು ಕೋಟಿ ಗೊತ್ತೆ?
ತಿರುವನಂತಪುರ(ಮಾ.24): ಕೇರಳ ರಾಜ್ಯ ಸರ್ಕಾರ ಇದುವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ ವಸೂಲಿ ಮಾಡಿದ ದಂಡವೆಷ್ಟು ಗೊತ್ತೆ. ಕೇವಲ ಒಂದೆರಡು ಕೋಟಿ ಅಲ್ಲ, ಬರೋಬರಿ 350 ಕೋಟಿ ರೂಪಾಯಿಗಳು. ಹೌದು ಕೇರಳ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು 3.30 ಕೋಟಿ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡನೆಗೆ ಒಳಗಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್ ನಿರ್ಬಂಧಗಳನ್ನು ವಿಧಿಸಿದಾಗಿನಿಂದ ಇದುವರೆಗೆ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ ಜನರಿಗೆ ದಂಡ ವಿಧಿಸುವ ಮೂಲಕ ಕೇರಳ ಸರ್ಕಾರವು ಒಟ್ಟು 350 ಕೋಟಿ ರೂಪಾಯಿಗಳನ್ನು ಗಳಿಸಿದೆ.
ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 3.30 ಕೋಟಿ ಜನಸಂಖ್ಯೆಯ ಸರಿ ಸುಮಾರು ಐದನೇ ಒಂದು ಭಾಗದಷ್ಟು ಜನರಿಗೆ ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದವರಿಂದ ಗರಿಷ್ಠ ದಂಡ ವಸೂಲಿ ಮಾಡಲಾಗಿದ್ದು, 42.74 ಲಕ್ಷ ಜನರಿಂದ ಒಟ್ಟು 214 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ಸರಿಯಾದ ಕಾರಣವಿಲ್ಲದೆ ಹೊರಗೆ ಸುತ್ತಾಡಿದವರಿಂದ ವಸೂಲಿ ಮಾಡಲಾಗಿದೆ. ಏತನ್ಮಧ್ಯೆ, ಬುಧವಾರ (ಮಾರ್ಚ್ 23) ಕೇರಳದಲ್ಲಿ 702 ಹೊಸ ಕೋವಿಡ್ ಸೋಂಕುಗಳು ದಾಖಲಾಗಿವೆ. ಇದು ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು 65,29,093 ಕ್ಕೆ ಏರಿಸಿದೆ. ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ದಕ್ಷಿಣ ಭಾರತದ ಈ ರಾಜ್ಯವು ಕೋವಿಡ್‌ನಿಂದಾಗಿ 61 ಸಾವುಗಳನ್ನು ವರದಿ ಮಾಡಿದೆ, ಇದು ಸಾವಿನ ಸಂಖ್ಯೆಯನ್ನು 67,476 ಕ್ಕೆ ಏರಿಸಿದೆ.
ಟ್ರಾಫಿಕ್ ರೂಲ್ಸ್: ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು
ಕಳೆದ 24 ಗಂಟೆಗಳಲ್ಲಿ ಎರಡು, ಕಳೆದ ಕೆಲವು ದಿನಗಳಲ್ಲಿ ಆರು ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ದಾಖಲೆಗಳ ತಡವಾದ ಸ್ವೀಕೃತಿಯಿಂದಾಗಿ ದಾಖಲಿಸಲಾಗಿಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಕೇಂದ್ರದ ಹೊಸ ಮಾರ್ಗಸೂಚಿಗಳ ಆಧಾರದ ಮೇಲೆ ಮೇಲ್ಮನವಿಗಳನ್ನು ಸ್ವೀಕರಿಸಿದ ನಂತರ 53 ಜನ ಕೋವಿಡ್ 19 ನಿಂದ ಬಲಿಯಾಗಿದ್ದಾಗಿ ಗೊತ್ತುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳವಾರದಿಂದ 903 ಜನರು ಕೋವಿಡ್ ವೈರಸ್‌ನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆ 64,55,655 ಕ್ಕೆ ತಲುಪಿದೆ ಮತ್ತು ಸಕ್ರಿಯ ಪ್ರಕರಣಗಳು 5,091 ಕ್ಕೆ ಇಳಿದಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 23,238 ಮಾದರಿಗಳನ್ನು ಪರೀಕ್ಷಿಸಲಾಗಿದೆ. 14 ಜಿಲ್ಲೆಗಳ ಪೈಕಿ ಎರ್ನಾಕುಲಂನಲ್ಲಿ 155 ಪ್ರಕರಣಗಳು ದಾಖಲಾಗಿದ್ದು, ತಿರುವನಂತಪುರಂನಲ್ಲಿ (Thiruvananthapuram ) 81 ಮತ್ತು ಕೊಟ್ಟಾಯಂನಲ್ಲಿ (Kottayam) 71 ಪ್ರಕರಣ ದಾಖಲಾಗಿದ್ದು ನಂತರದ ಸ್ಥಾನದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.
Bengaluru Traffic Police: ಹಳೆ ಬಾಕಿ ವಸೂಲಿಗೆ RTO ಕಚೇರಿ ಬಳಿ ಪೊಲೀಸರ ಠಿಕಾಣಿ
ಹೊಸ ಪ್ರಕರಣಗಳಲ್ಲಿ, ಒಂದು ಆರೋಗ್ಯ ಕಾರ್ಯಕರ್ತರದ್ದು, ನಾಲ್ವರು ರಾಜ್ಯದ ಹೊರಗಿನವರು ಮತ್ತು 669 ಸೋಂಕಿತರು ಮೂಲದೊಂದಿಗೆ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ಅವರ ಮೂಲವು 28 ಪ್ರಕರಣಗಳಲ್ಲಿ ಸ್ಪಷ್ಟವಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ. ವಿವಿಧ ಜಿಲ್ಲೆಗಳಲ್ಲಿ ಈಗ 16,540 ಜನರು ನಿಗಾದಲ್ಲಿದ್ದಾರೆ ಮತ್ತು ಅವರಲ್ಲಿ 500 ಜನರು ಆಸ್ಪತ್ರೆಗಳಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಬೆಂಗಳೂರು ಮಹಾ ನಗರ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಗಳಿಂದ ಒಟ್ಟು 9.58 ಕೋಟಿ ರು.ಗಳಿಗೂ ಅಧಿಕ ದಂಡ ವಸೂಲಿ ಮಾಡಿತ್ತು.
