2016ರಲ್ಲಿ ಚಂಡೀಗಢದಿಂದ ಅಪಹರಣಕ್ಕೊಳಗಾದ ವಿವೇಕ್ ಕುಮಾರ್ ಎಂಬ ಬಾಲಕ, ಎಂಟು ವರ್ಷಗಳ ನಂತರ ಉತ್ತರ ಪ್ರದೇಶದ ಮದರಸಾವೊಂದರಲ್ಲಿ ಪತ್ತೆಯಾಗುತ್ತಾನೆ. ಈ ಅವಧಿಯಲ್ಲಿ ಅವನನ್ನು ಮೊಹಮ್ಮದ್ ಉಮರ್ ಎಂದು ಮತಾಂತರಿಸಿ, ಭಯೋತ್ಪಾದಕ ತರಬೇತಿ ನೀಡಲಾಗಿತ್ತು. ನಕಲಿ ಆಧಾರ್ ಕಾರ್ಡ್ ಮಾಡಲು ಹೋದಾಗ ಬಯೋಮೆಟ್ರಿಕ್‌ನಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.

ಅದು 2016ರ ಘಟನೆ. ಚಂಡೀಗಢದ ನಿವಾಸಿ, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೀರೇಂದ್ರ ಕುಮಾರ್​ ಎನ್ನುವವರ 3ನೇ ಕ್ಲಾಸ್​ನಲ್ಲಿ ಓದುತ್ತಿರುವ ಪುತ್ರ ವಿವೇಕ್​ ಕುಮಾರ್​ ಶಾಲೆಗೆ ಹೋದವ ವಾಪಸ್​ ಆಗಿಲೇ ಇಲ್ಲ. ಅವನನ್ನು ಶಾಲೆಯಿಂದಲೇ ಕಿಡ್​ನ್ಯಾಪ್​ ಕರೆದುಕೊಂಡು ಹೋಗಲಾಯಿತು. ಎಲ್ಲಿ ಹುಡುಕಿದರೂ ಪಾಲಕರಿಗೆ ಆತ ಸಿಗಲೇ ಇಲ್ಲ. ಅವನ ತಂದೆ ವೀರೇಂದ್ರ ಕುಮಾರ್ ಅವನನ್ನು ಎಲ್ಲೆಡೆ ಹುಡುಕಿದರು. ಅವನು ಮತ್ತೆ ಮತ್ತೆ ಪೊಲೀಸ್ ಠಾಣೆಗೆ ಹೋದನು. ವಿವೇಕ್‌ನ ಸ್ನೇಹಿತರನ್ನು ಏನಾದರೂ ತಿಳಿದಿದೆಯೇ ಎಂದು ಕೇಳಿದರು. ಎಲ್ಲಿಯೂ ಸುಳಿವು ಸಿಗಲಿಲ್ಲ. ಆದರೆ ಮಗುವಿನ ಯಾವುದೇ ಕುರುಹು ಇರಲಿಲ್ಲ. ವರ್ಷಗಳು ಕಳೆದವು. ಕುಟುಂಬ ನಿಧಾನವಾಗಿ ಭರವಸೆ ಕಳೆದುಕೊಳ್ಳಲು ಪ್ರಾರಂಭಿಸಿತು. ಪೊಲೀಸರೂ ಒಂದು ಹಂತದಲ್ಲಿ ಕೈಚೆಲ್ಲಿದರು.

Add Asianetnews Kannada as a Preferred SourcegooglePreferred

ನಂತರ, ಅಕ್ಟೋಬರ್ 2023 ರಲ್ಲಿ ಒಂದು ದಿನ, ವೀರೇಂದ್ರ ಕುಮಾರ್​ ಅವರಿಗೆ ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿರುವ ಪೊಲೀಸ್ ಠಾಣೆಯಿಂದ ಫೋನ್ ಕರೆ ಬಂದಿತು. ಅಲ್ಲಿಂದ ಪೊಲೀಸ್​ ಅಧಿಕಾರಿಯು "ನಿಮಗೆ ವಿವೇಕ್ ಎಂಬ ಮಗನಿದ್ದಾನೆಯೇ" ಎಂದು ಕೇಳಿದರು. ಇಷ್ಟು ವರ್ಷಗಳ ಬಳಿಕ ಮಗನ ಬಗ್ಗೆ ಪೊಲೀಸರೊಬ್ಬರಿಂದ ಫೋನ್​ ಬಂದಾಗ ಆ ತಂದೆಯ ಸ್ಥಿತಿ ಹೇಗಾಗಬೇಡ, ಯಾರೂ ಊಹಿಸಿಕೊಳ್ಳಲು ಆಗದ ಕ್ಷಣ ಅದು. ತನ್ನ ಮಗ ಸಿಕ್ಕನೆ, ಏನಾದ? ಬದುಕಿದ್ದಾನೆಯೋ, ಹೆಣವಾಗಿದ್ದಾನೋ... ಆ ಕ್ಷಣದಲ್ಲಿ ಆ ಒಂದು ಫೋನ್​ ಕಾಲ್​ನಿಂದ ತತ್ತರಿಸಿಹೋದರು ಅಪ್ಪ. ನಡುಗುತ್ತಲೇ ಹೌದು ಏನಾಯ್ತು ಎಂದು ಕೇಳಿದಾಗ, ನಿಮ್ಮ ಮಗ ವಿವೇಕ್​ ಜೀವಂತವಾಗಿದ್ದಾನೆ, ನಮಗೆ ಸಿಕ್ಕಿದ್ದಾನೆ ಎಂದಾಗ ತಂದೆ ಅರೆಕ್ಷಣ ಮೌನಕ್ಕೆ ಜಾರಿಬಿಟ್ಟರು. ಏನೂ ಹೇಳಲಾಗದ ಸ್ಥಿತಿ ಅದು.

ಬದಲಾಗಿದ್ದ ವಿವೇಕ್​

ಕೊನೆಗೆ ಕೂಡಲೇ 500 ಕಿಲೋ ಮೀಟರ್​ ದೂರ ಇರುವ ಪೊಲೀಸ್​ ಠಾಣೆಗೆ ಹೋಗಿ ಎಂಟು ವರ್ಷಗಳ ಬಳಿಕ 17 ವರ್ಷದವನಾದ ತಮ್ಮ ಮಗನನ್ನು ಕಂಡು ಆ ಕಣ್ಣುಗಳೇ ನಂಬದಾದವು. ಆದರೆ ಆಗ ಆತ ವಿವೇಕ್​ ಕುಮಾರ್​ ಆಗಿರಲಿಲ್ಲ. ಬದಲಿಗೆ ಮೊಹಮ್ಮದ್ ಉಮರ್ ಆಗಿದ್ದ. ಮದರಸಾ ವಿದ್ಯಾರ್ಥಿಯಾಗಿದ್ದ ಆತ ಅದಾಗಲೇ ಭಯೋತ್ಪಾದನಾ ಕೃತ್ಯದಲ್ಲಿ ತರಬೇತಿ ಪಡೆದಿದ್ದ. ಮದರಸಾದಲ್ಲಿ, ವಿವೇಕ್ ನಿಗೆ ಸುನ್ನತಿ ಮಾಡಲಾಗಿತ್ತು. ಮತಾಂತರದ ಬಳಿಕ ಗೋಮಾಂಸವನ್ನು ಒತ್ತಾಯವಾಗಿ ತಿನ್ನಿಸಲಾಗಿತ್ತು. ಮೊಹಮ್ಮದ್ ಉಮರ್ ಎಂದು ಮರುನಾಮಕರಣ ಮಾಡಿದ ಬಳಿಕ ಉಗ್ರ ಚಟುವಟಿಕೆಯ ಟ್ರೈನಿಂಗ್​ ಕೊಡಲು ಶುರು ಮಾಡಲಾಗಿತ್ತು!

ಆಧಾರ್​ ಕಾರ್ಡ್​ನಿಂದ ಪ್ರಕರಣ ಬಯಲು

ಬಳಿಕ, ಆತನನ್ನು ಗಲ್ಫ್​ ದೇಶಕ್ಕೆ ಮಾರಾಟ ಮಾಡಲು ಮುಂದಾದಾಗ, ಮೂಲ ಆಧಾರ್​ ಕಾರ್ಡ್​ನಿಂದ ವಿಷಯವೆಲ್ಲಾ ಬಹಿರಂಗಗೊಂಡು ಬಿಟ್ಟಿತು! ಆ ಸಂದರ್ಭದಲ್ಲಿ ನಕಲಿ ಆಧಾರ್​ ಕಾರ್ಡ್​ ಮಾಡಲು ಮುಂದಾಗಿದ್ದರು ಈ ರಕ್ಕಸರು. ಆ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಬೆರಳಿನ ಅಚ್ಚು ಆಗುತ್ತಲೇ ಮೊದಲೇ ಆಧಾರ್​ ಕಾರ್ಡ್​ ಇರುವುದು, ಅದರಲ್ಲಿ ವಿವೇಕ್​ ಕುಮಾರ್​ ಎನ್ನುವ ಹೆಸರು ಇರುವುದು ಎಲ್ಲವೂ ಬಹಿರಂಗಗೊಂಡಿತು!

ಹಿಂದೂ ಕಾರ್ಯಕರ್ತರಿಗೆ ಮಾಹಿತಿ

ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಯೊಬ್ಬರು ಹಿಂದೂ ಕಾರ್ಯಕರ್ತರಿಗೆ ಮಾಹಿತಿ ಮುಟ್ಟಿಸಿದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ವೀರೇಂದ್ರ ಅವರನ್ನು ಸಂಪರ್ಕಿಸಿದರು. ವಿವೇಕ್ ಕೊನೆಗೂ ಮನೆಗೆ ಹಿಂದಿರುಗಿದಾಗ ಅವನು 18 ವರ್ಷಕ್ಕೆ ಕಾಲಿಟ್ಟಿದ್ದ. ಅವನು ಎಂಟು ವರ್ಷಗಳ ಬಾಲ್ಯವನ್ನು ಕಳೆದುಕೊಂಡಿದ್ದ. ಆತ ಎಷ್ಟು ಮಾನಸಿಕವಾಗಿ ನೊಂದಿದ್ದ ಎಂದರೆ, ಅದೇ ಆಘಾತದಿಂದ ಏನನ್ನೂ ಮಾತನಾಡುತ್ತಿರಲಿಲ್ಲ. ಆರಂಭದಲ್ಲಿ ತನ್ನ ಜೊತೆ ಏನಾಯಿತು ಎನ್ನುವುದನ್ನು ಹೇಳುವುದಕ್ಕೂ ಭಯಭೀತನಾಗಿದ್ದ. ಮೌನಿಯಾಗುತ್ತಿದ್ದ. ಏನಾದರೂ ಕೇಳಲು ಹೋದರೆ ಸಿಟ್ಟಿಗೇಳುತ್ತಿದ್ದ. ಕೊನೆಗೆ ಆತನ ಕರುಳುಹಿಂಡುವ ಸ್ಟೋರಿಗಳು ಒಂದೊಂದಾಗಿ ಬಯಲಾದವು. ಆತ ಅನುಭವಿಸಿದ ಚಿತ್ರಹಿಂಸೆಗಳು ಬೆಳಕಿಗೆ ಬಂದವು.

ಮುಂದೇನಾಯ್ತು?

ಕೊನೆಗೆ ಮದರಾಸಾದ ಕೆಲವರ ವಿರುದ್ಧ ಪ್ರಕರಣ ದಾಖಲಾಯಿತು. ಆಗ ಎನ್‌ಸಿಪಿಸಿಆರ್ ಅಧ್ಯಕ್ಷರಾಗಿದ್ದ ಪ್ರಿಯಾಂಕ್ ಕನೂಂಗೊ ಮದರಸಾಕ್ಕೆ ಭೇಟಿ ನೀಡಿದರು, ಆದರೆ ಅದು ಲಾಕ್ ಆಗಿ ನಿರ್ಜನವಾಗಿತ್ತು, ಮಕ್ಕಳು ಮತ್ತು ಆಡಳಿತ ಮಂಡಳಿ ನಾಪತ್ತೆಯಾಗಿದ್ದರು. ಕೊನೆಗೆ ಉತ್ತರ ಪ್ರದೇಶ ಸರ್ಕಾರ, ಮದರಾಸಾದಲ್ಲಿ ಓದುತ್ತಿರುವ ಮುಸ್ಲಿಮೇತರರ ಸಂಖ್ಯೆ ನೀಡುವಂತೆ ಕಠಿಣ ಆದೇಶ ಹೊರಡಿಸಿತ್ತು. ಆದರೆ ಹಾಗೆ ಮಾಡದ ಮದರಾಸಾ, ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದೆ! ಕೆಲವು ತಿಂಗಳುಗಳ ನಂತರ, ಸರ್ಕಾರವು, ಎಲ್ಲಾ ರಾಜ್ಯಗಳಿಗೆ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಿಂದ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಿಗೆ ವರ್ಗಾಯಿಸಲು ಸಲಹೆಗಳನ್ನು ನೀಡಿತು.