ಹೆಚ್ಚಿದ ಬಿಸಿಲ ಧಗೆ : ಕಾರ್ ಬಾನೆಟ್ ಮೇಲೆಯೇ ಚಪಾತಿ ಕಾಯಿಸಿದ ಮಹಿಳೆ, ವಿಡಿಯೋ
- ಕಾರು ಬಾನೆಟ್ ಮೇಲೆ ರೆಡಿ ಆಯ್ತು ಚಪಾತಿ
- ಬಿಸಿಲ ಧಗೆಗೆ ಒಲೆ ಉರಿಸ್ಬೇಕಾಗಿಲ್ಲ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಒಡಿಶಾ: ಈಗ ಬೇಸಿಗೆ ಸಮಯವಾಗಿದ್ದು, ಬಿರು ಬೇಸಿಗೆಯಲ್ಲಿ ಸೂರ್ಯನ ಟಾರ್ಚರ್ ತೀವ್ರವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಬಿಸಿ ಗಾಳಿಗೆ ಜನ ತತ್ತರಿಸುತ್ತಿದ್ದಾರೆ. ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲು ಜನರನ್ನು ಏದುಸಿರು ಬಿಡುವಂತೆ ಮಾಡುತ್ತಿದೆ. ಒಡಿಶಾ ಕೂಡ ಉರಿಯುತ್ತಿರುವ ಸೂರ್ಯನ ಅಡಿಯಲ್ಲಿ ತತ್ತರಿಸುತ್ತಿದೆ. ಬಿಸಿಲಿನ ಪರಿಣಾಮ ಬೆಂಕಿ ಇಲ್ಲದೆಯೂ ಅಡುಗೆ ಮಾಡಬಹುದಾದಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಒಡಿಶಾದ ಸೋನೆಪುರ್‌ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್‌ನಲ್ಲಿ ಚಪಾತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಕಾರಿನ ಬಾನೆಟ್ ಮೇಲೆ ಚಪಾತಿ ಮಾಡುತ್ತಿರುವ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ (Nilamadhab Panda) ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ . ನನ್ನ ಪಟ್ಟಣ ಸೋನೆಪುರದ ದೃಶ್ಯಗಳಿವು. ಇಲ್ಲಿ ಬಿಸಿಲಿನ ಧಗೆ ತೀವ್ರವಾಗಿದ್ದು, ಒಬ್ಬರು ಕಾರ್ ಬಾನೆಟ್‌ನಲ್ಲಿ (car Bonnet) ಚಪಾತಿ ಮಾಡುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ಮಣಿಪುರದ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ವೀಡಿಯೊಗೆ ಪ್ರತಿಕ್ರಿಯಿಸಿ, ಭಾರತಕ್ಕೆ ಅಭಿನಂದನೆಗಳು, ಅಂತಿಮವಾಗಿ ನಾವು ಕಾರ್ ಬಾನೆಟ್ ಮೇಲೆ ರೊಟ್ಟಿ ಮಾಡಬಹುದು ಎಂದು ಬರೆದು ಈ ಟ್ವಿಟ್‌ನ್ನು ರಿಟ್ವಿಟ್ ಮಾಡಿದ್ದಾರೆ.
ಒಡಿಶಾದಲ್ಲಿ ತೀವ್ರ ಬಿಸಿಗಾಳಿಯಿಂದಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಮುಂದಿನ ಐದು ದಿನಗಳ ಕಾಲ ಒಡಿಶಾದ ಜನರಿಗೆ ಚಾಲ್ತಿಯಲ್ಲಿರುವ ಹವಾಮಾನ ವೈಪರೀತ್ಯದಿಂದ ಯಾವುದೇ ವಿರಾಮವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಂಗಳವಾರ ಹೇಳಿದ್ದಾರೆ. ವಾಯುವ್ಯ-ಪಶ್ಚಿಮ ಒಣ ಗಾಳಿ ಮತ್ತು ಹೆಚ್ಚಿನ ಸೌರ ಇನ್ಸೋಲೇಶನ್‌ನಿಂದಾಗಿ ಮುಂದಿನ ಮೂರು ದಿನಗಳಲ್ಲಿ ಒಡಿಶಾದ ಒಳಭಾಗದಲ್ಲಿ ಹಲವು ಸ್ಥಳಗಳಲ್ಲಿ ತಾಪಮಾನವು 3-5 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಇನ್ನಷ್ಟು ಹೆಚ್ಚಾಲಿದೆ ಬಿಸಿಲ ಧಗೆ : ಹವಾಮಾನ ಇಲಾಖೆ ಎಚ್ಚರಿಕೆ
ಇತ್ತೀಚಿನ ಈ ಡಿಜಿಟಲ್ ಯುಗದಲ್ಲಿ ಯಾವ ವಿಚಾರ ಹೇಗೆ ವೈರಲ್ ಆಗಬಲ್ಲದು ಎಂಬುದನ್ನು ಹೇಳಲಾಗದು. ಹಾಗೆಯೇ ಪಾಕಿಸ್ತಾನದಲ್ಲಿ ರೊಟ್ಟಿ ಮಾಡುತ್ತಿರುವ ಬಾಲಕಿಯೊಬ್ಬಳ ವಿಡಿಯೋ ಕಳೆದ ವರ್ಷ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು. ಹಸಿರು ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಬಾಲಕಿಯ ವಿಡಿಯೋ ಇದಾಗಿದ್ದು, ಅಂತಹ ವಿಶೇಷತೆಯೇನೋ ಈ ವಿಡಿಯೋದಲ್ಲಿ ಇಲ್ಲ. ಅದಾಗ್ಯೂ ಈ ವಿಡಿಯೋವನ್ನು ಲಕ್ಷಾಂತರ ಜನ ನೋಡಿದ್ದು ಅಚ್ಚರಿ ಎನಿಸಿದೆ. ಪಾಕಿಸ್ತಾನ(Pakistan)ದ ಅಮಿನಾ ರಿಯಾಜ್(Aamina Reyaz) ಹೆಸರಿನ 15 ವರ್ಷದ ಬಾಲಕಿ ಈಕೆ. ಕೆಲವು ತಿಂಗಳ ಹಿಂದೆ ಈಕೆ ರೊಟ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೆ ಆಕೆ ಅಲೂಗಡ್ಡೆ ಕತ್ತರಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.
ಪಂಚನದಿಗಳ ಬೀಡು ವಿಜಯಪುರದಲ್ಲಿ ಹನಿ ನೀರಿಗೂ ಹಾಹಾಕಾರ: ಬೀದಿಗಿಳಿದ ನಾರಿಯರು.