ಪಂಚನದಿಗಳ ಬೀಡು ವಿಜಯಪುರದಲ್ಲಿ ಹನಿ ನೀರಿಗೂ ಹಾಹಾಕಾರ: ಬೀದಿಗಿಳಿದ ನಾರಿಯರು..!

*  ನೀರಿಗಾಗಿ ಬೀದಿಗಿಳಿದು ನಾರಿಯರ ಪ್ರತಿಭಟನೆ
*  ಬೇಸಿಗೆ ಶುರುವಾಗ್ತಿದ್ದಂತೆ ನೀರಿಗಾಗಿ ಹೋರಾಟ
*  24×7 ನೀರಿನ ನಳದ ಸಂಪರ್ಕ ಇದ್ರು ಪ್ರಯೋಜನ ಇಲ್ಲ 
 

Women Held Protest For Drinking Water in Vijayapura grg

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಮಾ.24): ಪಂಚನದಿಗಳ ಬೀಡು ವಿಜಯಪುರ(Vijayapura) ಜಿಲ್ಲೆಯಲ್ಲಿ ಬಿಸಿಲು ನೆತ್ತಿ ಸುಡೋದಕ್ಕೆ ಆರಂಭಿಸಿದೆ. ಜೊತೆಗೆ ಬೇಸಿಗೆ ಶುರುವಾಗ್ತಿದ್ದಂತೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ವಿಜಯಪುರ ನಗರದಲ್ಲಿ ಕುಡಿಯುವ ನೀರಿಗಾಗಿ ಈಗ ನಾರಿಯರೇ ಬೀದಿಗಿಳಿದು ಪ್ರತಿಭಟನೆ (Protest) ಮಾಡುವ ಪರಿಸ್ಥಿತಿ ಬಂದಿದೆ.

Women Held Protest For Drinking Water in Vijayapura grg

ತೇಗಡೆ ಗಲ್ಲಿಯಲ್ಲಿ ನೀರಿಗಾಗಿ ನಾರಿಯರ ಪ್ರತಿಭಟನೆ..!

ವಿಜಯಪುರ ನಗರದ ತೇಗಡೆ ಗಲ್ಲಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ. ಕಳೆದ 10 ದಿನಗಳಿಂದ ನೀರು ಬಿಡುತ್ತಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು (Women) ಮಕ್ಕಳು (Children) ವೃದ್ಧರು ಸೇರಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ರು. 24×7 ನೀರಿನ ನಲ್ಲಿ ಸಂಪರ್ಕವಿದೆ (24×7 Water Connection). ಆದ್ರೆ ನಲ್ಲಿ ಮಾತ್ರ ಹನಿ ನೀರು ಬರ್ತಿಲ್ಲ ಬಿಲ್ ಮಾತ್ರ ಕಟ್ಟೋದು ಆಗಿದೆ ಅಂತ ವೃದ್ಧೆ, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು.. ಹೀಗಾಗಿ ಮಹಿಳೆಯರೇ ರಸ್ತೆಯನ್ನ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Women Held Protest For Drinking Water in Vijayapura grg

Vijayapura Boy Beaten: ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ!

ರಸ್ತೆ ಬಂದ್‌ ಮಾಡಿದ್ದಕ್ಕೆ ಇಬ್ಬರು ಪೊಲೀಸ್‌ ವಶಕ್ಕೆ..!

ಇನ್ನು ನೀರಿಗಾಗಿ ಪ್ರತಿಭಟನೆಗೆ ಇಳಿದ ಮಹಿಳೆಯರು ತೇಗಡಿ ಗಲ್ಲಿಯಿಂದ ಜಿಲ್ಲಾಧಿಕಾರಿ (Vijayapur DC) ಕಚೇರಿಗೆ ಸಂಪರ್ಕಿಸುವ ರಸ್ತೆಯನ್ನೆ ಬಂದ್‌ ಮಾಡಿದ್ರು. ರಸ್ತೆಗೆ ಅಡ್ಡಲಾಗಿ ಕಟ್ಟಿಗೆ, ಟೈರ್‌ ಬಿಸಾಕಿ ಆಕ್ರೋಶ (Anger) ಹೊರಹಾಕಿದ್ರು. ಇಬ್ರಾಹಿಂಪುರ (Ibrahimpur) ದಿಂದ ಬಸ್ ನಿಲ್ದಾಣ, ಜಿಲ್ಲಾಧಿಕಾರಿ (Deputy Commissioner) ಕಚೇರಿ ಸಂಪರ್ಕಿಸೋ ರಸ್ತೆ ಬಂದ್ ಮಾಡಿರೋದ್ರಿಂದ ವಾಹನ ಸವಾರರು ಸುತ್ತುವರೆದು ಹೋಗುವಂತಾಗಿತ್ತು. ಪ್ರತಿಭಟನೆಗೆ ಅನುಮತಿ ತೆಗೆದುಕೊಂಡಿಲ್ಲ, ರಸ್ತೆ ಖಾಲಿ ಮಾಡಿ ಎಂದ ಪೊಲೀಸರೊಂದಿಗೆ ಮಹಿಳೆಯರು ವಾಗ್ವಾದ ಮಾಡಿದ್ರು. ಕೊನೆಗೆ ಗೋಳಗುಮ್ಮಟ ಪೊಲೀಸ್ (Golagummat Police) ಠಾಣೆಯ ಪೊಲೀಸರು ಪ್ರತಿಭಟನೆಗೆ ಸಾಥ್ ನೀಡಿದ್ದ ಇಬ್ಬರನ್ನು ಬಲವಂತವಾಗಿ ಜೀಪ್ ನಲ್ಲಿ ಕರೆದೊಯ್ದ ಘಟನೆಯು ನಡೆಯಿತು. ಬಳಿಕ ಮಹಿಳೆಯರು ಪ್ರತಿಭಟನೆ ವಾಪಾಸ್‌ ಪಡೆದರು..

ಪಂಚನದಿಗಳ ಊರಲ್ಯಾಕೆ ನೀರಿಗೆ ಪರದಾಟ..!

ವಿಜಯಪುರ ಜಿಲ್ಲೆ ಹೇಳಿ ಕೇಳಿ ಬಿಸಿಲು ನಾಡು, ಬೇಸಿಗೆ(Summer) ಬಂದ್ರೆ ಸಾಕು ನೀರಿಗಾಗಿ ಪರದಾಡೋದು ಸಾಮಾನ್ಯ. ಪಂಚನದಿಗಳು ಹರಿಯುವ ಜಿಲ್ಲೆ ಅನ್ನೋ ಖ್ಯಾತಿ ಇದೆ. ಇನ್ನು ಏಷ್ಯಾ ಖಂಡದ (Asia) ಅತಿ ದೊಡ್ಡ ಆಲಮಟ್ಟಿ ಡ್ಯಾಂ (Almatti Dam) ಇರೋದೆ ವಿಜಯಪುರ ಜಿಲ್ಲೆಯಲ್ಲಿ. ಆದ್ರೆ ಬೇಸಿಗೆಯಲ್ಲಿ ಕುಡಿಯೋ ನೀರಿಗಾಗಿ ಹಾಹಾಕಾರ ಮಾತ್ರ ತಪ್ಪೋದಿಲ್ಲ. ಸರ್ಕಾರ ದಿನದ ಇಪ್ಪತ್ನಾಲ್ಕು ಗಂಟೆ ನೀರು ಸರಬರಾಜು ಮಾಡುವುದಕ್ಕೆ ನಲ್ಲಿ ಸಂಪರ್ಕ ಕಲ್ಪಿಸಿದೆ. ಆದ್ರೆ ನಲ್ಲಿಯಲ್ಲಿ ಯಾವಾಗ ನೀರು ಬರುತ್ತೆ ಅಂತ ಕಾಯುವ ಪರಿಸ್ಥಿತಿಯಿದೆ. ಇದು ವಿಜಯಪುರದ  ತೇಗಡೆ ಗಲ್ಲಿಯಲ್ಲಿನ ನೀರಿನ ಸಮಸ್ಯೆ ಅಷ್ಟೇ ಅಲ್ಲ. ಬಹುತೇಕ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಮತ್ತೆ ಸತ್ಯವಾಯ್ತು ಬೆಂಕಿ ಬಬಲಾದಿ ಅಜ್ಜನ ಭವಿಷ್ಯ: ಜಗತ್ತಿನಲ್ಲಿ ಶುರುವಾಗಲಿದೆ ಕಲಿಪುರುಷನ ಅಸಲಿ ಆಟ..!

ಇನ್ನು ಮನೆ ಮುಂದಿರೋ ನಲ್ಲಿ ಬಾಯಿತೆರೆದಿವೆ. ಬ್ಯಾರೆಲ್ ಗಳು ಖಾಲಿ ಖಾಲಿಯಾಗಿದೆ. ನೀರಿನ ಸಮಸ್ಯೆ ಯಾರಿಗೆ ಹೇಳೋಣ್ರಿ, ಅಧಿಕಾರಿಗಳು ಸ್ಪಂದಿಸುತ್ತಿಲ್ಲಂತ ಎನ್ತಿದ್ದಾರೆ ಗೃಹಿಣಿಯರು. ಸಧ್ಯ ಸಾಮಾನ್ಯ ನಳಗಳಲ್ಲು 10 ರಿಂದ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತೆ. ಅದ್ರಲ್ಲು ಬೇಸಿಗೆ ಶುರುವಾದ ಮೇಲೆ ಸರಿಯಾದ ಸಮಯಕ್ಕೆ ನೀರು ಬಿಡದೆ ಅಧಿಕಾರಿಗಳು ಜನರನ್ನ ಆಟ ಆಡಿಸ್ತಿದ್ದಾರೆ. ಅಧಿಕಾರಿಗಳ ವರ್ತನೆ ಕಂಡು ಕಂಡು ಜನರು ಈಗ ಬೇಸತ್ತು ಹೋಗಿದ್ದಾರೆ.

24×7 ನೀರಿನ ಕನೆಕ್ಷನ್‌ ಆಗಿದೆ, ನೀರೆ ಬರೊಲ್ಲ..!

ವಿಜಯಪುರ ನಗರದ ಬಹುತೇಕ ಕಡೆಗಳಲ್ಲಿ 24×7 ನೀರಿನ ನಳಗಳ ಕನೆಕ್ಷನ್‌ ನೀಡಲಾಗಿದೆ. ಕೆಲವೆಡೆ ಬಿಟ್ಟರೇ ಉಳಿದಡೆ ಕನೆಕ್ಷನ್‌ ಆಗಿ 2 ವರ್ಷಗಳೇ ಕಳೆದ್ರು ನೀರೇ ಬರ್ತಿಲ್ಲ.. ನಳ, ನಳಗಳಿಗೆ ಮೀಟರ್‌ ಜೋಡನೆಯಾಗಿದೆ. ಆದ್ರೆ ಈ ವರೆಗು ಹನಿ ನೀರನ್ನು ಬಹುತೇಕ ಭಾಗಗಳ ಜನರು ಕಂಡಿಲ್ಲ.. ವಿಜಯಪುರ ನಗರದ ಗೋಳಗುಮ್ಮಟ ಏರಿಯಾ , ದೇಶಪಾಂಡೆ ಗಲ್ಲಿ, ಕಾಮತ್‌ ಹೊಟೇಲ್‌ ಹಿಂಭಾಗ, ತೇಗಡೆ ಗಲ್ಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಳವಡಿಕೆಯಾಗಿರೋ 24×7 ನೀರಿನ ಕನೆಕ್ಷನ್‌ ಗಳು 2 ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಅಧಿಕಾರಿಗಳನ್ನ ಕೇಳಿದ್ರೆ ಟ್ಯಾಂಕ್‌ (Water Tank) ನಿರ್ಮಿಸಬೇಕಿದೆ, ಟೆಸ್ಟಿಂಗ್‌ ನಡೆಯುತ್ತಿದೆ.. ಇನ್ನು ವರ್ಕ್‌ ಪೆಂಡಿಂಗ್‌ ಇದೆ ಎನ್ನುವ ಸಂಬಂಧವೇ ಇಲ್ಲದ ಸಬೂಬುಗಳನ್ನ ನೀಡ್ತಿದ್ದಾರೆ. 24×7 ನೀರಿನ ನಳಗಳ ಕನೆಕ್ಷನ್‌ ಕಂಪ್ಲೀಟ್‌ ಆಗಿಯೇ 2 ವರ್ಷ ಕಳೆದ್ರು ಅಧಿಕಾರಿಗಳು ಈ ಎರೆಡು ವರ್ಷ ಮಾಡಿದ್ದೇನು ಅಂತಾ ಜನರು ಪ್ರಶ್ನೆ ಮಾಡ್ತಿದ್ದಾರೆ..!
 

Latest Videos
Follow Us:
Download App:
  • android
  • ios