ತನಗೆ ರಾಜಕಾರಣಿಯೊಬ್ಬರು 3 ವರ್ಷದಿಂದ ಅನುಚಿತ ಸಂದೇಶಗಳನ್ನು ಕಳಿಸಿ, ಹೋಟೆಲ್‌ಗೆ ಕರೆಯುತ್ತಿದ್ದ ಬಗ್ಗೆ ನಟಿ ರಿನಿ ಜಾರ್ಜ್‌ ಆರೋಪಿಸಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನ ತೊರೆದಿದ್ದ ಶಾಸಕ ರಾಹುಲ್ ಮಮಕೂಟತಿಲ್‌, ಇನ್ನೂ ಹಲವು ಹೆಂಗಳೆಯರಿಗೆ ಕಿರುಕುಳ ನೀಡಿರುವುದು ಬಯಲಾಗಿದೆ.

ತಿರುವನಂತಪುರಂ: ತನಗೆ ರಾಜಕಾರಣಿಯೊಬ್ಬರು 3 ವರ್ಷದಿಂದ ಅನುಚಿತ ಸಂದೇಶಗಳನ್ನು ಕಳಿಸಿ, ಹೋಟೆಲ್‌ಗೆ ಕರೆಯುತ್ತಿದ್ದ ಬಗ್ಗೆ ನಟಿ ರಿನಿ ಜಾರ್ಜ್‌ ಆರೋಪಿಸಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನ ತೊರೆದಿದ್ದ ಶಾಸಕ ರಾಹುಲ್ ಮಮಕೂಟತಿಲ್‌, ಇನ್ನೂ ಹಲವು ಹೆಂಗಳೆಯರಿಗೆ ಕಿರುಕುಳ ನೀಡಿರುವುದು ಬಯಲಾಗಿದೆ.

ರಾಹುಲ್‌ರದ್ದು ಎನ್ನಲಾಗುತ್ತಿರುವ ಧ್ವನಿ ಮಹಿಳೆಯೊಬ್ಬರೊಂದಿಗೆ ಕರೆಯಲ್ಲಿ ಮಾತನಾಡಿದ್ದ ಆಡಿಯೋ ಇದೀಗ ವೈರಲ್‌ ಆಗುತ್ತಿದೆ. ಅದರಲ್ಲಿ ಪುರುಷಧ್ವನಿ, ‘ನಿನ್ನನ್ನು ಕೊಲ್ಲಬೇಕೆಂದುಕೊಂಡರೆ ನನಗೆಷ್ಟು ಸಮಯ ಬೇಕೆಂದುಕೊಂಡಿದ್ದೀಯ’ ಎಂದು ಬೆದರಿಕೆ ಒಡ್ಡುತ್ತಿರುವುದನ್ನು ಕೇಳಬಹುದಾಗಿದೆ.

ಅತ್ತ, ರಿನಿ ಬಳಿಕ ಹನಿ ಭಾಸ್ಕರನ್‌ ಎಂಬಾಕೆ, ರಾಹುಲ್‌ ತಮಗೂ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಸಂದೇಶ ಕಳಿಸುತ್ತಿದ್ದರು ಎಂದಿದ್ದರು. ಇದರ ಬೆನ್ನಲ್ಲೇ, ರಾಹುಲ್‌ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂಬ ಆಗ್ರಹ ತೀವ್ರವಾಗಿದೆ.