ಹೋಟೆಲ್‌ಗಳಲ್ಲಿ ಕೋಳಿ ಖಾದ್ಯಗಳನ್ನು ನೀಡುವುದನ್ನು ತಡೆಯಲಾಗಿದೆ. ಊಟಕ್ಕೆ ಬಂದವರನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ ಎಂದು ಹೋಟೆಲ್ ಮಾಲೀಕರು ದೂರುತ್ತಿದ್ದಾರೆ. ಇದರ ವಿರುದ್ಧ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.

ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೋಳಿ ಖಾದ್ಯಗಳ ಮಾರಾಟವನ್ನು ನಿಷೇಧಿಸಿದೆ. ಹೋಟೆಲ್‌ಗಳಲ್ಲಿ ಕೋಳಿ ಖಾದ್ಯಗಳನ್ನು ನೀಡುವುದನ್ನು ತಡೆಯಲಾಗಿದೆ. ಊಟಕ್ಕೆ ಬಂದವರನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ. ಇದರ ವಿರುದ್ಧ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆ ಕೇರಳ ರಾಜ್ಯದ ಆಲಪ್ಪುಳದಲ್ಲಿ ನಡೆದಿದೆ. ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದಾಗಿ ಚಿಕನ್ ಊಟವನ್ನು ತಯಾರಿಸಿ ಗ್ರಾಹಕರಿಗೆ ಬಡಿಸದಂತೆ FSSAI ನಿಷೇಧವನ್ನು ಹೇರಿದೆ. ಆದರೆ, ಈ FSSAI ಯಾವುದೇ ಮುನ್ಸೂಚನೆ ಇಲ್ಲದೆ ಹೋಟೆಲ್‌ಗಳ ವಿರುದ್ಧ ಈ ಕ್ರಮ ಕೈಗೊಂಡಿದೆ ಎಂದು ಹೋಟೆಲ್ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಹಕ್ಕಿ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ತಿಂಗಳ 30ರಿಂದ ಹೋಟೆಲ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಸದ್ಯಕ್ಕೆ ಬಾತುಕೋಳಿಗಳಲ್ಲಿ ಮಾತ್ರ ಹಕ್ಕಿ ಜ್ವರ ಪತ್ತೆ:

ಸದ್ಯಕ್ಕೆ ಜಿಲ್ಲೆಯಲ್ಲಿ ಬಾತುಕೋಳಿಗಳಲ್ಲಿ ಮಾತ್ರ ಹಕ್ಕಿ ಜ್ವರ ದೃಢಪಟ್ಟಿದೆ. ರಾಜ್ಯದಲ್ಲಿ ಹಕ್ಕಿ ಜ್ವರ ದೃಢಪಟ್ಟ ಸ್ಥಳಗಳಲ್ಲಿ ಪಕ್ಷಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಗುತ್ತಿದೆ. ಆಲಪ್ಪುಳದಲ್ಲಿ ಸುಮಾರು 20 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ. ರೋಗವು ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಕ್ರಿಸ್‌ಮಸ್ ಮಾರುಕಟ್ಟೆಗೆ ಸಿದ್ಧತೆ ನಡೆಸುತ್ತಿದ್ದಾಗ, ರೈತರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಎರಡು ಜಿಲ್ಲೆಗಳ 12 ಸ್ಥಳಗಳಲ್ಲಿ ರೋಗ ಪತ್ತೆಯಾಗಿದೆ. ಆಲಪ್ಪುಳದಲ್ಲಿ ಮಾತ್ರ 19,811 ಪಕ್ಷಿಗಳನ್ನು ಕೊಲ್ಲಲಾಗಿದೆ. ರೋಗ ದೃಢಪಟ್ಟ ಪ್ರದೇಶಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಕೊಲ್ಲಲಾಗಿದೆ.

ವಲಸೆ ಹಕ್ಕಿಗಳ ಆಗಮನವೇ ರೋಗಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ರೋಗವು ಹೆಚ್ಚಿನ ಪಕ್ಷಿಗಳಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಪಕ್ಷಿಗಳು ಅಸಹಜವಾಗಿ ಸಾಮೂಹಿಕವಾಗಿ ಸಾಯುತ್ತಿರುವುದು ಕಂಡುಬಂದರೆ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ತಿಳಿಸಬೇಕು. ಅಂತಹ ಪಕ್ಷಿಗಳನ್ನು ನಿರ್ವಹಿಸುವಾಗ ಜಾಗರೂಕರಾಗಿರಬೇಕು. ರೋಗಪೀಡಿತ ಪ್ರದೇಶಗಳ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಹಕ್ಕಿ ಜ್ವರ ಮನುಷ್ಯರಿಗೆ ಹರಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.