Asianet Suvarna News Asianet Suvarna News

ಇದೆಂತಹಾ ಸೇಡು? ಅಸ್ವಸ್ಥ ವೃದ್ಧನ ಮೇಲೆ ಕಾರು ಹರಿಸಿದ ಪಕ್ಕದ ಮನೆ ಯುವಕ: ವೈರಲ್ ಆಯ್ತು ವಿಡಿಯೋ!

* ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಶಾಕಿಂಗ್ ಕೃತ್ಯ

* ವೃದ್ಧನಿಗೆ ಕಾರು ಡಿಕ್ಕಿ ಹೊಡೆದು ಗಾಯಗೊಳಿಸಿದ ಯುವಕ

* ಸೇಡಿನಿಂದ ಈ ಕೃತ್ಯ ಎಸಗಿದನಾ ಯುವಕ?

Hit and Run Case In UP Ghaziabad Shocking CCTV Clippings Goes Viral pod
Author
Bangalore, First Published Mar 31, 2022, 5:05 PM IST | Last Updated Mar 31, 2022, 5:08 PM IST

ಲಕ್ನೋ(ಮಾ.31): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದ ಆಘಾತಕಾರಿ ದೃಶ್ಯಾವಳಿಗಳು ಹೊರಬಿದ್ದಿವೆ. ಇದರಲ್ಲಿ ಅಸ್ವಸ್ಥ ವೃದ್ಧನಿಗೆ ಕಾರು ಗುದ್ದಿದ್ದಲ್ಲದೇ, ಆತನ ಮೇಲೇ ಯುವಕ ಕಾರೆಉ ಹರಿಸಿಕೊಂಡು ಹೋಗಿದ್ದಾನೆ. ವೃದ್ಧ ತೀವ್ರವಾಗಿ ಗಾಯಗೊಂಡಿದ್ದಾರೆ. ಬುಧವಾರ ನಡೆದ ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೆರೆಹಿಡಿಯಲಾದ ದೃಶ್ಯಾವಳಿಗಳಲ್ಲಿ ಕಾರು ಕಿರಿದಾದ ಲೇನ್‌ಗೆ ಪ್ರವೇಶಿಸುವುದನ್ನು ನೋಡಬಹುದು. ಅಲ್ಲಿ ಮುದುಕನು ತನ್ನ ಮನೆಯ ಹೊರಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದ ಅಷ್ಟರಲ್ಲೇ ಕಾರು ವೇಗವಾಗಿ ಬಂದು ವಯಸ್ಸಾದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.

ಇದನ್ನು ಆ ಯುವಕ ಉದ್ದೇಶಪೂರ್ವಕವಾಗೇ ನಡೆಸಿದ್ದಾನೆ ಎಂದು ವೃದ್ಧ ಆರೋಪಿಸಿದ್ದಾರೆ. ಆರು ತಿಂಗಳ ಹಿಂದೆ ನಡೆದ ವಿವಾದದ ನಂತರ ಆರೋಪಿ ಈ ಕೃತ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ವೃದ್ಧ ತನ್ನ ನೆರೆ ಮನೆಯಾತನ ವಿರುದ್ಧ ದೂರು ನೀಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Safety car ಬಸ್‌ಗೆ ಡಿಕ್ಕಿ ಹೊಡೆದ ಮಹೀಂದ್ರಾ XUV 700 ಕಾರು, 5 ಸ್ಟಾರ್ ಸೇಫ್ಟಿಯಿಂದ ಪ್ರಯಾಣಿಕರು ಫುಲ್ ಸೇಫ್!

 

ದೇಶದ ಅತ್ಯಂತ ಸುರಕ್ಷಿತ ಎಸ್‌ಯುವಿ ಎಂದು ಗುರುತಿಸಲ್ಪಟ್ಟ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮಹೀಂದ್ರಾ ಎಕ್ಸ್‌ಯುವಿ ( Mahindra XUV700) ಇತ್ತೀಚೆಗೆ ಬಸ್‌ ಒಂದಕ್ಕೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್‌ ಆಗಿದೆ.

ಮಹೀಂದ್ರ ಎಕ್ಸ್‌ಯುವಿ, ತಮಿಳುನಾಡು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ದೃಶ್ಯಗಳು ಇತ್ತೀಚೆಗೆ ವೈರಲ್ ಆಗಿವೆ. ಮೋಟೋ ವ್ಯಾಗನ್‌ (MotoWagon) ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬಿಳಿ ಬಣ್ಣದ XUV700 ಹೆದ್ದಾರಿ ದಾಟುತ್ತಿರುವ ಬಸ್‌ಗೆ ಡಿಕ್ಕಿ ಹೊಡೆದಿದೆ. ಆದರೆ ಇಷ್ಟೊಂದು ದೊಡ್ಡ ಅಪಘಾತದ ನಂತರ ಕಾರಿನ ಕ್ಯಾಬಿನ್‌ಗೆ ಹೆಚ್ಚು ಹಾನಿಯಾಗಿಲ್ಲ.  ಅಲ್ಲದೆ, ಎಸ್‌ಯುವಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅದು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರ ಗಮನವನ್ನು ಕೂಡ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಕಂಪನಿಯ ಎಲ್ಲಾ ವಾಹನಗಳನ್ನು ವಿನ್ಯಾಸಗೊಳಿಸುವುದರ ಹಿಂದೆ ಸುರಕ್ಷತೆ ಪ್ರಧಾನ ಉದ್ದೇಶವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Safety Car ಎರಡು ಟ್ರಕ್ ನಡುವೆ ಅಪ್ಪಚ್ಚಿಯಾದ ಮಹೀಂದ್ರ, 4 ಸ್ಟಾರ್ ರೇಟಿಂಗ್‌ನಿಂದ ಪ್ರಯಾಣಿಕರು ಸೇಫ್!

ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (NCAP) ಪರೀಕ್ಷೆಯಲ್ಲಿ, ಮಹೀಂದ್ರ XUV700 ಎಸ್‌ಯುವಿ 16.03 ಅಂಕಗಳೊಂದಿಗೆ,  5-ಸ್ಟಾರ್ ಸುರಕ್ಷತಾ ರೇಟಿಂಗ್ (ಉನ್ನತ-ಸುರಕ್ಷತಾ ಸ್ಕೋರ್) ಗಳಿಸಿದೆ. ಇದು 2014 ರಿಂದ ಪರೀಕ್ಷಿಸಲ್ಪಟ್ಟ ಭಾರತದಲ್ಲಿ ತಯಾರಿಸಿದ ವಾಹನಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ವಾಹನವಾಗಿದೆ. NCAP ದತ್ತಾಂಶದ ಪ್ರಕಾರ, ವಾಹನವು ಮಕ್ಕಳ ಸುರಕ್ಷತೆಗಾಗಿ 41.66 ಅಂಕ ಗಳಿಸಿದೆ. ಒಟ್ಟಾರೆ ಇದು ವಯಸ್ಕರ ಸುರಕ್ಷತೆಗೆ 5 ಸ್ಟಾರ್‌ ಹಾಗೂ ಮಕ್ಕಳ ಸುರಕ್ಷತೆಗೆ 4 ಸ್ಟಾರ್‌ ರೇಟಿಂಗ್‌ ಪಡೆದುಕೊಂಡಿದೆ.

2021 ರಲ್ಲಿ ಪ್ರಕಟವಾದ ವರದಿಯಲ್ಲಿ, ಎಸ್‌ಯುವಿಯಲ್ಲಿನ "ಚಾಲಕ ಮತ್ತು ಪ್ರಯಾಣಿಕರ ತಲೆ, ಕುತ್ತಿಗೆ ಮತ್ತು ಎದೆಗೆ ನೀಡಲಾದ ರಕ್ಷಣೆಯು ಉತ್ತಮವಾಗಿದೆ. ಚಾಲಕ ಮತ್ತು ಪ್ರಯಾಣಿಕರ ಮೊಣಕಾಲುಗಳಿಗೆ ಉತ್ತಮ ರಕ್ಷಣೆಯಿದೆ" ಎಂದಿದೆ.

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

"3 ವರ್ಷ ಮತ್ತು 1.5 ವರ್ಷ ವಯಸ್ಸಿನ ಮಕ್ಕಳಿಗಾಗಿ ಆರ್‌ಡಬ್ಲ್ಯುಎಫ್‌ (RWF) ಮತ್ತು  ಐಸೋಫಿಕ್ಸ್‌(ISOfIX) ಅಳವಡಿಸಲಾಗಿದೆ" ಎಂದು ವರದಿ ಹೇಳಿದೆ.

ಮಹೀಂದ್ರ XUV700 ಬೆಲೆ 12.95 ಲಕ್ಷ ರೂ.ಗಳಿಂದ ಮತ್ತು 23.79 ಲಕ್ಷ ರೂ.ಗಳವರೆಗಿದೆ. ಮಹೀಂದ್ರಾ XUV700 ಅನ್ನು 23 ರೂಪಾಂತರಗಳಲ್ಲಿ ನೀಡಲಾಗುತ್ತದೆ -ಇದರ ಮೂಲ ಮಾದರಿಯು MX ಮತ್ತು ಉನ್ನತ ವೇರಿಯಂಟ್‌ Mahindra XUV700 AX7 ಡೀಸೆಲ್ AT ಆಗಿದೆ. ಈಗ ಐಷಾರಾಮಿ ಪ್ಯಾಕ್ ಎಡಬ್ಲ್ಯುಡಿ (AWD) ಬೆಲೆ  23.79 ಲಕ್ಷ  ರೂ.ಗಳಷ್ಟಿದೆ.

ಇದರಲ್ಲಿ ಸಾಕಷ್ಟು ವೇರಿಯಂಟ್‌ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳಿವೆ. ಅತ್ಯಂತ ಸಮರ್ಥ ಎಂಜಿನ್ ಆಯ್ಕೆಗಳು ಇದನ್ನು ಮೊದಲ ಆಯ್ಕೆಯ ಕಾರನ್ನಾಗಿಸುತ್ತದೆ. ಡೀಸೆಲ್ ಎಂಜಿನ್ ಜೊತೆ AWD, 7 ಏರ್‌ಬ್ಯಾಗ್‌ಗಳೊಂದಿಗೆ ಸಾಕಷ್ಟು ಸುರಕ್ಷತಾ ವಿಧಾನಗಳು, ಜೊತೆಗೆ, ಅಡಾಸ್‌ (ADAS) ಅನ್ನು ಭಾರತೀಯ ರಸ್ತೆ ಪರಿಸ್ಥಿತಿಗಳಿಗಾಗಿ ಟ್ಯೂನ್ ಮಾಡಲಾಗಿದೆ

ಆಫರ್‌ನಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಪಡೆಯುತ್ತವೆ. ಎಕ್ಸ್‌ಯುವಿ 500 ( XUV500)ನ 155hp ಡೀಸೆಲ್ ಮೂಲ ಆವೃತ್ತಿಯಲ್ಲಿ ಮಾತ್ರ ಸಾಗುತ್ತದೆ, ಹೆಚ್ಚಿನ ರೂಪಾಂತರಗಳು 185hp ಅನ್ನು ಹೊರಹಾಕುವ 2.2-ಲೀಟರ್ mHawk ಘಟಕದ ಹೆಚ್ಚು ಶಕ್ತಿಯುತ ಆವೃತ್ತಿಯನ್ನು ಪಡೆಯುತ್ತವೆ. ಇದು XU700 ಡೀಸೆಲ್ ಅನ್ನು ಅದರ 115 ಎಚ್‌ಪಿ, 1.5-ಲೀಟರ್ ಡೀಸೆಲ್ ಮತ್ತು ಅದೇ 170 ಎಚ್‌ಪಿ 2.0-ಲೀಟರ್ ಫಿಯೆಟ್-ಮೂಲದ ಡೀಸೆಲ್ ಎಂಜಿನ್ ಅನ್ನು ಬಳಸುವ ಹ್ಯುಂಡೈ ಅಲ್ಕಾಜರ್‌ಗಿಂತ ಮುಂದೆ ಅದರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ

Latest Videos
Follow Us:
Download App:
  • android
  • ios