Asianet Suvarna News Asianet Suvarna News

Safety Car ಎರಡು ಟ್ರಕ್ ನಡುವೆ ಅಪ್ಪಚ್ಚಿಯಾದ ಮಹೀಂದ್ರ, 4 ಸ್ಟಾರ್ ರೇಟಿಂಗ್‌ನಿಂದ ಪ್ರಯಾಣಿಕರು ಸೇಫ್!

  • ಹೊಚ್ಚ ಹೊಸ ಮಹೀಂದ್ರ ಥಾರ್ ಅಪಘಾತ, ಪ್ರಯಾಣಿಕರು ಸೇಫ್
  • ನಿಲ್ಲಿಸಿದ್ದ ಟ್ರಕ್‌ಗೆ ಗುದ್ದಿದ ಥಾರ್, ಮರುಕ್ಷಣದಲ್ಲೇ  ಹಿಂಬದಿ ಟ್ರಕ್ ಅಪಘಾತ 
  • ಗ್ಲೋಬಲ್ NCAPಯಿಂದ  4 ಸ್ಟಾರ್ ರೇಟಿಂಗ್ ಪಡೆದಿರುವ ಥಾರ್
     
Mahindra thar accident with 2 trucks in Jemshedpur Highway Passenger life saved due to 4 star NCAP rating ckm
Author
Bengaluru, First Published Jan 6, 2022, 1:26 PM IST

ಜೆಮ್‌ಶೆಡ್‌ಪುರ (ಜ.06): ಮಹೀಂದ್ರ ಥಾರ್...ಹೊಸ ಅವತಾರ, ಹೊಸ ಫೀಚರ್ಸ್‌ನೊಂದಿಗೆ ಮಹೀಂದ್ರ ಥಾರ್(Mahindra Thar) ಭಾರತದಲ್ಲಿ ಭಾರಿ ಸದ್ದು ಮಾಡಿದ ವಾಹನ. ಈಗಲೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿರುವ ಥಾರ್ ಸುರಕ್ಷತೆಯಲ್ಲೂ 4 ಸ್ಟಾರ್ ರೇಟಿಂಗ್(4 star Rating) ಪಡೆದಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಗರಿಷ್ಠ ಸುರಕ್ಷತೆಯ ವಾಹನ(Safety Cars) ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಈ ಹೊಚ್ಚ ಥಾರ್ ವಾಹನ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಅಪಘಾತಕ್ಕೀಡಾಗಿದೆ. ಎರಡು ಟ್ರಕ್ ನಡುವೆ ಮಹೀಂದ್ರ ಥಾರ್ ಅಪ್ಪಚ್ಚಿಯಾಗಿದೆ. ಆದರೆ 4 ಸ್ಟಾರ್ ರೇಟಿಂಗ್ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ.

ಜೆಮ್‌ಶೆಡ್‌ಪುರ ಹೈವೇನಲ್ಲಿ(Highway Accident) ಅತೀ ವೇಗವಾಗಿ ಬರುತ್ತಿದ್ದ ಥಾರ್ ವಾಹನ ಕ್ಷಣಮಾತ್ರದಲ್ಲಿ ಅಪಘಾತಕ್ಕೀಡಾವಾಗಿದೆ. ವೇಗದ ಮೀತಿ ಮೀರಿದ ಕಾರಣ  ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಥಾರ್ ಡಿಕ್ಕಿ ಹೊಡೆದಿದೆ. ಮರು ಕ್ಷಣದಲ್ಲೇ ಥಾರ್ ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಟ್ರಕ್ ಥಾರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ನಿಮಿಷಗಳ ಅಂತರದಲ್ಲಿ ಮಹೀಂದ್ರ ಥಾರ್‌ ಎರಡು ಟ್ರಕ್ ನಡುವೆ ಅಪ್ಪಚ್ಚಿಯಾಗಿದೆ. 

6 ತಿಂಗಳಲ್ಲಿ ಮಹೀಂದ್ರ ಥಾರ್ ದಾಖಲೆ; ಕೈಗೆಟುಕುವ ದರಲ್ಲಿ ಲಭ್ಯವಿರುವ 4X4 SUV!

ಮಹೀಂದ್ರ ಥಾರ್ ಮುಂಭಾಗ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಣ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇನ್ನು ಹಿಂಭಾಗದಿಂದ ಬಂದ ಟ್ರಕ್ ಥಾರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಕಾರಣ ಥಾರ್ ವಾಹನ ಬಹುತೇಕ ಅಪ್ಪಚ್ಚಿಯಾಗಿದೆ. ಥಾರ್ ಮುಂಭಾಗದಲ್ಲಿ ಮಾತ್ರ ಪ್ರಯಾಣಿಕರಿದ್ದರು. ಇನ್ನು ಹಿಂಭಾಗದಲ್ಲಿ ಲಗೇಜ್ ಇಡಲಾಗಿತ್ತು. ಹಾಗೂ ಯಾವುದೇ ಪ್ರಯಾಣಿಕರು(Passengers Safe) ಇರಲಿಲ್ಲ. 

ಥಾರ್ ಏರ್‌ಬ್ಯಾಗ್ ಒಪನ್ ಆಗಿದೆ. ಆದರೆ ಎರಡು ಟ್ರಕ್ ಡಿಕ್ಕಿ ಹೊಡೆದ ಕಾರಣ ಮಹೀಂದ್ರ ಥಾರ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. 4 ಸ್ಟಾರ್ ರೇಟಿಂಗ್ ಕಾರಣ ಪ್ರಯಾಣಿಕರಿಗೆ ಥಾರ್ ಸುರಕ್ಷತೆ ಒದಗಿಸಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗದಲ್ಲಿ ನಡೆದ ಅಪಘಾತ ಇದಾಗಿದೆ. ಥಾರ್ ವಾಹನ ಕೂಡ ಬಹುತೇಕ ನಜ್ಜುಗುಜ್ಜಾಗಿದೆ. ಆದರೆ 4 ಸ್ಟಾರ್ ರೇಟಿಂಗ್ ಕಾರಣ ಪ್ರಯಾಣಿಕರು ಬದುಕುಳಿದಿದ್ದಾರೆ. 

ಮಹೀಂದ್ರ ಥಾರ್ ಸುರಕ್ಷತಾ ಫಲಿತಾಂಶ ಬಹಿರಂಗ; ಗ್ಲೋಬಲ್ NCAP ವರದಿ!

ಮಹೀಂದ್ರ ಥಾರ್ ಬಿಡುಗಡೆಯಾದ ಬಳಿಕ ಥಾರ್ ಸುರಕ್ಷತಾ ರೇಟಿಂಗ್ ಬಹಿರಂಗವಾಗಿತ್ತು. ಈ ವೇಳೆ ಥಾರ್ ಮತ್ತೆ ಭಾರಿ ಸಂಚಲನ ಸೃಷ್ಟಿಸಿತ್ತು. ಕಾರಣ ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ ಒಟ್ಟು 17 ಅಂಕಗಳ ಪೈಕಿ 12.52 ಅಂಕ ಸಂಪಾದಿಸಿದೆ. ಇನ್ನು ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳ ಪೈಕಿ 41.11 ಅಂಕಗಳ ಸಂಪಾದಿಸಿದೆ. ಒಟ್ಟು 4 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಗರಿಷ್ಠ ಸುರಕ್ಷೆ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಇದರ ಜೊತೆಗೆ ABS ಹಾಗೂ EBD, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ  ISOFIX ಚೈಲ್ಡ್ ಸೀಟ್ಸ್ ಹೊಂದಿದೆ. 

ಮಹೀಂದ್ರ ಥಾರ್ 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. 2.0 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 150 PS ಪವರ್ ಹಾಗೂ  320 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 2.2 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯೂ ಲಭ್ಯವಿದೆ. ಡೀಸೆಲ್ ಎಂಜಿನ್ ಥಾರ್  130 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಸುರಕ್ಷತಾ ಕಾರಿಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಭಾರತದಲ್ಲಿ ಕಾರು ಮಾರಾಟಕ್ಕೆ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸಿದೆ. ಹೀಗಾಗಿ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಕೈಗೆಟುಕುವ ದರದಲ್ಲಿ ಗರಿಷ್ಠ ಸೇಫ್ಟಿ ಕಾರು ನೀಡುವ ಹೆಗ್ಗಳಿಕೆಗೆ ಭಾರತದ ಆಟೋ ಕಂಪನಿಗಳು ಪಾತ್ರವಾಗಿದೆ. 

Follow Us:
Download App:
  • android
  • ios