Asianet Suvarna News Asianet Suvarna News

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

  • ಸಂಚಲನ ಸೃಷ್ಟಿಸಿದೆ ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಕಾರು
  • 5 ಸ್ಟಾರ್ ಸುರಕ್ಷತೆ ಕಾರಣದಿಂದ ಭೀಕರ ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರು
  • ಡಿವೈಡರ್‌ಗೆ ಡಿಕ್ಕಿ ಹೊಡೆದ ಪಂಚ್ ಕಾರು 4 ಪಲ್ಟಿ
Tata Punch accident hit divider and rolled over 5 star safety rating car saves 5 passenger life in Gujarat ckm
Author
Bengaluru, First Published Jan 7, 2022, 6:37 PM IST

ಗುಜರಾತ್(ಜ.07): ಟಾಟಾ ಪಂಚ್(Tata Punch) ಕಾರು ಭಾರತದ ಮೈಕ್ರೋ SUV ಹಾಗೂ ಸಣ್ಣ ಕಾರು ವಿಭಾಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಡಿಸೈನ್, ಪ್ರಯಾಣ ಹಾಗೂ ಸುರಕ್ಷತೆಯಲ್ಲಿ ಟಾಟಾ ಪಂಚ್ ಅಗ್ರಗಣ್ಯನಾಗಿ ಹೊರಹೊಮ್ಮಿದೆ. ಹೀಗಾಗಿ ಮೈಕ್ರೋ ಸೆಗ್ಮೆಂಟ್ ಕಾರು ವಿಭಾಗದಲ್ಲಿ ಟಾಟಾ ಪಂಚ್ ಮಾರಾಟದಲ್ಲೂ(Sales) ದಾಖಲೆ ಬರೆದಿದೆ. ಪಂಚ್ ಸುರಕ್ಷತೆಯಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್(5 star Safety Rating) ಪಡೆದುಕೊಂಡಿದೆ. ಇದೇ ಕಾರಣಕ್ಕೆ ಇದೀಗ ಭೀಕರ ಅಪಘಾತದಲ್ಲಿ(Road Accident) ಟಾಟಾ ಪಂಚ್ ಐವರು ಪ್ರಯಾಣಿಕರ ಜೀವ ಉಳಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಟಾಟಾ ಮೋಟಾರ್ಸ್ ಕಾರುಗಳ ಪೈಕಿ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಗೆಗೆ ಟಾಟಾ ಪಂಚ್ ಪಾತ್ರವಾಗಿದೆ. ಸದ್ಯ ಭಾರತದಲ್ಲಿರುವ ಕೈಗೆಟುಕುವ ದರದ ಕಾರುಗಳಲ್ಲಿ ಟಾಟಾ ಪಂಚ್ ಗರಿಷ್ಠ ಸುರಕ್ಷತೆ ನೀಡುವ ಕಾರಾಗಿದೆ. ಇದು ಸಾಬೀತಾಗಿದೆ. ಗುಜರಾತ್‌ನ(Gujarat) ಹೆದ್ದಾರಿಯಲ್ಲಿ ನಡೆದ ಘಟನೆ ಟಾಟಾ ಪಂಚ್ ಕಾರಿನ ಸುರಕ್ಷತೆಯನ್ನು ಸಾಬೀತುಪಡಿಸಿದೆ. 

India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!

ಹೆದ್ದಾರಿಯಲ್ಲಿ ವೇಗವಾಗಿ ಬಂದ ಟಾಟಾ ಪಂಚ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಪಂಚ್ ಕಾರು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ರೋಲ್ ಆಗಿದೆ. 4 ಪಲ್ಟಿಯಾದ ಕಾರು ಚಕ್ರ ಹಾಗೂ ಕಾರಿನ ಅಡಿ ಭಾಗ ಮೇಲಕ್ಕಾಗಿ ನಿಂತಿದೆ. ಗುದ್ದಿದ ರಭಸಕ್ಕೆ ಕಾರಿನ ಚಕ್ರ ಕಿತ್ತು ಹೋಗಿದೆ. 

ಕಾರಿನಲ್ಲಿ ಚಾಲಕ ಸೇರಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸಣ್ಣ ಪುಟ್ಟು ಗಾಯಗಳೊಂದಿಗೆ ಎಲ್ಲರೂ ಬದುಕುಳಿದಿದ್ದಾರೆ. ಉಲ್ಟಾ ಆಗಿ ಬಿದ್ದ ಕಾರಿನ ಒಳಗಿದ್ದ ಪ್ರಯಾಣಿಕರು ಕಷ್ಟಪಟ್ಟು ಡೋರ್ ತೆರೆದು ಹೊರಗಡೆ ಬಂದಿದ್ದಾರೆ. ಅಷ್ಟರಲ್ಲೇ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರ ನೆರವಿಗೆ ಧಾವಿಸಿದ್ದಾರೆ. 

ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

ಪ್ರಯಾಣಿಕರಿಗೆ ತರಚಿದ ಗಾಯಗಳಾಗಿವೆ. ಅದೃಷ್ಠವಶಾತ್ ಯಾರಿಗೂ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ಕಾರು ಅಪಘಾತದಲ್ಲಿ ನಜ್ಜುಗುಜ್ಜಾಗಿದೆ. ಟಾಟಾ ಪಂಚ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಇದರ ಜೊತೆಗೆ ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್,  ABS ಹಾಗೂ EBD ಬ್ರೇಕ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ರೇರ್ ಕ್ಯಾಮಾರ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಟಾಟಾ ಪಂಚ್ ಮೈಕ್ರೋ SUV ಕಾರು ಗ್ಲೋಬಲ್ NCAP ಟೆಸ್ಟ್‌ನಲ್ಲಿ ವಯಸ್ಕರ ಸುರಕ್ಷತೆಯ 17 ಅಂಕಗಳ ಪೈಕಿ 16.45 ರೇಟಿಂಗ್ ಪಡೆದಿದೆ. ಮಕ್ಕಳ ಪ್ರಯಾಣ ಸುರಕ್ಷತೆಯ 49 ಅಂಕಗಳ ಪೈಕಿ 40.89 ಅಂಕ ಸಂಪಾದಿಸಿದೆ. ಈ ಮೂಲಕ ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಂಚ್ ಪಾತ್ರವಾಗಿದೆ. 

ಟಾಟಾ ಪಂಚ್ ಕಾರು 1.2 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು 'ಟಾಟಾ ಪಂಚ್ ಎಂಜಿನ್್ 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪಂಚ್ ಕೇವಲ ಪೆಟ್ರೋಲ್ ಆಯ್ಕೆ ಮಾತ್ರ ಲಭ್ಯವಿದೆ. 

Follow Us:
Download App:
  • android
  • ios