Asianet Suvarna News Asianet Suvarna News

ಹಿಂದೂ ರಾಜರ, ಸಾಮ್ರಾಜ್ಯಗಳ ಬಗ್ಗೆ ಇತಿಹಾಸಕಾರರೇಕೆ ಬರೆದಿಲ್ಲ ಎಂದು ಪ್ರಶ್ನಿಸಿದ ಅಮಿತ್ ಶಾ!

ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮುಂತಾದವರ ಸಾಮ್ರಾಜ್ಯಗಳ ಬಗ್ಗೆ ಉಲ್ಲೇಖ ಪುಸ್ತಕಗಳನ್ನು ಬರೆಯಬೇಕು ಎಂದು ಹೇಳಿದ ಅಮಿತ್ ಶಾ, ಈ ಕೆಲಸವಾದಲ್ಲಿ ಭಾರತದ ಇತಿಹಾಸದ ನಿಜವಾದ ಸತ್ಯ ಹೊರಹೊಮ್ಮುತ್ತದೆ. ನಾವು ತಪ್ಪಾಗಿ ನಂಬಿರುವ ಇತಿಹಾಸವು ಕ್ರಮೇಣವಾಗಿ ಮರೆಯಾಗುತ್ತದೆ ಎಂದು ಹೇಳಿದ್ದಾರೆ.

Historians concentrated only on Mughals ignored  Pandyas Cholas Mauryas and Guptas says Union Home Minister Amit Shah san
Author
Bengaluru, First Published Jun 10, 2022, 8:10 PM IST | Last Updated Jun 10, 2022, 8:23 PM IST

ನವದೆಹಲಿ (ಜೂನ್ 10): ನಮ್ಮ ಇತಿಹಾಸಕಾರರು ( Indian historians ) ಮೊಘಲ್ ಸಾಮ್ರಾಜ್ಯದ (Mughal ) ಇತಿಹಾಸದ ಬಗ್ಗೆ ಮಾತ್ರವೇ ಹೆಚ್ಚಿನ ಗಮನ ನೀಡಿದ್ದಾರೆ. ಪಾಂಡ್ಯರು, ಚೋಳ, ಮೌರ್ಯ, ಗುಪ್ತ ಹಾಗೂ ಅಹೋಮರು ಸೇರಿದಂತೆ ಇನ್ನೂ ಹಲವು ಸುವರ್ಣ ಸಾಮ್ರಾಜ್ಯಗಳ ಇತಿಹಾಸವನ್ನು ಮರೆಮಾಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  (Union Home Minister Amit Shah ) ಹೇಳಿದ್ದಾರೆ.
 
ದೆಹಲಿಯಲ್ಲಿ ಶುಕ್ರವಾರ, "ಮಹಾರಾಣ: ಶಾಸ್ತ್ರ ವರ್ಷ ಕಾ ಧರ್ಮ ಯುದ್ಧ' ಪಸ್ತಕವನ್ನು ಬಿಡುಗಡೆ ಮಾತನಾಡಿದ ಅವರು, ಭಾರತದಲ್ಲಿ ಇತಿಹಾಸಕಾರರ ಮೊಘಲ್ ಪ್ರೇಮದ ಬಗ್ಗೆ ಮಾತನಾಡಿದರು. "ನಾನು ಇತಿಹಾಸಕಾರರಿಗೆ ಕುರಿತಾಗಿ ಇಲ್ಲಿ ಹೇಳಲು ಬಯಸುತ್ತೇನೆ. ನಮ್ಮ ದೇಶವನ್ನು ಅನೇಕ ಸಾಮ್ರಾಜ್ಯಗಳು ಆಳಿದವು. ಆದರೆ ಇತಿಹಾಸಕಾರರು ಮೊಘಲರ ಮೇಲೆ ಮಾತ್ರ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಮತ್ತು ಅವರ ಬಗ್ಗೆಯೇ ಹೆಚ್ಚಾಗಿ ದಾಖಲು ಮಾಡಿದ್ದಾರೆ. ಪಾಂಡ್ಯ ಸಾಮ್ರಾಜ್ಯವು 800 ವರ್ಷಗಳ ಕಾಲ ಭಾರತವನ್ನು ಆಳಿತು. ಅಹೋಮ್ ಸಾಮ್ರಾಜ್ಯವು 650 ವರ್ಷಗಳ ಕಾಲ ಅಸ್ಸಾಂ ಅನ್ನು ಆಳ್ವಿಕೆ ಮಾಡಿತ್ತು. ಭಕ್ತಿಯಾರ್ ಖಿಲ್ಜಿ, ಔರಂಗಜೇಬನಂಥವರನ್ನು ಸೋಲಿಸಿ ಅಸ್ಸಾಂನ ಸಾರ್ವಭೌಮತ್ವವನ್ನು ಅಹೋಮರು ಉಳಿಸಿಕೊಂಡಿದ್ದರು. ಪಲ್ಲವರು 600 ವರ್ಷಗಳ ಕಾಲ ಆಡಿದ್ದರು, ಚೋಳರು ಕೂಡ ದಕ್ಷಿಣ ಭಾರತವನ್ನು 600 ವರ್ಷಗಳ ಕಾಲ ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು' ಎಂದು ಅಮಿತ್ ಶಾ ಹೇಳಿದ್ದಾರೆ.

"ಮೌರ್ಯರು (Mauryas) ಇಡೀ ದೇಶವನ್ನುಅಫ್ಘಾನಿಸ್ತಾನದಿಂದ ಲಂಕಾದವರೆಗೆ 550 ವರ್ಷಗಳ ಕಾಲ ಆಳಿದರು. ಶಾತವಾಹನರು ಕೂಡ 500 ವರ್ಷಗಳ ಕಾಲ ಆಳಿದರು. ಗುಪ್ತರು 400 ವರ್ಷಗಳ ಕಾಲ ಆಳಿದರು ಮತ್ತು (ಗುಪ್ತ ಚಕ್ರವರ್ತಿ) ಸಮುದ್ರಗುಪ್ತನು ಮೊದಲ ಬಾರಿಗೆ ಅಖಂಡ ಭಾರತದ ಕಲ್ಪನೆ ಮೂಡಿದ್ದಲ್ಲದೆ. ಅಂಥದ್ದೊಂದು ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಇಡೀ ಅಖಂಡ ಭಾರತ ಗುಪ್ತರ ವಶದಲ್ಲಿತ್ತು.  ಆದರೆ, ಇವರೆಲ್ಲರ ಬಗ್ಗೆ ಉಲ್ಲೇಖ ಪುಸ್ತಕವೇ ಹೆಚ್ಚಾಗಿ ನಮಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.


ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮುಂತಾದವರ ಸಾಮ್ರಾಜ್ಯಗಳ ಬಗ್ಗೆ ಉಲ್ಲೇಖ ಪುಸ್ತಕಗಳನ್ನು ಬರೆಯಬೇಕು ಎಂದು ಹೇಳಿದ ಅಮಿತ್ ಶಾ, ಈ ಕೆಲಸವಾದಲ್ಲಿ ಭಾರತದ ಇತಿಹಾಸದ ನಿಜವಾದ ಸತ್ಯ ಹೊರಹೊಮ್ಮುತ್ತದೆ. ನಾವು ತಪ್ಪಾಗಿ ನಂಬಿರುವ ಇತಿಹಾಸವು ಕ್ರಮೇಣವಾಗಿ ಮರೆಯಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ದೇಶದ ಭವ್ಯ ಇತಿಹಾಸವನ್ನು ಸಾರ್ವಜನಿಕರ ಮುಂದೆ ಇಡಬೇಕು. ನಾವು ದೊಡ್ಡ ಪ್ರಯತ್ನಗಳನ್ನು ಮಾಡಿದಾಗ, ಸುಳ್ಳಿನ ಪ್ರಯತ್ನವು ಸ್ವಯಂಚಾಲಿತವಾಗಿ ಚಿಕ್ಕದಾಗುತ್ತದೆ. ಆದ್ದರಿಂದ, ನಮ್ಮ ಪ್ರಯತ್ನಗಳನ್ನು ದೊಡ್ಡದಾಗಿಸಲು ನಾವು ಹೆಚ್ಚು ಗಮನ ಹರಿಸಬೇಕು" ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

Sidhu Moose wala Case ಅಮಿತ್ ಶಾ ಭೇಟಿ ಮಾಡಿದ ಸಿಧು ಮೂಸೆ ವಾಲ ಕುಟುಂಬ, ದುಃಖ ತಡೆಯಲಾಗದೆ ಕಣ್ಣೀರಿಟ್ಟ ತಂದೆ!

ಇತಿಹಾಸವನ್ನು ಘಟನೆಯ ಫಲಿತಾಂಶದ ಆಧಾರದ ಮೇಲೆ ಬರೆಯಲಾಗುತ್ತದೆ, ಗೆಲುವು ಅಥವಾ ಸೋಲಿನ ಮೇಲೆ ಅಲ್ಲ ಎಂದು ಅವರು ಹೇಳಿದರು. ಸರ್ಕಾರ ಮತ್ತು ಪುಸ್ತಕಗಳ ಲೆಕ್ಕದಲ್ಲಿ ಇತಿಹಾಸ ನಿರ್ಮಾಣವಾಗುವುದಿಲ್ಲ ಎಂದ ಶಾ, ಘಟನೆಗಳ ಆಧಾರದ ಮೇಲೆ ಸತ್ಯವನ್ನು ರಚಿಸಲಾಗಿದೆ ಎಂದು ಹೇಳಿದರು. ಸತ್ಯವನ್ನು ಬರೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಶಾ ಹೇಳಿದರು. 'ನಾವು ಈಗ ಸ್ವತಂತ್ರರಾಗಿದ್ದೇವೆ. ನಮ್ಮ ಇತಿಹಾಸವನ್ನು ನಾವೇ ಬರೆಯಬಹುದು' ಎಂದು ಒತ್ತಿ ಹೇಳಿದರು.

ಕಾಶ್ಮೀರ ಹಿಂದುಗಳ ಸರಣಿ ಹತ್ಯೆ,ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ್ತ ಮಟ್ಟದ ಭದ್ರತಾ ಸಭೆ!

ಕೆಲವರು ನಿರಾಸೆ ಮೂಡಿಸುವ ರೀತಿಯಲ್ಲಿ ಇತಿಹಾಸ ಬರೆದಿರುವುದು ಸತ್ಯ ಎಂದು ಗೃಹ ಸಚಿವರು ಹೇಳಿದರು. "ಆದರೆ ಭಾರತವು ನಿರಾಸೆಯಿಂದಿಗೆ ಹೆಚ್ಚಿನ ಕಾಲ ಬದುಕದ ದೇಶವಾಗಿದೆ' ಎಂದು ಹೇಳಿದರು. "ಇದು ದಶಕಗಳಾಗಬಹುದು, 50 ವರ್ಷಗಳು ಅಥವಾ ನೂರು ವರ್ಷಗಳಾಗಬಹುದು ಆದರೆ ಕೊನೆಯಲ್ಲಿ ಸತ್ಯವೇ ಜಯಶಾಲಿಯಾಗುತ್ತದೆ" ಎಂದು ಅವರು ಹೇಳಿದರು.

 

Latest Videos
Follow Us:
Download App:
  • android
  • ios