Sidhu Moose wala Case ಅಮಿತ್ ಶಾ ಭೇಟಿ ಮಾಡಿದ ಸಿಧು ಮೂಸೆ ವಾಲ ಕುಟುಂಬ, ದುಃಖ ತಡೆಯಲಾಗದೆ ಕಣ್ಣೀರಿಟ್ಟ ತಂದೆ!
- ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ, ಅಮಿತ್ ಶಾ ಭೇಟಿ ಮಾಡಿದ ಕುಟುಂಬ
- ಪುತ್ರನ ಅಗಲಿಕೆ ನೋವು ತಡೆಯಲಾರದೆ ಶಾ ಮುಂದೆ ಕಣ್ಣೀರಿಟ್ಟ ತಂದೆ
- ಗ್ಯಾಂಗ್‌ಸ್ಟರ್ ವಾರ್ ಅಂತ್ಯಗೊಳಿಸಿ ನ್ಯಾಯಕೊಡಿಸುವಂತೆ ಮನವಿ
ಚಂಡೀಘಡ(ಜೂ.04): ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಬಳಿಕ ಪಂಜಾಬ್‌ನ ಗ್ಯಾಂಗ್‌ಸ್ಟರ್ ವಾರ್ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದರ ನಡುವೆ ಸಿಧು ಮೂಸೆ ವಾಲಾ ಪೋಷಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚಂಡಿಘಡದಲ್ಲಿ ಅಮಿತ್ ಶಾ ಭೇಟಿಯಾದ ಪೋಷಕರು ಪುತ್ರನ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ದುಖ ತಡೆಯಲಾಗದೆ ಸಿಧು ತಂದೆ ಕಣ್ಣೀರಿಟ್ಟಿದ್ದಾರೆ.
ಸಿಧು ಮೂಸೆ ವಾಲ ಪೋಷಕರ ಮಾತುಗಳನ್ನು ಆಲಿಸಿದ ಅಮಿತ್ ಶಾ, ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಿಧು ತಂದೆ ಹಾಗೂ ತಾಯಿ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸಿಧು ಮೂಸೆವಾಲಾ ಕೊಲೆ ಬಳಿಕ ಎಚ್ಚೆತ್ತ ಪಂಜಾಬ್ ಸರ್ಕಾರ, 424 ವಿವಿಐಪಿಗಳಿಗೆ ಭದ್ರತೆ ಮರುನಿಯೋಜಿಸಲು ನಿರ್ಧಾರ!
ನಿನ್ನೆ(ಜೂ.03) ಪಂಜಾಬ್ ಸಿಎಂ ಭಗವಂತ್ ಮಾನ್ ಗಾಯಕನ ಮನೆಗೆ ಭೇಟಿ ನೀಡಿದ್ದರು. ಸಿಧು ಹತ್ಯೆಗೆ ಆಪ್ ಸರ್ಕಾರ ಹಾಗೂ ಸಿಎಂ ಮಾನ್ ನೇರ ಹೊಣೆ ಎಂದು ಪ್ರತಿಭಟನೆ ನಡೆಯುತ್ತಿದೆ.ಪ್ರತಿಭಟನೆ ನಡುವೆ ಸಿಧು ಮೂಸೆ ವಾಲಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ತನಿಖೆ ನಡೆಸಿ ಎಲ್ಲಾ ತಪ್ಪಿತಸ್ಥರನ್ನು ಕಾನೂನಿನ ರೀತಿಯಲ್ಲಿ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪಂಜಾಬ್ ಬಿಜೆಪಿ ತೀವ್ರ ಹೋರಾಟ ನಡೆಸುತ್ತಿದೆ. ಸಿಬಿಐ ತಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇಷ್ಟೇ ಅಲ್ಲ ಸಿಎಂ ಭಗವಂತ್ ಮಾನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸಿಧು ಭದ್ರತೆ ವಾಪಸ್ ಪಡೆದ ಮರುದಿನವೇ ಹತ್ಯೆ ನಡೆದಿತ್ತು. ಹೀಗಾಗಿ ಮಾನ್ ಸರ್ಕಾರದ ವಿರುದ್ದ ತೀವ್ರ ಟೀಕೆ ಕೇಳಿಬಂದಿತ್ತು. ಇದೀಗ ಆಪ್ ಸರ್ಕಾರ ಭದ್ರತೆ ವಾಪಸ್ ಪಡೆದ ಎಲ್ಲಾ 412 ವಿಐಪಿಗಳಿಗೆ ಭದ್ರತೆ ವಾಪಸ್ ನೀಡಿದೆ.
ನನ್ನ ಅಣ್ಣನ ಹತ್ಯೆಗೆ ಪ್ರತೀಕಾರವಾಗಿ ಸಿಧು ಹತ್ಯೆ
ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆಯಲ್ಲಿ ತಮ್ಮದೇ ಗ್ಯಾಂಗ್ ಸದಸ್ಯರ ಕೈವಾಡವಿದೆ ಎಂದು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
‘ನನ್ನ ಹಿರಿಯ ಸಹೋದರ ವಿಕ್ಕಿ ಮಿದ್ದುಖೇರಾನ ಗ್ಯಾಂಗ್, ಮೂಸೇವಾಲಾನ ಹತ್ಯೆ ಮಾಡಿದೆ. ಇದು ನನ್ನ ಕೆಲಸವಲ್ಲ. ನಾನು ಜೈಲಿನಲ್ಲಿದ್ದೆ. ಫೋನು ಕೂಡಾ ಬಳಕೆ ಮಾಡಲಿಲ್ಲ. ಹೀಗಾಗಿ, ಹತ್ಯೆಯಲ್ಲಿ ತನ್ನ ಕೈವಾಡವಿಲ್ಲ’ ಎಂದು ಬಿಷ್ಣೋಯ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗಾಯಕ ಸಿಧು ಮೂಸೇವಾಲಾ ಹತ್ಯೆ: ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ!
ಸಿಧು ಹಂತಕರ ಸಿಸಿಟೀವಿ ಪತ್ತೆ:
ಸಿಧು ಅವರ ಹತ್ಯೆಯ 4 ದಿನಗಳ ಮುಂಚಿತವಾಗಿ ಹಂತಕರು ಕಾರಿನಲ್ಲಿ ಹರಾರಯಣದ ಫತೇಹಾಬಾದ್ ಜಿಲ್ಲೆಯಿಂದ ಪಂಜಾಬಿನ ಮಾನ್ಸಾಗೆ ಬಂದ ಸಿಸಿಟೀವಿ ವಿಡಿಯೋ ಪತ್ತೆಯಾಗಿದೆ.
ಸಿಎಂ ಸಾಂತ್ವನ: ಈ ನಡುವೆ ಪಂಜಾಬ್ ಸಿಎಂ ಭಗವತ್ ಸಿಂಗ್ ಮಾನ್, ಶುಕ್ರವಾರ ಮೂಸೇವಾಲಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಸಿಧು ಹತ್ಯೆ ಕುರಿತು ಸಿಬಿಐ ತನಿಖೆಗೆ ಮನವಿ ಮಾಡಿ ಪಂಜಾಬ್‌ನ ಬಿಜೆಪಿ ನಾಯಕ ಜಗಜೀತ್ ಸಿಂಗ್ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ.