Asianet Suvarna News Asianet Suvarna News

ಇಸ್ತ್ರಿ ಪೆಟ್ಟಿಗೆ-ಮಹಿಳೆ, ಬಿಸಿಯಾದ್ರೆ ಬೆಂಕಿ, ಪರೀಕ್ಷೆಯಲ್ಲಿ ವಿದ್ಯಾರ್ಥಿ ಉತ್ತರಕ್ಕೆ ಫುಲ್ ಮಾರ್ಕ್ಸ್!

ಎಷ್ಟು ವಿವಿಧದ ಇಸ್ತ್ರಿ ಪೆಟ್ಟಿಗೆ ಇದೆ. ಇದು ಹಿಂದಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ. ಇದಕ್ಕೆ ವಿದ್ಯಾರ್ಥಿ ಬರೆದ ಉತ್ತರ ಇದೀಗ ವೈರಲ್ ಆಗಿದೆ. ಇಷ್ಟೇ ಅಲ್ಲ ಶಿಕ್ಷಕಿ 10ಕ್ಕೆ 10 ಅಂಕ ನೀಡಿ ವೆರಿ ಗುಡ್ ಎಂದಿದ್ದಾರೆ. ಈ ಉತ್ತರ ಇದೀಗ ಎಲ್ಲರ ಗಮನಸೆಳೆದಿದೆ.

Hindi teacher share Student compare Iron box and Woman in Exam answer sheet goes viral ckm
Author
First Published May 31, 2024, 3:01 PM IST

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆಯುವ ಉತ್ತರಗಳು ಹಲವು ಬಾರಿ ವೈರಲ್ ಆಗಿದೆ. ಶಿಕ್ಷಕರು ಈ ರೀತಿಯ ಉತ್ತರ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ದೇಶದ ಗಮನ ಸೆಳೆದ ಹಲವು ಘಟನೆಗಳಿವೆ. ಇದೀಗ ವಿದ್ಯಾರ್ಥಿಯ ಉತ್ತರಕ್ಕೆ ಟೀಚರ್ ಫುಲ್ ಮಾರ್ಕ್ಸ್ ನೀಡಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹಿಂದಿ ಪರೀಕ್ಷೆಯಲ್ಲಿ ಎಷ್ಟು ವಿದಧ ಇಸ್ತ್ರಿ ಪೆಟ್ಟಿಗೆ ಇದೆ? ಅನ್ನೋ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವಿದ್ಯಾರ್ಥಿ 2 ವಿಧ, ಒಂದು ಬೆಟ್ಟೆಯನ್ನು ರಿಂಕಲ್ಸ್ ತೆಗೆದು ನೇರ ಮಾಡಲು ಇಸ್ತ್ರಿ ಪೆಟ್ಟಿಗೆ, ಮತ್ತೊಂದು ಮಹಿಳಾ ಇಸ್ತ್ರಿ ಎಂದಿದ್ದಾನೆ.

ಮಹಿಳಾ ಇಸ್ತ್ರಿಗೆ ವಿವರಣೆಯನ್ನೂ ನೀಡಿದ್ದಾರೆ. ಈ ವಿವರಣೆ ನಿಮ್ಮನ್ನು ಒಂದು ಕ್ಷಣ ಯೋಚನೆ ಮಾಡುವಂತೆ ಮಾಡುವುದು ಸುಳ್ಳಲ್ಲ. ಒಂದು ಬಟ್ಟೆಯ ರಿಂಕಲ್ಸ್ ನೇರ ಮಾಡುವ ಇಸ್ತ್ರಿ ಪೆಟ್ಟಿಗೆ, ಮತ್ತೊಂದು ಪುರುಷರನ್ನು ನೇರ ಮಾಡುವ ಮಹಿಳಾ ಇಸ್ತ್ರಿ ಪೆಟ್ಟಿಗೆ.  ಎರಡೂ ಕೂಡ ಬಿಸಿಯಾದಾಗ ಬೆಂಕಿ ಹೆಚ್ಚುತ್ತೆ ಎಂದು ಉತ್ತರ ಬರೆದಿದ್ದಾನೆ.

ವೆಡ್ಡಿಂಗ್ ಶೂಟ್‌‌ನಲ್ಲಿ ನಾಚಿ ನೀರಾದ ಜೋಡಿಗೆ ನಿರ್ದೇಶಕನಾದ ಅಂಬಿಗ, ವೈರಲ್ ವಿಡಿಯೋ!

ವಿದ್ಯಾರ್ಥಿಯ ಈ ಉತ್ತರ ನೋಡಿ ಹಿಂದಿ ಟೀಚರ್‌ಗೆ ನಗು ತಡೆಯಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ವಿದ್ಯಾರ್ಥಿಯ ಲಾಜಿಕ್‌ಗೆ ಅಂಕ ನೀಡದೆ ಇರಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದಿ ಟೀಚರ್ 10ಕ್ಕೆ 10 ಅಂಕ ನೀಡಿದ್ದಾರೆ. ಇಷ್ಟೇ ಅಲ್ಲ ವೆರಿ ಗುಡ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗನೆ ನೀನು ಕಮಾಲ್ ಮಾಡಿದ್ದೀಯಾ ಎಂದು ಉತ್ತರ ಪತ್ರಿಕೆಯಲ್ಲಿ ಟೀಚರ್ ಬರೆದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Neeru prajapati 20 (@n2154j)

 

ಈ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಂದೆಡೆ ವಿದ್ಯಾರ್ಥಿ ಉತ್ತರ ಸರಿಯಾಗಿದೆ. ಜೀವನದಲ್ಲಿ ಬಟ್ಟೆ ಇಸ್ತ್ರಿ ಹಾಕುವ ಇಸ್ತ್ರಿ ಪಟ್ಟೆಗೆ ನಮ್ಮಿಂದ ದೂರವಾಗಿ, ಮಹಿಳಾ ಇಸ್ತ್ರಿ ಪೆಟ್ಟಿಗೆ ಪದೇ ಪದೇ ನಮ್ಮನ್ನೂ ಬಿಸಿ ಮಾಡುತ್ತಾ ಇರುತ್ತೆ ಎಂದಿದ್ದಾರೆ. ಇದೇ ವೇಳೆ ಹಲವರು ಇದು ಪ್ರಚಾರಕ್ಕಾಗಿ ಮಾಡಿದ ನಾಟಕ ಎಂದು ಪ್ರತಿಕ್ರಿಯಿಸಿದ್ದಾರೆ.

ಮಕ್ಕಳ ಮೇಲೆ ದಾಳಿ ನಡೆಸಿ ಮಗು ಹೊತ್ಯೊಯ್ದ ಕೋತಿ, ಕಂದನ ಉಳಿಸಲು ಪೋಷಕರ ಹೋರಾಟ ವಿಡಿಯೋ!

ಇಲ್ಲಿ ಟೀಚರ್ ಹಾಗೂ ವಿದ್ಯಾರ್ಥಿ ಇಬ್ಬರೂ ಒಂದೇ, ವಿಡಿಯೋ ವೈರಲ್ ಆಗಲು, ಹೆಚ್ಚು ಲೈಕ್ಸ್, ಕ್ಲಿಕ್ಸ್ ಬರಲು ಈ ರೀತಿ ಮಾಡಲಾಗಿದೆ. ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಲು ಕೆಲವು ಮಾನದಂಡಗಳಿವೆ. ಜೊತೆಗೆ ಉತ್ತರ ಪತಿಕ್ರಿಯೆಲ್ಲಿ ಟೀಚರ್ಸ್ ಬೇಕಾಬಿಟ್ಟಿ ಬರೆಯುವಂತಿಲ್ಲ. ಒಟ್ಟು ಪ್ರಸಂಗ ಪ್ರಚಾರದ ಗಿಮಿಕ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios