Asianet Suvarna News Asianet Suvarna News

ಮಕ್ಕಳ ಮೇಲೆ ದಾಳಿ ನಡೆಸಿ ಮಗು ಹೊತ್ಯೊಯ್ದ ಕೋತಿ, ಕಂದನ ಉಳಿಸಲು ಪೋಷಕರ ಹೋರಾಟ ವಿಡಿಯೋ!

ಮಕ್ಕಳು ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಕೋತಿಯೊಂದು ಭೀಕರ ದಾಳಿ ನಡೆಸಿದೆ. ಕೋತಿ ದಾಳಿಗೆ ದೊಡ್ಡ ಮಕ್ಕಳು ಓಡಿದರೆ, ಪುಟ್ಟ ಮಗುವನ್ನು ಕೋತಿ ಕಚ್ಚಿ ಹೊತ್ತೊಯ್ದಿದೆ. ಈ ವೇಳೆ ಪೋಷಕರು ಮಧ್ಯಪ್ರವೇಶಿಸಿ ಹೋರಾಟ ನಡೆಸಿದರೂ ಕೋತಿ ಮಾತ್ರ ಸತತ ದಾಳಿ ನಡೆಸಿದ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.
 

Monkey Attacks Baby and try to snatch while playing with other childrens viral Video ckm
Author
First Published May 30, 2024, 7:19 PM IST

ಬೀದಿ ನಾಯಿ ದಾಳಿ, ಕೋತಿ ದಾಳಿ, ಹಸು ದಾಳಿ ಸೇರಿದಂತೆ ಹಲವು ದಾಳಿಗಳಿಂದ ಗಂಭೀರವಾಗಿ ಗಾಯಗೊಂಡ ಹಾಗೂ ಮೃತಪಟ್ಟ ಘಟನೆಗಳು ವರದಿಯಾಗಿದೆ. ಇದೀಗ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಕಾಡಿನ ಕೋತಿಯೊಂದು ದಾಳಿ ನಡೆಸಿದ ಘಟನೆ ನಡೆದಿದೆ. ಕೋತಿ ದಾಳಿ ನಡೆಸುತ್ತಿದ್ದ ದೊಡ್ಡ ಮಕ್ಕಳು ಭಯದಿಂದ ಓಡಿದ್ದಾರೆ. ಆದರೆ ಅಳುತ್ತಲೇ ಕುಳಿತಿದ್ದ ಪುಟ್ಟ ಮಗುವಿನ ಕೋತಿ ಭೀಕರವಾಗಿ ದಾಳಿ ನಡೆಸಿದೆ. ಮಗುವನ್ನು ಹೊತ್ತೊಯ್ತುತ್ತಿದ್ದಂತೆ ಪೋಷಕರು ಮಧ್ಯ ಪ್ರವೇಶಿಸಿದರೂ ಕೋತಿ ಮಾತ್ರ ಬಿಡದೆ ದಾಳಿ ಮಾಡಿದ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

ಮನೆಯ ಮುಂಭಾಗದಲ್ಲೇ ಮಕ್ಕಳು ಆಡವಾಡುತ್ತಿದ್ದರು. ಪುಟ್ಟ ಮಗು ಮರದ ಮೆಟ್ಟಿಲುಗಳ ಮೇಲೆ ಕುಳಿತಿತ್ತು. ಇತ್ತ ಇತರ ಮಕ್ಕಳು ಮಗುವನ್ನು ಸುತ್ತುವರಿದು ಆಟವಾಡುತ್ತಿದ್ದರು. ಇತ್ತ ಪೊಷಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕುಳಿತು ಆಟವಾಡುತ್ತಿದ್ದ ಕಾರಣ ಪೋಷಕರು ಮಕ್ಕಳ ಕುರಿತು ಹೆಚ್ಚಿನ ಗನಹರಿಸಲು ಹೋಗಿಲ್ಲ. ಇತ್ತ ಕೋತಿಯೊಂದು ನೇರವಾಗಿ ಮಕ್ಕಳ ಮೇಲೆ ದಾಳಿ ನಡೆಸಿದೆ.

ಥಾಯ್ಲೆಂಡ್‌ನ ಪ್ರಸಿದ್ಧ ಪ್ರವಾಸಿ ನಗರವನ್ನೇ ತೆಕ್ಕೆಗೆ ತೆಗೆದುಕೊಂಡ ಮಂಗಗಳ ಸೈನ್ಯ!

ಕೋತಿ ದಾಳಿ ನಡೆಸುತ್ತಿದ್ದಂತೆ ಭಯಭೀತಗೊಂಡ ಮಕ್ಕಳು ಓಡಿದ್ದಾರೆ. ಆದರೆ ಪುಟ್ಟ ಮಗು ಅಲ್ಲೇ ಉಳಿದಿದೆ. ಕೋತಿ ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯ್ಯಲು ಪ್ರಯತ್ನ ನಡೆಸಿದೆ. ಮಗುವಿನ ಅಳುವ ಧ್ವನಿ ಕೇಳಿಸುತ್ತಿದ್ದಂತೆ ಪೋಷಕರು ಓಡೋಡಿ ಬಂದು ಮಗುವನ್ನು ಎತ್ತಿಕೊಂಡಿದ್ದಾರೆ. ಆದರೆ ಕೋತಿ ಮಾತ್ರ ಬಿಡಲೇ ಇಲ್ಲ.

 

 

ಪೋಷಕರ ಕೈಯಿಂದ ಮಗುವನ್ನು ಹಿಡಿದು ಎಳೆದಿದೆ. ಬಳಿಕ ಪೋಷಕರ ಮೇಲೂ ದಾಳಿ ನಡೆಸಿದೆ. ಮಗುವನ್ನು ತಾಯಿ ಎತ್ತಿಕೊಂಡರೂ ತಾಯಿ ಮೇಲೂ ಕೋತಿ ದಾಳಿ ನಡೆಸಿದೆ. ತಂದೆ ಕೋತಿಯನ್ನು ಓಡಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಇತ್ತ ಮಗುವನ್ನು ಎತ್ತಿಕೊಂಡು ತಾಯಿ ಮನೆಯೊಳಗೆ ಓಡಿದರೆ ಕೋತಿ ಕೂಡ ಮಗುವನ್ನು ಹಿಡಿದೆಳೆದು ಹೊತ್ತೊಯ್ಯಲು ಕೋತಿ ಕೂಡ ಹಿಂದೆ ಓಡಿದೆ. ಬಳಿಕ ಏನಾಯಿತು ಅನ್ನೋ ಮಾಹಿತಿ ದೃಶ್ಯದಲ್ಲಿಲ್ಲ. ಈ ಘಟನೆ ವಿದೇಶದಲ್ಲಿ ನಡೆದಿದೆ. ಆದರೆ ನಿಗದಿತ ಸ್ಥಳ ಹಾಗೂ ದಿನಾಂಕದ ಕುರಿತು ಮಾಹಿತಿ ಇಲ್ಲ.

ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಧೈರ್ಯವಾಗಿ ಕೋತಿಯನ್ನು ಎದುರಿಸಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ತಂದೆ ಪ್ರಯತ್ನ ಅಷ್ಟಕಷ್ಟೆ ಎಂದು ಪ್ರತಿಕ್ರಿಯಿಸಿದ್ದಾರೆ.

Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !
 

Latest Videos
Follow Us:
Download App:
  • android
  • ios