ಪ್ರೀ ವೆಡ್ಡಿಂಗ್ ಶೂಟ್‌ಗೆ ಬಂದ ನವ ಜೋಡಿ ನಾಚಿ ನೀರಾಗಿ ಫೋಟೋ ಪೋಸ್ ನೀಡಲು ಸಾಧ್ಯವಾಗಿಲ್ಲ. ಈ ವೇಳೆ ದೋಣಿ ನಡೆಸುವ ಅಂಬಿಗ ನವ ಜೋಡಿಗೆ ಫೋಟೋಗೆ ಐಕಾನಿಕ್ ಪೋಸ್ ಹೇಳಿಕೊಟ್ಟು ನಿರ್ದೇಶಕನಾದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಹೈದರಾಬಾದ್(ಮೇ.31) ಪ್ರೀ ವೆಡ್ಡಿಂಗ್ ಶೂಟ್ ಇದೀಗ ಸಾಮಾನ್ಯ. ಜೋಡಿಗಳು ಸುಂದರ ತಾಣಕ್ಕೆ ತೆರಳಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹೀಗೆ ನದಿಯಲ್ಲಿ ದೋಣಿ ಮೇಲೆ ನಿಂತು ಫೋಟೋ ಶೂಟ್ ಮಾಡಲು ಬಂದ ಜೋಡಿ ನಾಚಿ ನೀರಾಗಿದೆ. ಫೋಟೋಗೆ ಪೋಸ್ ನೀಡಲು ಸಾಧ್ಯವಾಗದೆ ಪರದಾಡಿದೆ. ಈ ವೇಳೆ ದೋಣಿ ನಡೆಸುವಾತನೇ ನವ ಜೋಡಿಗೆ ಐಕಾನಿಕ್ ಫೋಟೋ ಪೋಸ್ ಹೇಳಿಕೊಟ್ಟು ನಿರ್ದೇಕನಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ನವ ಜೋಡಿ ತಮ್ಮ ಪ್ರೀ ವೆಡ್ಡಿಂಗ್ ಶೂಟ್‌ಗೆ ಪ್ಲಾನ್ ಮಾಡಿದೆ. ಫೋಟೋಗ್ರಾಫರ್ ಕರೆದುಕೊಂಡು ನದಿಯಲ್ಲಿ ಶೂಟ್ ಮಾಡಲು ಮುಂದಾಗಿದೆ. ಸಣ್ಣ ದೋಣಿಯಲ್ಲಿ ಫೋಟೋ, ವಿಡಿಯೋ ಶೂಟ್ ಮಾಡಲು ನಿರ್ಧರಿಸಿದೆ. ನದಿಯಲ್ಲಿ ಜನರನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಕರೆದುಕೊಂಡು ಹೋಗುವ ಸಣ್ಣ ದೋಣಿಯಲ್ಲಿ ಶೂಟ್ ಮಾಡಲು ಅಂಬಿಗನ ಬಳಿ ಮನವಿ ಮಾಡಿದ್ದಾರೆ. ಬಾಡಿಗೆ ನೀಡಿ ಅಂಬಿಗನ ಜೊತೆ ನದಿಯಲ್ಲಿ ತೆರಳಿದ್ದಾರೆ. ನದಿ ನಡುವಿನಲ್ಲಿ ದೋಣಿಯಲ್ಲಿ ಫೋಟೋ ಶೂಟ್ ಆರಂಭಗೊಂಡಿದೆ.
Pre Wedding Shoot ಮಾಡಲು ಪ್ಲ್ಯಾನ್ ಮಾಡಿದ್ದೀರಾ? ಈ ತಾಣಗಳು ಬೆಸ್ಟ್
ಫೋಟೋಗ್ರಾಫರ್‌ಗೆ ಹೆಚ್ಚಿನ ಪೋಸ್ ತಿಳಿದಿಲ್ಲ. ಇತ್ತ ನವ ಜೋಡಿಗಳು ನಾಚಿ ನೀರಾಗಿ ಅತ್ತ ಪೋಸ್ ನೀಡಲು ಸಾಧ್ಯವಾಗದೇ ಇತ್ತ, ಡ್ಯಾನ್ಸ್ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಂತಿದೆ. ಕೆಲ ಹೊತ್ತು ಇವರ ಫೋಟೋ ಶೂಟ್ ನೋಡಿದ ದೋಣಿಯ ಅಂಬಿಗ ನವ ಜೋಡಿಯ ಬಳಿ ಬಂದು ಫೋಟೋಗೆ ಫೋಸ್ ಹೇಗೆ ನೀಡಬೇಕು ಎಂದು ಹೇಳಿಕೊಟ್ಟಿದ್ದಾನೆ.
ಸಾಮಾನ್ಯ ಅಂಬಿಗ ಕೆಲ ಐಕಾನಿಕ್ ಫೋಸ್‌ಗಳನ್ನು ನವ ಜೋಡಿಗೆ ಹೇಳಿಕೊಟ್ಟಿದ್ದಾನೆ. ವಿಶೇಷವಾಗಿ ಸಿನಿಮಾದಲ್ಲಿ ಬರುವ ರೋಮ್ಯಾಂಟಿಕ್ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಟ್ಟಿದ್ದಾನೆ. ಇತ್ತ ಒಂದರ ಮೇಲೊಂದರಂತೆ ಪೋಸ್ ಹೇಳಿಕೊಟ್ಟಿದ್ದಾನೆ. ಕೆಲ ಫೋಟೋ ಪೋಸ್ ನಿಜಕ್ಕೂ ಅದ್ಭುತವಾಗಿದೆ. ಅಂಬಿಗ ಹೇಳಿಕೊಟ್ಟ ಹಾಗೆ ನವ ಜೋಡಿ ಮಾಡುವಲ್ಲಿ ವಿಫಲವಾಗಿದೆ. ಆದರೂ ಅಂಬಿನ ಪ್ರಯತ್ನದಿಂದ ನವ ಜೋಡಿ ವಿವಿಧ ಪೋಸ್‌ನಲ್ಲಿ ಫೋಟೋ, ವಿಡಿಯೋ ಶೂಟ್ ಮಾಡಿದೆ.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಂಬಿಗನ ದೋಣಿಯಲ್ಲಿ ಈಗಾಗಲೇ ಹಲವರು ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡಿದ ಅಂಬಿಗ ಇದೀಗ ನವ ಜೋಡಿಗೆ ನಿರ್ದೇಕನಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..
