ನವದೆಹಲಿ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜಾನಪದ ಕಲಾವಿದರೊಂದಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜಾನಪದ ಕಲಾವಿದರೊಂದಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರ ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾನಪದ ಕಲಾವಿದರೊಂದಿಗೆ ಜಾನಪದ ಹಾಡುಗಳಿಗೆ ಮುಖ್ಯಮಂತ್ರಿ ಕಾಲು ಕುಣಿಸಿದರು. ಕೆಂಪು ಹಾಗೂ ಕಪ್ಪು ಮಿಶ್ರಿತ ಸಂಪ್ರದಾಯಿಕ ಧಿರಿಸು ಧರಿಸಿರುವ ಕಲಾವಿದರ ಜೊತೆ ಸಿಎಂ, ಅವರಂತೆ ನೃತ್ಯ ಮಾಡುತ್ತಿದ್ದಾರೆ. ಸಿಎಂ ನೃತ್ಯ ಮಾಡುತ್ತಿರುವ ವಿಡಿಯೋ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸುಮಾರು 29.74 ಕೋಟಿ ರೂಪಾಯಿ ವೆಚ್ಚದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.ಹಿಮಾಚಲ ಪ್ರದೇಶದ ಜನರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರದ ಬದ್ಧತೆಯನ್ನು ಮುಖ್ಯಮಂತ್ರಿ ಠಾಕೂರ್ ಪುನರುಚ್ಚರಿಸಿದ್ದು, ರಾಜ್ಯ ಸರ್ಕಾರ ತನ್ನ ಮೊದಲ ಸಂಪುಟ ಸಭೆಯಲ್ಲಿ ವೃದ್ಧಾಪ್ಯ ವೇತನದ ವಯೋಮಿತಿಯನ್ನು 80 ರಿಂದ 70 ವರ್ಷಕ್ಕೆ ಇಳಿಸಲಾಗಿತ್ತು. ನಂತರ ಅದನ್ನು ಮತ್ತೆ 60 ವರ್ಷಕ್ಕೆ ಇಳಿಸಲಾಗಿದೆ ಎಂದರು.
ಪ್ರಿಯಾಂಕ ಗಾಂಧಿ ಮನೆ ಕೆಡವಲು ಆಗ್ರಹ; ಭಿನ್ನ ನಿರ್ಧಾರದಿಂದ ಮಾದರಿಯಾದ ಹಿಮಾಚಲ ಪ್ರದೇಶ ಸಿಎಂ!
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸರ್ಕಾರವು ಸಹಾರಾ ಯೋಜನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಜೊತೆಗೆ ಹಿಮ್‌ಕೇರ್ ಯೋಜನೆಯು ಸಹ ಬಡ ಜನರಿಗೆ ಸಹಾಯ ಹಸ್ತ ನೀಡಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಹಿಮ್‌ಕೇರ್ ಕಾರ್ಡ್‌ದಾರರು ಉಚಿತ ಚಿಕಿತ್ಸೆ ಪಡೆಯುತ್ತಾರೆ ಸಿಎಂ ಠಾಕೂರ್ ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ:
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಈ ವರ್ಷದ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ನಾವು ಜುಲೈ 24 ರಂದು ಮುಖ್ಯಮಂತ್ರಿಗಳ ಪರಿಷತ್ತಿನ ಸಭೆ ನಡೆಸಿದ್ದೇವೆ. ಎಲ್ಲಾ ಮುಖ್ಯಮಂತ್ರಿಗಳು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಹಿಮಾಚಲ ಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ನಾನು ವಿವರವಾದ ಚರ್ಚೆಯನ್ನು ನಡೆಸಿದ್ದೇನೆ ಅದರಲ್ಲಿ ಎರಡು ವಿಷಯಗಳನ್ನು ವಿವರವಾಗಿ ಚರ್ಚಿಸಲಾಗಿದೆ. ನಾನು ಇದನ್ನು ಪಕ್ಷದ ಸಹೋದ್ಯೋಗಿಗಳೊಂದಿಗೆ ಮತ್ತಷ್ಟು ಚರ್ಚಿಸುತ್ತೇನೆ ಮತ್ತು ನಮ್ಮ ಚುನಾವಣಾ ಪ್ರಚಾರವನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ ಎಂದು ಠಾಕೂರ್ ಹೇಳಿದ್ದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜೊತೆ ಜಮ್ಮು-ಕಾಶ್ಮೀರಕ್ಕೂ ಚುನಾವಣೆ?