Asianet Suvarna News Asianet Suvarna News

ಗುಜರಾತ್‌, ಹಿಮಾಚಲ ಪ್ರದೇಶ ರಾಜ್ಯಗಳ ಜೊತೆ ಜಮ್ಮು-ಕಾಶ್ಮೀರಕ್ಕೂ ಚುನಾವಣೆ?

ಗುಜರಾತ್ ಮತ್ತು ಹಿಮಾಚಲ ಪ್ರದೇಶದೊಂದಿಗೆ ಈ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಚುನಾವಣೆ ನಡೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
 

Assembly elections in Jammu and Kashmir will be held in November December along with Gujarat Himachal says sources san
Author
Bengaluru, First Published Jul 19, 2022, 11:23 AM IST

ನವದೆಹಲಿ (ಜುಲೈ.19): ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರ ಮಾರ್ಪಡಿಸಿತ್ತು. ಈಗ ಈ ರಾಜ್ಯಕ್ಕೆ ಚುನಾವಣೆ ನಡೆಸಿ ರಾಜ್ಯ ಸರ್ಕಾರವನ್ನು ರಚಿಸುವ ಸಿದ್ಧತೆ ಆರಂಭಿಸಿದೆ. ಚುನಾವಣಾ ಆಯೋಗ ಈಗಾಗಲೇ ಮುಂದಿನ ನವೆಂಬರ್‌ನಲ್ಲಿ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಇದೇ ವೇಳೆ ಜಮ್ಮು ಕಾಶ್ಮೀರ ರಾಜ್ಯಕ್ಕೂ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ ಎಂದು ದೈನಿಕ್‌ ಭಾಸ್ಕರ್‌ ಚುನಾವಣಾ ಆಯೋಗದ ಪ್ರಮಖ ಮೂಲಗಳನ್ನು ಅಧರಿಸಿ ವರದಿ ಮಾಡಿದೆ.  2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಲಾದ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯಲಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಲಿದೆ. ಇದು ಮಾತ್ರವಲ್ಲ, ಈ ಚುನಾವಣೆ ನಡೆದ ಬಳಿಕ, ಜಮ್ಮು-ಕಾಶ್ಮೀರದಲ್ಲಿ ಆಡಳಿತದಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಇರುವಂತೆ ಇಲ್ಲಿ ವಿಧಾನಸಭೆಯ ಆಯಸ್ಸು ಮೂಡ 5 ವರ್ಷದ್ದಾಗಿರಲಿದೆ. ಇಲ್ಲಿಯವರೆಗೂ ವಿಶೇಷಾಧಿಕಾರದ ಕಾರಣಕ್ಕೆ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ 6 ವರ್ಷ ಅವಧಿ ನೀಡಲಾಗಿತ್ತು. 

ಡಿಲಿಮಿಟೇಶನ್ ಕಾರ್ಯ (  Delimitation of Assembly seats) ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗದ (Election Commission Of India) ಮೂಲಗಳು ತಿಳಿಸಿವೆ. ಪರಿಷ್ಕೃತ ಮತದಾರರ ಪಟ್ಟಿಯನ್ನು ಅಕ್ಟೋಬರ್ 31 ರವರೆಗೆ ನೀಡಬಹುದು. ಮತಗಟ್ಟೆ ಅಂತಿಮಗೊಳಿಸುವ  ಕಾರ್ಯವೂ ಅಂತಿಮ ಹಂತದಲ್ಲಿದೆ. ಇದೂ ಕೂಡ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳಲಿದೆ.

ಈಗ ವಿಧಾನಸಭೆ 90 ಸ್ಥಾನಗಳಾಗಲಿದೆ:  ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ವಿಧಾನಸಭೆಯಲ್ಲಿ ಒಟ್ಟು 87 ಸ್ಥಾನಗಳಿದ್ದವು. ಲಡಾಖ್ ಇದರಲ್ಲಿ 4 ಸ್ಥಾನಗಳನ್ನು ಒಳಗೊಂಡಿತ್ತು, ಆದರೆ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ, ಜಮ್ಮು ಮತ್ತು ಕಾಶ್ಮೀರ (Jammu and Kashmir) ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆಯನ್ನು 83ಕ್ಕೆ ಇಳಿದಿತ್ತು. ಡಿಲಿಮಿಟೇಶನ್ ನಂತರ 7 ಸ್ಥಾನಗಳು ಹೆಚ್ಚಾಗಿದೆ. ಇದರ ನಂತರ ಒಟ್ಟು ಸ್ಥಾನಗಳ ಸಂಖ್ಯೆ 90 ಕ್ಕೆ ಏರಿದೆ. ಇದರಲ್ಲಿ ಜಮ್ಮುವಿನಲ್ಲಿ 43 ಮತ್ತು ಕಾಶ್ಮೀರದಲ್ಲಿ 47 ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗಿದೆ. 9 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಡಲಾಗಿದೆ.


ಹಿಂದೂ ಪ್ರಾಬಲ್ಯದ ಜಮ್ಮು ಈಗ ಮುಸ್ಲಿಂ ಪ್ರಾಬಲ್ಯದ ಕಾಶ್ಮೀರದಲ್ಲಿ ಹೇಗೆ ಪ್ರಾಬಲ್ಯ ಸಾಧಿಸುತ್ತದೆ: ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರವು 46 ಸ್ಥಾನಗಳನ್ನು ಹೊಂದಿದೆ ಮತ್ತು ಬಹುಮತಕ್ಕೆ ಕೇವಲ 44 ಸ್ಥಾನಗಳ ಅಗತ್ಯವಿದೆ. ಹಿಂದೂ ಪ್ರಾಬಲ್ಯದ ಪ್ರದೇಶವಾದ ಜಮ್ಮು 37 ಸ್ಥಾನಗಳನ್ನು ಹೊಂದಿದೆ. ಡಿಲಿಮಿಟೇಶನ್ ನಂತರ ಈ ಲೆಕ್ಕಾಚಾರ ಬದಲಾಗಿದೆ. ಹೊಸ ಡಿಲಿಮಿಟೇಶನ್ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಒಟ್ಟು 90 ಸ್ಥಾನಗಳಲ್ಲಿ ಈಗ 43 ಜಮ್ಮು ಮತ್ತು 47 ಕಾಶ್ಮೀರದಲ್ಲಿ ಇರಲಿದೆ. ಅಲ್ಲದೆ, ಕಾಶ್ಮೀರಿ ಪಂಡಿತರಿಗೆ 2 ಸ್ಥಾನಗಳನ್ನು ಮೀಸಲಿಡಲು ಸೂಚಿಸಲಾಗಿದೆ.

ಇದನ್ನೂ ಓದಿ: Jammu and Kashmir Delimitation : ಗಡಿನಿರ್ಣಯ ಆರಂಭವಾಗಿದೆ, ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ!

ಡಿಲಿಮಿಟೇಷನ್‌ ಹಕ್ಕು ಕೇಂದ್ರ ಸರ್ಕಾರಕ್ಕೆ: ಈ ಬದಲಾವಣೆಗಳ ನಂತರ, ಜಮ್ಮುವಿನ ಜನಸಂಖ್ಯೆಯ 44% ರಷ್ಟು 48% ಸ್ಥಾನಗಳಲ್ಲಿ ಮತ ಚಲಾಯಿಸುತ್ತಾರೆ. ಕಾಶ್ಮೀರದಲ್ಲಿ ವಾಸಿಸುವ 56% ಜನರು ಉಳಿದ 52% ಸ್ಥಾನಗಳಲ್ಲಿ ಮತ ಚಲಾಯಿಸುತ್ತಾರೆ. ಇಲ್ಲಿಯವರೆಗೆ ಕಾಶ್ಮೀರದ 56% ಜನರು 55.4% ಸ್ಥಾನಗಳಲ್ಲಿ ಮತ ಚಲಾಯಿಸುತ್ತಿದ್ದರು ಮತ್ತು ಜಮ್ಮುವಿನ 43.8% ಜನರು 44.5% ಸ್ಥಾನಗಳಲ್ಲಿ ಮತ ಚಲಾಯಿಸುತ್ತಿದ್ದರು. 370 ನೇ ವಿಧಿಯನ್ನು ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಅನ್ನು ಕೇಂದ್ರವು ಮಾಡಿತ್ತು. ಅಸೆಂಬ್ಲಿ ಸ್ಥಾನಗಳ ಡಿಲಿಮಿಟೇಶ್‌ ಮಾಡವ ಹಕ್ಕು ರಾಜ್ಯ ಸರ್ಕಾರದ ಬಳಿ ಇತ್ತು. ಜಮ್ಮು ಮತ್ತು ಕಾಶ್ಮೀರ ಜನತಾ ಪ್ರಾತಿನಿಧ್ಯ ಕಾಯಿದೆ, 1957 ರ ಅಡಿಯಲ್ಲಿ ಈ ಹಕ್ಕನ್ನು ವಿಧಾನಸಭೆ ಪಡೆದುಕೊಂಡಿತ್ತು. 2019 ರಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಮತ್ತು ಲೋಕಸಭೆಯ ಎರಡೂ ಕ್ಷೇತ್ರಗಳ ಡಿಲಿಮಿಟೇಶನ್ ಹಕ್ಕು ಕೇಂದ್ರಕ್ಕೆ ಹೋಗಿದೆ.

ಇದನ್ನೂ ಓದಿ: Jammu and Kashmir Delimitation : ಕರಡು ಸಮಿತಿ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ, ಪ್ರತಿಭಟನೆಗೆ ರೆಡಿ!

ಕ್ಷೇತ್ರ ಮರುವಿಂಗಡೆ ಮುಂದೂಡಿದ್ದ ಎನ್‌ಸಿ: ಜಮ್ಮು ಮತ್ತು ಕಾಶ್ಮೀರದಲ್ಲಿ 1995 ರಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದಾಗ ಕೊನೆಯದಾಗಿ ಡಿಲಿಮಿಟೇಶನ್ ಮಾಡಲಾಗಿತ್ತು. ಅಲ್ಲಿಯ ಅಸೆಂಬ್ಲಿ ಸ್ಥಾನಗಳನ್ನು 76 ರಿಂದ 87 ಕ್ಕೆ ಹೆಚ್ಚಿಸಲಾಯಿತು, ಇದರಲ್ಲಿ ಜಮ್ಮುವಿನ ಸ್ಥಾನಗಳನ್ನು 32 ರಿಂದ 37 ಕ್ಕೆ ಮತ್ತು ಕಾಶ್ಮೀರದಲ್ಲಿ 42 ರಿಂದ 46 ಕ್ಕೆ ಹೆಚ್ಚಿಸಲಾಯಿತು. 2002 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸರ್ಕಾರವು ಕ್ಷೇತ್ರ ಮರು ವಿಂಗಡಣೆಯನ್ನು 2026ರವರೆಗೆ ಮುಂದೂಡುವ ನಿರ್ಣಯವನ್ನು ಅಂಗೀಕರಿಸಿತು. 

Follow Us:
Download App:
  • android
  • ios