Asianet Suvarna News Asianet Suvarna News

ಭಾರತಕ್ಕೆ ಮತ್ತೆ ಕಾಡಿದ ಮೇಘಸ್ಫೋಟ, ಹಿಮಾಚಲ ಪ್ರದೇಶ ಪ್ರವಾಹಕ್ಕೆ 15 ಸಾವು, 8 ಮಂದಿ ನಾಪತ್ತೆ!

ಭಾರಿ ಮೇಘಸ್ಫೋಟಕ್ಕೆ ಹಿಮಾಚಲ ಪ್ರದೇಶ ತತ್ತರಿಸಿದೆ. ಕೇವಲ 3 ಗಂಟೆಯಲ್ಲಿ ಅತೀ ದೊಡ್ಡ ಅನಾಹುತವೇ ನಡೆದು ಹೋಗಿದೆ. 15 ಮಂದಿ ಬಲಿಯಾಗಿದ್ದರೆೆ 8 ಮಂದಿ ನಾಪತ್ತೆಯಾಗಿದ್ದಾರೆ.

himachal pradesh cloudburst death toll raised 8 more bodies recovered rescue operation underway ckm
Author
Bengaluru, First Published Aug 20, 2022, 6:43 PM IST

ಶಿಮ್ಲಾ(ಆ.20):  ಮಳೆ, ಪ್ರವಾಹ ಪರಿಸ್ಥಿತಿಯಿಂದ ಈಗಷ್ಟೇ ಭಾರತ ಸುಧಾರಿಸಿಕೊಳ್ಳುತ್ತಿದೆ. ಇದರ ನಡುವೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಕೇವಲ 3 ಗಂಟೆಯಲ್ಲಿ ಭಾರಿ ಮಳೆ ಸುರಿದಿದೆ. ಇದರಿಂದ ಪ್ರವಾಹ ಸೃಷ್ಟಿಯಾಗಿದೆ, ಬೆಟ್ಟ ಗುಡ್ಡಗಳು ಕುಸಿದಿದೆ. ನದಿಗಳು ಉಕ್ಕಿ ಹರಿದಿದೆ. ಈ ಭೀಕರ ಪ್ರವಾಹಕ್ಕೆ 15 ಮಂದಿ ಸಾವನ್ನಪ್ಪಿದ್ದರೆ, 8 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಬ್ರಿಟೀಷರ ಕಾಲದಲ್ಲಿ ಕಿಟ್ಟಿದ್ದ ಎಲಾ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಮನಾಲಿ ಹೆದ್ದಾರಿ ಬಂದ್ ಆಗಿದೆ. 11ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದೆ. 8ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. 7ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ.

ಹವಾಮಾನ ಇಲಾಖೆ ಸೂಚನೆ ನೀಡಿದ ಬೆನ್ನಲ್ಲೇ ಮಳೆ ಆರಂಭಗೊಂಡಿದೆ. 2 ರಿಂದ 3 ಗಂಟೆ ಸುರಿದ ಮಳೆಗೆ ಹಿಮಾಚಲ ಪ್ರದೇಶ, ಉತ್ತರಖಂಡ ರಾಜ್ಯದ ಕೆಲ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಸಮನೆ ಸುರಿದ ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. ಬೆಟ್ಟ ಕುಸಿದು ವಾಹನಗಳು ಜಖಂಗೊಂಡಿದೆ. ಮಂಡಿ ಜಿಲ್ಲೆಯಲ್ಲಿ ಒಂದೇ ಕುಟುಂಬ 8 ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಮಳೆಗೆ ಮನೆಗೆ ಕುಸಿದ ಪರಿಣಾಮ ಮನೆಯಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ 5 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದೆ. ಮನೆಗಳು, ಮರ ಗಿಡಗಳು ಧರೆಗುರುಳಿದಿ. ಹಲವು ಮನೆಗಳು ಬಿರುಕುಬಿಟ್ಟಿದೆ. 

ಹಿಮಾಚಲ, ಪಂಜಾಬ್‌ನಲ್ಲಿ ಭಾರಿ ಮಳೆ, 93 ವರ್ಷದ ಹಿಂದೆ ನಿರ್ಮಿಸಿದ್ದ ರೈಲೈ ಸೇತುವೆ ಕಟ್‌!

ಸದ್ಯ ಹಿಮಾಚಲ ಪ್ರದೇಶದಲ್ಲಿ ಮಳೆ ನಿಂತರೂ ನೆರೆ ಹಾಗೂ ಪ್ರವಾಹ ಪರಿಸ್ಥಿತಿ ತಗ್ಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ, ಎಸ್‌ಪಿ ಶಾಲಿನಿ ಅಗ್ನಿಹೋತ್ರಿ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದಾರೆ. ಕುಸಿದ ಮನೆಗಳ ಅಡಿಯಲ್ಲಿ ಸಿಲುಕಿರುವವರನ್ನ ರಕ್ಷಿಸುವ ಕಾರ್ಯ ನಡೆಯುತ್ತಿದೆ.  ಬಿಯಾಸ್ ನದಿ ಪಾತ್ರದ 22 ಕುಟುಂಬದ ಜನರು ಜೀವ ಉಳಿಸಿಕೊಳ್ಳಲು ಕಟ್ಟಡ ಹತ್ತಿ ಕುಳಿತಿದ್ದಾರೆ. ಇವರ ಮನೆಗಳು ಕೊಚ್ಚಿ ಹೋಗಿದೆ. ನೀರಿನ ಹರಿವು ಹೆಚ್ಚಿರುವ ಇವರ ರಕ್ಷಣೆಗೆ ತೊಡಕಾಗಿದೆ.

ಜುಲೈ ತಿಂಗಳ ಆರಂಭದಲ್ಲಿ ಪವಿತ್ರ ಅಮರನಾಥ ಯಾತ್ರೆಯಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆಯ ಸುತ್ತಮುತ್ತಲ ಪ್ರದೇಶದಲ್ಲಿ  ಭಾರೀ ಮಳೆಯಾಗಿತ್ತು, ಸಂಜೆ 5.30ರ ವೇಳೆಗೆ ಮೇಘಸ್ಫೋಟ ಕೂಡಾ ಸಂಭವಿಸಿದೆ. ಪರಿಣಾಮ ಬೆಟ್ಟಗುಡ್ಡಗಳಿಂದ ಭಾರೀ ಪ್ರಮಾಣದ ನೀರು ಗುಹೆಯ ಪಕ್ಕದಲ್ಲೇ ಪ್ರವಾಹೋಪಾದಿಯಲ್ಲಿ ಹರಿದುಬಂದಿದೆ. ಹೀಗಾಗಿ ಗುಹೆಯಿಂದ 2 ಕಿ.ಮೀ. ದೂರದಲ್ಲಿ ಹಾಕಲಾಗಿದ್ದ 25 ಟೆಂಟ್‌ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅದಲ್ಲಿದ್ದವರೂ ನೀರು ಪಾಲಾಗಿದ್ದಾರೆ.  ಬೆಟ್ಟಗಳಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದನ್ನು ಗಮನಿಸಿದ ಕೂಡಲೇ ಎನ್‌ಡಿಆರ್‌ಎಫ್‌ ಸೇರಿದಂತೆ ರಕ್ಷಣಾ ತಂಡಗಳು, ಟೆಂಟ್‌ಗಳಿಂದ ಅತ್ಯಂತ ತ್ವರಿತವಾಗಿ ಭಕ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ ಕಾರಣ ಭಾರೀ ಪ್ರಮಾಣದ ಸಾವು ನೋವು ತಪ್ಪಿದೆ.

Amarnath Cloudburst: ಮೇಘಸ್ಫೋಟ ನಂತರ ಈಗ ಹೇಗಿದೆ ಅಮರನಾಥ? ಇಲ್ಲಿದೆ ಬಾಲ್ಟಾಲ್​​​ ಗ್ರೌಂಡ್​ ರಿಪೋರ್ಟ್

Follow Us:
Download App:
  • android
  • ios