Asianet Suvarna News Asianet Suvarna News

ಚಳಿಗೆ ಉತ್ತರ ಭಾರತ ಗಢಗಢ : ಊಟಿಯಲ್ಲಿ ಶೂನ್ಯಕ್ಕೆ ಇಳಿದ ತಾಪಮಾನ!

ಚಳಿಗಾಲ ದೇಶದೆಲ್ಲೆಡೆ ಆವರಿಸಿದ್ದು, ಜನರು ತಂಡಾ ಹವಾ ಅನುಭವಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯವಾಗಿ ಕರೆಯಲ್ಪಡುವ ‘ಚಿಲ್ಲಾ ಇ ಕಲನ್‌’ (ತೀವ್ರ ಚಳಿ) ಆರಂಭವಾಗಿದೆ.

Heavy to more heavy Cold in North India Dal Lake Frozen Temperature dropped to zero in Ooty akb
Author
First Published Dec 25, 2023, 6:58 AM IST

ಶ್ರೀನಗರ: ಚಳಿಗಾಲ ದೇಶದೆಲ್ಲೆಡೆ ಆವರಿಸಿದ್ದು, ಜನರು ತಂಡಾ ಹವಾ ಅನುಭವಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯವಾಗಿ ಕರೆಯಲ್ಪಡುವ ‘ಚಿಲ್ಲಾ ಇ ಕಲನ್‌’ (ತೀವ್ರ ಚಳಿ) ಆರಂಭವಾಗಿದೆ. ಜಗದ್ವಿಖ್ಯಾತ ಅಮರನಾಥ ಯಾತ್ರೆಯ ಆರಂಭ ಸ್ಥಾನ ಪಹಲ್ಗಾಂನಲ್ಲಿ ಅತಿ ಕನಿಷ್ಠ ಉಷ್ಣಾಂಶ ಮೈನಸ್‌ 3.9 ಡಿ.ಸೆ.ನಷ್ಟು ದಾಖಲಾಗಿದೆ. ಕೊರೆಯುತ್ತಿರುವ ಚಳಿಗಾಲಕ್ಕೆ ಶ್ರೀನಗರದ ಪ್ರಸಿದ್ಧ ದಾಲ್‌ ಸರೋವರ ಹೆಪ್ಪುಗಟ್ಟಿದೆ.

ಉಳಿದಂತೆ ಗುಲ್ಮಾರ್ಗ್‌ನಲ್ಲಿ - 3.5 ಡಿ.ಸೆ., ಕುಪ್ವಾರ - 2.7 ಡಿ.ಸೆ., ಶ್ರೀನಗರ - 2.1 ಡಿ.ಸೆ., ಖಾಸಿಗುಂಡ್‌ - 2.0 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದೆ. ಇನ್ನು ರಾಜಸ್ಥಾನದ ವಾಯವ್ಯ ಹಾಗೂ ಪಶ್ಚಿಮ ಭಾಗದಲ್ಲಿ ಭಾರೀ ಚಳಿ ಕಾಣಿಸಿಕೊಂಡಿದೆ. ಭಾನುವಾರ ಅಲ್ವಾರ್‌ನಲ್ಲಿ 5.9 ಡಿ.ಸೆ., ಝುನ್‌ಝುನು 6.5 ಡಿ.ಸೆ., ಸಿರೋಗಿ 7.1 ಡಿ.ಸೆ., ಚುರುವಿನಲ್ಲಿ 7.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ.

ಚಳಿಗಾಲದಲ್ಲಿ ಪ್ರತಿದಿನ ಒಳ ಉಡುಪು ಬದಲಿಸಿ…. ಇಲ್ಲಾಂದ್ರೆ ಏನೇನೋ ರೋಗ ಬರುತ್ತೆ ಹುಷಾರ್

ಊಟಿಯಲ್ಲಿ ಶೂನ್ಯಕ್ಕೆ ಇಳಿದ ತಾಪಮಾನ!

ಊಟಿ: ಸದಾ ಹಸಿರಿನಿಂದ ಕಂಗೊಳಿಸುವ ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಉದಕಮಂಡಲ (ಊಟಿ)ಯಲ್ಲಿ ಭಾನುವಾರ ಬಿಳಿಯ ಹೊದಿಕೆ ಹೊದ್ದುಕೊಂಡಿತ್ತು. ಹೌದು, ಅತ್ಯಂತ ಕನಿಷ್ಠ ಉಷ್ಣಾಂಶ ಮತ್ತು ಆಹ್ಲಾದಕರ ವಾತಾವರಣಕ್ಕೆ ಖ್ಯಾತಿ ಹೊಂದಿರುವ ಊಟಿ ನಗರದಲ್ಲಿ ಭಾನುವಾರ ಉಷ್ಣಾಂಶ 1 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದ್ದರೆ, ಅಲ್ಲಿದ ಕೇವಲ 3 ಕಿ.ಮೀ ದೂರದ ತಲಕುಂಡ ಪ್ರದೇಶದಲ್ಲಿ ಉಷ್ಣಾಂಶ ಶೂನ್ಯಕ್ಕೆ ತಲುಪಿತ್ತು. ಹೀಗಾಗಿ ಇಡೀ ಪ್ರದೇಶ ತೆಳುವಾದ ಹಿಮದ ಹೊದಿಕೆ ಹೊದ್ದು ಪ್ರವಾಸಿಗರನ್ನು ಭಾರೀ ಪ್ರಮಾಣದಲ್ಲಿ ಆಕರ್ಷಿಸಿತು. ಈ ನಡುವೆ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಕುಸಿದ ಕಾರಣ ಕೆಲ ಪ್ರವಾಸಿಗರು ಬೆಳಗ್ಗೆ 8.30ರವರೆಗೂ ಹೋಟೆಲ್‌ನಿಂದ ಹೊರಗೆ ಬರಲಾಗದೇ ಪರದಾಡುವಂತೆಯೂ ಆಯಿತು.

ಪ್ರತಿವರ್ಷ ಅಕ್ಟೋಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ನೀಲಗಿರಿ ತಪ್ಪಲಿನಲ್ಲಿ ಈ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವುದು ಸಾಮಾನ್ಯ.

ಚಳಿಗಾಲದಲ್ಲಿ ಹೃದಯಾಘಾತ ಆಗ್ಬಾರ್ದು ಅಂದ್ರೆ ತಜ್ಞರ ಈ ಟಿಪ್ಸ್ ಫಾಲೋ ಮಾಡಿ

Follow Us:
Download App:
  • android
  • ios