Asianet Suvarna News Asianet Suvarna News

ಚಳಿಗಾಲದಲ್ಲಿ ಹೃದಯಾಘಾತ ಆಗ್ಬಾರ್ದು ಅಂದ್ರೆ ತಜ್ಞರ ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ವಕ್ಕರಿಸೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಜೊತೆಗೆ ಚಳಿಗಾಲದ ಸಮಯದಲ್ಲಿ ಹೃದಯಾಘಾತದ ಸಾಧ್ಯತೆನೂ ಹೆಚ್ಚು. ಇದನ್ನು ತಪ್ಪಿಸಲು ಏನ್ ಮಾಡ್ಬೇಕು. ತಜ್ಞರು ನೀಡಿರೋ ಕೆಲವೊಂದು ಸಲಹೆ ಇಲ್ಲಿದೆ.

Winter Heart Attack Prevention, Effective Lifestyle Modifications To Keep Your Heart Healthy Vin
Author
First Published Dec 20, 2023, 3:53 PM IST

ಚಳಿಗಾಲ ಬಂತೆಂದರೆ ಸಾಕು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಕೆಮ್ಮು, ನೆಗಡಿ, ಶೀತದ ಜೊತೆ, ಅಲರ್ಜಿ, ಚರ್ಮದ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ ಚಳಿಗಾಲದ ಸಮಯದಲ್ಲಿ ಹೃದಯಾಘಾತದ ಸಾಧ್ಯತೆನೂ ಹೆಚ್ಚು.  ತಾಪಮಾನವು ಕಡಿಮೆಯಾಗಲು ಪ್ರಾರಂಭಿಸಿದಾಗ, ಹೆಚ್ಚಿನ ಅಧಿಕ ರಕ್ತದೊತ್ತಡದ ಜನರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅಧಿಕ ರಕ್ತದೊತ್ತಡವನ್ನು ವರದಿ ಮಾಡುತ್ತಾರೆ, ಇವೆಲ್ಲವೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ವಿಶ್ವಾದ್ಯಂತ, ಚಳಿಗಾಲದ ತಿಂಗಳುಗಳಲ್ಲಿ ಹೃದಯಾಘಾತದ ಅಪಾಯವು ಬೇಸಿಗೆಯಲ್ಲಿ ಎರಡು ಪಟ್ಟು ಹೆಚ್ಚಾಗಿರುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. 

ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು (Heart problem) ಹೆಚ್ಚು ಕಾಡುತ್ತವೆ. ರಕ್ತ ದಪ್ಪವಾಗುವ ಕಾರಣಕ್ಕೆ ಹೃದಯಕ್ಕೆ ರಕ್ತ ಹರಿವಿನಲ್ಲಿ ವ್ಯತ್ಯಯ ಉಂಟಾಗಬಹುದು. ಈ ಕಾರಣಕ್ಕೆ ಹೃದಯಾಘಾತದ ಪ್ರಮಾಣವೂ ಅಧಿಕವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವುದು ಹೇಗೆ ಅನ್ನೋದನ್ನು ತಜ್ಞರು (Experts) ತಿಳಿಸಿಕೊಟ್ಟಿದ್ದಾರೆ.

ಚಳಿಗಾಲ ಬಂತು, ವ್ಯಾಸಲೀನ್ ತಂದು ಕೊಂಡ್ರಾ? ಇದ್ರಿಂದ ಏನೆಲ್ಲಾ ಪ್ರಯೋಜನಗಳಿವೆ?

ಜೀವನಶೈಲಿಯಲ್ಲಿ ಬದಲಾವಣೆ
ಹವಾಮಾನ ಬದಲಾದಂತೆ ಜನರು ತಮ್ಮ ಜೀವನಶೈಲಿ (Lifestyle)ಯನ್ನು ಸಹ ಬದಲಾಯಿಸಿಕೊಳ್ಳಬೇಕಾಗುತ್ತದೆ. ತಿನ್ನೋ ಆಹಾರದ ಬಗ್ಗೆಯೂ ಗಮನಹರಿಸಬೇಕು ಸಾಮಾನ್ಯವಾಗಿ ಎಲ್ಲರೂ ಜಡ ಜೀವನವನ್ನು ನಡೆಸುತ್ತಿರುತ್ತಾರೆ. ಹೆಚ್ಚು ಕೊಬ್ಬಿನ ಆಹಾರವನ್ನು ಸೇವಿಸುತ್ತಾರೆ. ಆದರೆ ಹೃದ್ರೋಗವು ಈ ಅಂಶಗಳೊಂದಿಗೆ ಸಂಬಂಧಿಸಿದೆ. ಇದು ತೂಕ (Weight) ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೆಚ್ಚಳ, ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳೋದು ಒಳ್ಳೇದು.

ಸಮತೋಲಿತ ಆಹಾರ ಸೇವನೆ
ಚಳಿಗಾಲದಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಿಂದ ಮಾಡಿದ ಆಹಾರವನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ. ಸ್ಯಾಚುರೇಟೆಡ್ ಮತ್ತು ಅನಾರೋಗ್ಯಕರ ಕೊಬ್ಬುಗಳ ಸೇವನೆಯನ್ನು ಮಿತಿಗೊಳಿಸಿ. ಆರೋಗ್ಯಕರ ಆಹಾರ ಸೇವನೆ ಹೃದಯವನ್ನು ಸಹ ಜೋಪಾನವಾಗಿಡುತ್ತದೆ.

ಚೀನಾದಲ್ಲಿ ಚಳಿಗಾಲದ ಫೇವರೇಟ್ ಫುಡ್ ಸ್ನೇಕ್ ಸೂಪ್, ಇದನ್ಯಾಕೆ ತಿನ್ನಲು ಇಷ್ಟಪಡ್ತಾರೆ?

ವ್ಯಾಯಾಮ ಬಿಟ್ಟುಬಿಡಬೇಡಿ
ಬಹುತೇಕ ಮಂದಿ ಚಳಿಗಾಲದಲ್ಲಿ ಜಾಗಿಂಗ್‌, ಎಕ್ಸರ್‌ಸೈಸ್ ಎಲ್ಲವನ್ನೂ ಬಿಟ್ಟು ಬಿಡುತ್ತಾರೆ. ಆದರೆ ಹಾಗೆ ಮಾಡದಿರಿ. ಎಲ್ಲಾ ಋತುಮಾನದಲ್ಲಿಯೂ ವ್ಯಾಯಾಮ (Exercise), ನಡಿಗೆಯ ದಿನಚರಿಯನ್ನು ನಿಯಮಿತವಾಗಿ ಅನುಸರಿಸುವುದು ಮುಖ್ಯ. ಇಲ್ಲದಿದ್ದರೆ ಇದು ಹೃದಯದ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರಬಹುದು. ಹೀಗಾಗಿ  ದೈನಂದಿನ ದಿನಚರಿಯಲ್ಲಿ ಸೌಮ್ಯವಾದ ವ್ಯಾಯಾಮಗಳನ್ನು ಸೇರಿಸಿ. 

ಹೃದಯಾಘಾತದ ರೋಗಲಕ್ಷಣಗಳನ್ನು ಗಮನಿಸಿ 
ಈಗಾಗಲೇ ಹೃದಯದ ಸಮಸ್ಯೆಯನ್ನು ಹೊಂದಿದ್ದರೆ ಚಳಿಗಾಲ (Winter)ದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಅಸಾಮಾನ್ಯ ಆಯಾಸ, ಉಸಿರಾಟದ ತೊಂದರೆ, ಅಥವಾ ಸಣ್ಣ ಎದೆ ನೋವು ಅನುಭವಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ ತಕ್ಷಣ ತಪಾಸಣೆಗಾಗಿ ವೈದ್ಯರನ್ನು ಭೇಟಿ ಮಾಡಿ.

Food For Winter: ಚಳೀಲಿ ಇದು ತಿನ್ನಿ, ಆರೋಗ್ಯದ ಚಿಂತಿ ಬಿಟ್ಹಾಕ್ಬಿಡಿ!

ವೈದ್ಯರೊಂದಿಗೆ ಸಮಾಲೋಚನೆ ನಡೆಸಿ
ವೈದ್ಯರೊಂದಿಗೆ ನಿಗದಿತ ವೈದ್ಯಕೀಯ ಸಮಾಲೋಚನೆ ನಡೆಸುವುದು ಮುಖ್ಯ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಈಗಾಗಲೇ ಇರುವ ಯಾವುದೇ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಬೇಕು. ಕೆಲವು ಸಂದರ್ಭಗಳಲ್ಲಿ, ಪ್ರಾಥಮಿಕ ಆಂಜಿಯೋಪ್ಲ್ಯಾಸ್ಟಿಯಂತಹ ಹೆಚ್ಚಿನ ಚಿಕಿತ್ಸೆಗಳ ಅಗತ್ಯವಿರುತ್ತದೆ.

ಚಳಿಗಾಲದಲ್ಲಿ ಹೀಗೆ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಹೃದಯವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ವಿಂಟರ್‌ನ್ನು ಖುಷಿಯಿಂದ, ಸುರಕ್ಷಿತವಾಗಿ ಆನಂದಿಸಬಹುದು. 

Latest Videos
Follow Us:
Download App:
  • android
  • ios