ಈಶಾನ್ಯ ಭಾರತದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ತೀವ್ರ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತಕ್ಕೆ ನಾಲ್ವರು ಬಲಿಯಾಗಿದ್ದಾರೆ.  ಗುವಾಹಟಿಯ (Guwahati) ಬೋರಗಾಂವ್ ಪ್ರದೇಶದಲ್ಲಿ (Boragaon area) ಮಂಗಳವಾರ ನಸುಕಿನ ಜಾವ ಈ ಅವಘಡ ಸಂಭವಿಸಿದೆ. 

ಗುವಾಹಟಿ: ಈಶಾನ್ಯ ಭಾರತದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ತೀವ್ರ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತಕ್ಕೆ ನಾಲ್ವರು ಬಲಿಯಾಗಿದ್ದಾರೆ. 
ಗುವಾಹಟಿಯ (Guwahati) ಬೋರಗಾಂವ್ ಪ್ರದೇಶದಲ್ಲಿ (Boragaon area) ಮಂಗಳವಾರ ನಸುಕಿನ ಜಾವ ಈ ಅವಘಡ ಸಂಭವಿಸಿದೆ. ಮಲಗಿದ್ದ ವೇಳೆ ಮನೆ ಮೇಲೆ ಧರೆ ಕುಸಿದಿದ್ದು ನಾಲ್ವರು ನಿದ್ದೆಯಲ್ಲೇ ಸಮಾಧಿಯಾಗಿದ್ದಾರೆ. ಮೃತರೆಲ್ಲರೂ ಕಟ್ಟಡ ಕಾರ್ಮಿಕರಾಗಿದ್ದು, ಅಲ್ಲಿನ ಬಾಡಿಗೆ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. 

ಇವರ ಸಾವಿನೊಂದಿಗೆ ಮೇ ತಿಂಗಳಿನಿಂದ ಇದುವರೆಗೆ ಈಶಾನ್ಯ ಭಾರತದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 54 ಕ್ಕೆ ಏರಿದೆ ಅಸ್ಸಾಂನಲ್ಲಿ (Assam) 36, ಮೇಘಾಲಯದಲ್ಲಿ (Meghalaya) 13 ಮತ್ತು ಅರುಣಾಚಲ ಪ್ರದೇಶದಲ್ಲಿ (Arunachal Pradesh) ಐದು ಜನ ಇದುವರೆಗೆ ಸಾವನ್ನಪ್ಪಿದ್ದಾರೆ. ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಜಿಡಿ ತ್ರಿಪಾಠಿ (GD Tripathi) ಮಾತನಾಡಿ, ಮಳೆಯಿಂದಾಗಿ ಗುವಾಹಟಿಯ ಹಲವು ಭಾಗಗಳಲ್ಲಿ ಭೂಕುಸಿತದ ಘಟನೆಗಳು ಸಂಭವಿಸಿವೆ ಎಂದರು. 

Scroll to load tweet…
Scroll to load tweet…
Scroll to load tweet…

ಗುವಾಹಟಿಯ ಬೋರಗಾಂವ್‌ನಲ್ಲಿ ಭೂಕುಸಿತದಿಂದ ನಾಲ್ವರು ಸಮಾಧಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನಂತರ ಅವರ ಶವಗಳನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ ಎಂದು ನನಗೆ ವರದಿಗಳು ಬಂದವು. ನಗರದ ಇತರ ಮೂರರಿಂದ ನಾಲ್ಕು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಅಲ್ಲಿನ ಘಟನೆಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತ್ರಿಪಾಠಿ ಹೇಳಿದ್ದಾರೆ. ದಿಮಾ ಹಸಾವೊ (Dima Hasao) ಮತ್ತು ಕ್ಯಾಚಾರ್ ಜಿಲ್ಲೆಗಳ (Cachar) ಕೆಲವು ಪ್ರದೇಶಗಳು ಭೂಕುಸಿತದಿಂದಾಗಿ ಹಾನಿಗೊಳಗಾಗಿವೆ. ಆದರೆ ನನಗೆ ಇದುವರೆಗೆ ಯಾವುದೇ ತೀವ್ರವಾದ ಹಾನಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ತ್ರಿಪಾಠಿ ಅವರು ಹೇಳಿದರು. 

Karnataka Rain Updates: ರಾಜ್ಯದ 14 ಜಿಲ್ಲೆಗಳಲ್ಲಿ ವರುಣಾರ್ಭಟ : ಕರುನಾಡಿಗೆ 5 ದಿನ ಜಲ ಕಂಟಕ

ಅಸ್ಸಾಂನಲ್ಲಿ ಸೋಮವಾರ ರಾತ್ರಿಯಿಂದ (ಜೂನ್‌ 14)ಭಾರೀ ಮಳೆಯಾಗುತ್ತಿದೆ. ಗುವಾಹಟಿಯ ಬಹುತೇಕ ಎಲ್ಲಾ ರಸ್ತೆಗಳು ಮತ್ತು ಪ್ರದೇಶಗಳು ಜಲಾವೃತಗೊಂಡಿವೆ. ರಾಜ್ಯ ಸರ್ಕಾರವು ಗುವಾಹಟಿ ಮತ್ತು ಅದರ ಪಕ್ಕದ ಪ್ರದೇಶಗಳ ಜನರಿಗೆ ಅಗತ್ಯವಿಲ್ಲದ ಹೊರತಾಗಿ ಹೊರಗೆ ಹೋಗದಂತೆ ಜನರಲ್ಲಿ ಕೇಳಿಕೊಂಡಿದೆ. ಗುವಾಹಟಿ ಮೂಲದ ಪ್ರಾದೇಶಿಕ ಹವಾಮಾನ ಕೇಂದ್ರವು (Guwahati-based Regional Meteorological Centre) ಮುಂದಿನ ನಾಲ್ಕು ದಿನಗಳಲ್ಲಿ ಇಡೀ ಈಶಾನ್ಯದಲ್ಲಿ ಭಾರೀ ಮಳೆಯಿಂದಲೂ ಭಾರಿ ಮಳೆಯಾಗುವ ಸಾಧ್ಯತೆಯ ಮುನ್ಸೂಚನೆ ನೀಡಿದೆ.

ಹಾವೇರಿ ಜಿಲ್ಲಾದ್ಯಂತ ವರುಣನ ಅಬ್ಬರ: ಸಿಡಿಲಿಗೆ ಮಹಿಳೆ ಸಾವು, 7 ಜನರಿಗೆ ಗಾಯ