Asianet Suvarna News Asianet Suvarna News

ವಾಯುಭಾರ ಕುಸಿತ: ಆಂಧ್ರಪ್ರದೇಶದಲ್ಲಿ ಭಾರೀ ಮಳೆಗೆ 7 ಬಲಿ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗಿರುವ ಕಾರಣ ಆಂಧ್ರ ಪ್ರದೇಶದ ಹಲವು ಕಡೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣ ದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಿಜಯವಾಡಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Heavy rain in Andhra Pradesh 7 killed akb
Author
First Published Sep 1, 2024, 10:38 AM IST | Last Updated Sep 1, 2024, 10:48 AM IST

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗಿರುವ ಕಾರಣ ಆಂಧ್ರ ಪ್ರದೇಶದ ಹಲವು ಕಡೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣ ದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಿಜಯವಾಡಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 7 ಜನರು ಮಳೆ ಸಂಬಂಧಿ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ವಿಜಯವಾಡದಲ್ಲಿ ಭೂಕುಸಿತದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ. ಗುಂಟೂರಿನಲ್ಲಿ ತೊರೆ ಉಕ್ಕೇರಿ ಬಂದ ಕಾರಣ ನಡೆದು ಹೋಗುತ್ತಿದ್ದ ವಿದ್ಯಾ ರ್ಥಿಗಳು ಹಾಗೂ ಒಬ್ಬ ಶಿಕ್ಷಕ ಸಾವನ್ನಪ್ಪಿದ್ದಾರೆ. ವಾಯುಭಾರ ಕುಸಿತದಿಂದ ಅನೇಕ ಕಡೆ ಮಳೆ ತೀವ್ರಗೊಂಡಿದ್ದು, ಮಚಿಲಿಪಟ್ಟಣಂ, ಮಂಗಳಗಿರಿ, ಅಮರಾವತಿ ಸೇರಿ ಅನೇಕ ಕಡೆ 10ರಿಂದ 18 ಸೆಂ.ಮೀ. ಮಳೆ ಸುರಿದಿದೆ. ಒಡಿಶಾ, ಆಂಧ್ರದಲ್ಲಿ ಮುನ್ನೆಚ್ಚರಿಕೆ: ವಾಯುಭಾರ ಕುಸಿತದ ಕಾರಣ ಒಡಿಶಾ ಹಾಗೂ ಆಂಧ್ರ ಪ್ರದೇಶದಲ್ಲಿ ಮಳೆ 1-2 ದಿನ ಮುಂದುವರೆಯಬಹುದು ಎ೦ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಮಾಚಲ: ಮಳೆಗೆ 72 ರಸ್ತೆ ಬಂದ್

ಶಿಮ್ಲಾ/ ಜೈಪುರ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. 72 ರಸ್ತೆಗಳು ಬಂದ್ ಆಗಿವೆ. ಸೆ.2ರತನಕ ಇಲ್ಲಿ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಸ್ಥಾನದಲ್ಲೂ ಭಾರಿ ಮಳೆ ಆಗಿ ಜನಜೀವನ ಏರುಪೇರಾಗಿದೆ.

Cyclone Asna: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ, ರಾಜ್ಯ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ!

ಚಂಡಮಾರುತ ಆತಂಕದಿಂದ ಗುಜರಾತ್ ಪಾರು

ಅಹಮದಾಬಾದ್: ಗುಜರಾತ್‌ನ ಕಛ್ ಕರಾವಳಿಯಲ್ಲಿ ರೂಪುಗೊಂಡು ರಾಜ್ಯಕ್ಕೆ ಆತಂಕ ಸೃಷ್ಟಿಸಿದ್ದ 'ಆಸ್ನಾ ಚಂಡಮಾರುತ' ಈಗ ಓಮಾನ್‌ ಕಡೆಗೆ ಚಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ .ಹೀಗಾಗಿ ಈಗಾಗಲೇ ಮಳೆಯಿಂದ ತತ್ತರಿಸಿದ್ದ ಗುಜರಾತ್, ಚಂಡಮಾರುತದ ಆತಂಕದಿಂದ ದೂರವಾಗಿದೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಸುಮಾರು 3,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಮತ್ತು ಗುಡಿಸಲುಗಳು ಮತ್ತು ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರಿಗೆ ಇತರ ಕಟ್ಟಡಗಳಲ್ಲಿ ಆಶ್ರಯ ಪಡೆಯಲು ಕೋರಿದೆ ಎಂದು ಕಛ್ ಜಿಲ್ಲಾಧಿಕಾರಿ ಅಮಿತ್ ಅರೋರಾ ಹೇಳಿದ್ದಾರೆ. ಆಸ್ತಾ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಆಗಸ್ಟ್ ತಿಂಗಳಲ್ಲಿ ಎದ್ದ 46 ವರ್ಷ ನಂತರದ ಮೊದಲ ಚಂಡಮಾರುತವಾಗಿದೆ.

ವಯನಾಡಲ್ಲಿ ಮತ್ತೆ ಭೂಕುಸಿತ
ವಯನಾಡು (ಕೇರಳ): ಇಲ್ಲಿಯ ಪಂಚಿರಿಮಟ್ಟಂ ಸ್ಥಳದ ಸನಿಹದಲ್ಲೇ ಶನಿವಾರ ಮಣ್ಣು ಕುಸಿದಿದೆ. ಜುಲೈನಲ್ಲಿ ಜಿಲ್ಲೆಯಲ್ಲಿ 300 ಜನರನ್ನು ಬಲಿಪಡೆದ ಭೂಕುಸಿತದ ಕೇಂದ್ರ ಬಿಂದು ಎಂದು ಈ ಪ್ರದೇಶವನ್ನು ಗುರುತಿಸಲಾಗಿದೆ. ಭೂಕುಸಿತದಲ್ಲಿ ನಾಪತ್ತೆ ಆದವರಿಗೆ ಇನ್ನೂ ಹುಡುಕಾಟ ನಡೆಯುತ್ತಿದೆ, ಅದರ ನಡುವೆಯೇ ಮಣ್ಣು ಕುಸಿದ ಕಾರಣ ಈ ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡಲಾಗಿದೆ.

ವಾಯುಭಾರ ಕುಸಿತ: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ..!

'ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆ'
ನವದೆಹಲಿ: 'ಈ ಬಾರಿ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದ್ದು, ದೇಶದ ವಾಯವ್ಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಶೇ.109ರಷ್ಟು ಅಧಿಕ ಮಳೆಯಾಗಲಿದೆ' ಎಂದುಹವಾಮಾನ ಇಲಾಖೆ ಮಾಹಿತಿನೀಡಿದೆ. ಪ್ರಮುಖವಾಗಿ ಉತ್ತರ, ವಾಯವ್ಯದ ಅನೇಕ ಕಡೆ ಹೆಚ್ಚು ಮಳೆ ಬೀಳಲಿದೆ. ಆದರೆ ದಕ್ಷಿಣದ ರಾಜ್ಯಗಳು ಹಾಗೂ ಕೆಲ ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದಿದೆ.

Latest Videos
Follow Us:
Download App:
  • android
  • ios