ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟ ನವ ವಧು, ಗಂಡನ ಮನೆಗೆ ಹೊರಟಾಗ ಕಣ್ಣೀರ ಕೋಡಿ, ಇಷ್ಟು ದಿನ ಮುದ್ದಾಡುತ್ತಿದ್ದ ಮಾಲಕಿ ಮನೆ ಬಿಟ್ಟು ಗಂಡನ ಮನೆಗೆ ಹೊರಟಾಗ ಮೂಕ ಪ್ರಾಣಿಗಳ ನೋವಿಗೆ ಹಲವರು ಕಣ್ಣೀರಾಗಿದ್ದಾರೆ. 

ಡೆಹ್ರಡೂನ್ (ಏ.02) ಮದುವೆ ಸಂಭ್ರಮದ ಕ್ಷಣ. ಆದರೆ ಹೆಣ್ಣಿಗೆ, ಹೆಣ್ಣು ಹೆತ್ತ ಪೋಷಕರಿಗೂ ಸಂಭ್ರಮದ ಜೊತೆ ಭಾವುಕ ಕ್ಷಣ. ಮಗಳನ್ನು ಗಂಡನ ಮನೆಗೆ ಕಳುಹಿಸುಕೊಡುವಾಗ ಕಣ್ಣೀರಿಡ ಪೋಷಕರಿಲ್ಲ. ಇತ್ತ ಮಗಳು ತಾನು ಆಡಿ ಬೆಳೆದ ಮನೆ ಬಿಟ್ಟು ಗಂಡನ ಮನೆಗೆ ಹೊರಾಟಾಗ ಕಣ್ಣೀರಾಗದೇ ಇರಲು ಸಾಧ್ಯವಿಲ್ಲ. ಪೋಷಕರು, ಕುಟುಂಬಸ್ಥರು ನವ ವಧು ಗಂಡನ ಮನೆಗೆ ಹೊರಾಟ ಕಣ್ಣೀರಾಗಿದ್ದಾರೆ. ಇದೇ ವೇಳೆ ಮನೆಯ ಮುದ್ದಿನ ನಾಯಿ ಓಡೋಡಿ ಬಂದು ನವ ವಧುವಿನ ಮೇಲಕ್ಕೆ ಹಾರಿ ಪ್ರೀತಿ ತೋರಿದೆ. ಮುದ್ದಿನ ನಾಯಿಯ ಪ್ರೀತಿ ನೋಡಿ ನವ ವಧು ಕಣ್ಣೀರಿಟ್ಟಿದ್ದಾಳೆ. ಈ ಕ್ಷಣ ಹಲವರನ್ನು ಭಾವುಕ ಮಾಡಿದ ಘಟನೆ ಡೆಹ್ರಡೂನ್‌ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಯಿಯ ಭಾವುಕ ವಿದಾಯ

ಗೌರಿ ಸಿಂಗ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬಳಿಕ ನವ ವಧುವಿನ ಮನೆಯಿಂದ ಗಂಡನ ಮನೆಗೆ ತೆರಳುವ ಸಮಯ ಬಂದೇ ಬಿಟ್ಟಿದೆ. ಪೋಷಕರು, ಕುಟುಂಬಸ್ಥರು ಮಗಳನ್ನು ಬೀಳ್ಕೊಡಲು ಮುಂದಾಗಿದ್ದಾರೆ. ಆದರೆ ಮನೆಯ ಮುದ್ದಿನ ನಾಯಿ ಇದಕ್ಕೆ ಅನುವು ಮಾಡಿಕೊಡಲೇ ಇಲ್ಲ. ನವ ವಧು ಗೌರಿ ಸಿಂಗ್ ಗಂಡನ ಕೈಹಿಡು ಕಾರಿನತ್ತ ತೆರಳುವಾಗ ಮೇಲಿನ ಮಹಡಿಯಲ್ಲಿದ್ದ ಲಾಬ್ರಡರ್ ಹಾಗೂ ಗೋಲ್ಡನ್ ರಿಟ್ರಿವರ್ ಎರಡು ನಾಯಿಗಳು ತೀವ್ರವಾಗಿ ಬೊಗಳಲು ಆರಂಭಿಸಿದೆ.

ಕುಟುಂಬಸ್ಥರು, ಆಪ್ತರು ಇದ್ದ ಕಾರಣ ಎರಡೂ ನಾಯಿಗಳನ್ನು ಕಟ್ಟಿ ಹಾಕಲಾಗಿತ್ತು. ಇಷ್ಟು ದಿನ ಮುದ್ದಾಗಿ ಸಾಕಿದ್ದ ಮಾಲಕಿಯನ್ನು ಬೀಳ್ಕೋಡಲು ಆಗದೆ, ಇರಲು ಆಗದೇ ನಾಯಿಗಳು ಚಡಪಡಿಸಿತ್ತು. ನಾಯಿ ಬೊಗಳುವಿಕೆಯಿಂದ ನವ ವಧು ಗೌರಿ ಸಿಂಗ್ ಭಾವುಕರಾಗಿದ್ದಾರೆ. ಅಷ್ಟೊತ್ತಿಗೆ ನಾಯಿಗಳನ್ನು ಬಿಟ್ಟಿದ್ದಾರೆ. ಓಡೋಡಿ ಬಂದ ಎರಡು ನಾಯಿಗಳು ಗೌರಿ ಸಿಂಗ್ ಮೇಲಕ್ಕೆ ಹಾರಿ ಮುದ್ದಾಡಿದೆ. ನವ ವಧುವನ್ನು ಗಂಡನ ಮನೆಗೆ ತೆರಳಲು ನಾಯಿಗಳು ಅನುವು ಮಾಡಿಕೊಡಲೇ ಇಲ್ಲ.

ಕಣ್ಣೀರಿಟ್ಟ ಗೌರಿ ಸಿಂಗ್

ಮುದ್ದಿನ ನಾಯಿ ಪ್ರೀತಿ ನೋಡಿ ನವ ವಧು ಕಣ್ಣೀರಿಟ್ಟಿದ್ದಾರೆ. ಕಣ್ಣೀರಿಟ್ಟ ಗೌರಿ ಸಿಂಗ್ ವರ ಸಂತೈಸಿದ್ದಾನೆ. ಆದರೆ ದುಃಖ, ನೋವು ಸಹಿಸಲು ಸಾಧ್ಯವಾಗದೇ ಗೌರಿ ಸಿಂಗ್ ಕಣ್ಣೀರಿಟ್ಟಿದ್ದಾರೆ. ಕೆಲ ಹೊತ್ತಿನ ತನಕ ನಾಯಿಗಳು ಗೌರಿ ಸಿಂಗ್‌ನ ಬಿಡಲೇ ಇಲ್ಲ. ಬಳಿಕ ಪೋಷಕರು ಬಂದು ನಾಯಿಯನ್ನು ಮತ್ತೆ ಕರೆದುಕೊಂಡು ಹೋಗಿ ಕಟ್ಟಿಹಾಕಿದ್ದಾರೆ. ಈ ದೃಶ್ಯಗಳನ್ನು ನೋಡಿದ ಹಲವರು ಭಾವುಕರಾಗಿದ್ದಾರೆ.

View post on Instagram