Asianet Suvarna News Asianet Suvarna News

ಜಿಮ್‌ನ ಟ್ರೆಡ್ಮಿಲ್‌ನಲ್ಲಿ ಓಡುತ್ತಿದ್ದಾಗಲೇ ಹೃದಯಾಘಾತ ಕುಸಿದು ಬಿದ್ದು ವ್ಯಕ್ತಿ ಸಾವು: ವಿಡಿಯೋ

ಜಿಮ್‌ನ ಟ್ರೆಡ್ಮಿಲ್‌ನಲ್ಲಿ ಓಡುತ್ತಾ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಮೊಂದರಲ್ಲಿ ಈ ಘಟನೆ ನಡೆದಿದೆ.

Heart attack while running on treadmill at gym Man dies after collapsing  in gym CCTV footage went viral akb
Author
First Published Aug 7, 2024, 4:35 PM IST | Last Updated Aug 7, 2024, 4:35 PM IST

ಗಾಜಿಯಾಬಾದ್: ದೇಶಾದ್ಯಂತ ಹಠಾತ್ ಆಗಿ ಕುಸಿದು ಬಿದ್ದು, ಸಣ್ಣ ಪ್ರಾಯದ ಯುವಕರು ಯುವತಿಯರು ಮಕ್ಕಳು ಸಾವನ್ನಪ್ಪುವ ಪ್ರಕರಣಗಳು ಇತ್ತಿಚೆಗೆ ಹೆಚ್ಚು ಹೆಚ್ಚು ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನದಲ್ಲಿ ಶಿಕ್ಷಕರೊಬ್ಬರು ಡಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮೊದಲೇ ಅಂತಹದ್ದೇ ಮತ್ತೊಂದು ಆಘಾತಕಾರಿ ಸಾವು ಪ್ರಕರಣ ಬೆಳಕಿಗೆ  ಬಂದಿದೆ. ಜಿಮ್‌ನ ಟ್ರೆಡ್ಮಿಲ್‌ನಲ್ಲಿ ಓಡುತ್ತಾ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಮೊಂದರಲ್ಲಿ ಈ ಘಟನೆ ನಡೆದಿದೆ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಕೂಡ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹೃದಯಾಘಾತದಿಂದಲೇ ಈ ಸಾವು ಸಂಭವಿಸಿರಬಹುದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆಗಸ್ಟ್ 2 ರಂದು ಈ ಘಟನೆ ನಡೆದಿದ್ದು,ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಮಹ್ರೌಲಿ ಪ್ರದೇಶದ ನಿವಾಸಿಯಾಗಿರುವ 40 ವರ್ಷದ ಜಿತೇಂದ್ರ ಸಿಂಗ್ ಹೀಗೆ ಹಠಾತ್ ಆಗಿ ಸಾವನ್ನಪ್ಪಿದ ವ್ಯಕ್ತಿ. ಇವರು ಪ್ರತಿದಿನವೂ ಜಿಮ್‌ಗೆ ಬಂದು ವರ್ಕೌಟ್ ಮಾಡುತ್ತಿದ್ದರು. ಅದರಂತೆ ಆ ದಿನೂ ಜಿಮ್‌ಗೆ ಆಗಮಿಸಿ ವ್ಯಾಯಾಮ ಮಾಡುತ್ತಿದ್ದ ವೇಳೆ ಅವರಿಗೆ ಹಠಾತ್ ಹೃದಯಾಘಾತವಾಗಿದೆ. 

ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!

 

ಬೆಳಗ್ಗೆ 8 ಗಂಟೆ ವೇಳೆಗೆ ಅವರು ಜಿಮ್ ಮಾಡಲು ಆರಂಭಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರ ಉಸಿರು ನಿಂತಿದೆ. ಜಿಮ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರ ಕೊನೆಕ್ಷಣಗಳು ಸೆರೆ ಆಗಿವೆ. ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸುವಂತೆ ಅವರು ಆರಂಭದಲ್ಲಿ ಬಹಳ ಹುರುಪಿನಿಂದ ವ್ಯಾಯಾಮ ಮಾಡಿದ್ದು, ನಂತರ ಟ್ರೆಡ್ಮಿಲ್‌ನ್ನು ನಿಧಾನಗೊಳಿಸಿ ಕ್ಷಣದಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಜಿಮ್‌ನಲ್ಲಿದ್ದ ಇತರರು ಅವರಿಗೆ ಸಿಪಿಆರ್ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ, ಸಿಪಿಆರ್ ಮಾಡಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಅವರು ಬದುಕುಳಿಯಲಿಲ್ಲ.

ಖುಷಿಯಿಂದ ಕುಣಿಯುತ್ತಿದ್ದಾಗಲೇ ಹೊರಟೋಯ್ತು ಶಿಕ್ಷಕನ ಜೀವ: ವೀಡಿಯೋ ವೈರಲ್

Latest Videos
Follow Us:
Download App:
  • android
  • ios