ಖುಷಿಯಿಂದ ಕುಣಿಯುತ್ತಿದ್ದಾಗಲೇ ಹೊರಟೋಯ್ತು ಶಿಕ್ಷಕನ ಜೀವ: ವೀಡಿಯೋ ವೈರಲ್
ಹಿರಿಯ ಸೋದರನ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜೈಪುರ: ಹಿರಿಯ ಸೋದರನ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಭಿನ್ಸಾಲಾನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾವಿನ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮನ್ನಾ ಲಾಲ್ ಜಖರ್ ಹೀಗೆ ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ.
ವೈರಲ್ ಆದ ವೀಡಿಯೋದಲ್ಲಿ ಮನ್ನಾ ಲಾಲ್ ಅವರು ಮಹಿಳಾ ನೃತ್ಯಗಾರ್ತಿಯ ಜೊತೆ ಬಿಂದಾಸ್ ಆಗಿ ಡಾನ್ಸ್ ಮಾಡುವುದನ್ನು ಕಾಣಬಹುದಾಗಿದೆ. ಆದರೆ ಡಾನ್ಸ್ ಮಾಡುತ್ತಲೇ ಕೆಲ ಸೆಕೆಂಡ್‌ಗಳಲ್ಲಿ ಅವರು ನೆಲಕ್ಕೆ ಕುಸಿದಿದ್ದು, ಅಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಸಾವಿಗೂ ಮೊದಲು ಮನ್ನಾ ಲಾಲ್ ಖುಷಿಯಿಂದ ಕುಣಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕೂಡಲೇ ಅವರ ಕುಟುಂಬಸ್ಥರು ಮನ್ನಾ ಲಾಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಹಠಾತ್ ಆಗಿ ಸಂಭವಿಸಿದ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರು ಕುಳಿತಲ್ಲಿಯೇ ಪ್ರಾಣಬಿಟ್ಟ ಕಟ್ಟಡ ಕಾರ್ಮಿಕ; ಸತ್ತು ಒಂದು ದಿನವಾದ್ರೂ ಯಾರಿಗೂ ಗೊತ್ತಾಗಿಲ್ಲ!
ಖುಷಿಯಿಂದ ಕುಣಿಯುತ್ತಾ ಅಣ್ಣನ ನಿವೃತ್ತಿ ಜೀವನದ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ ಮನ್ನಾ ಲಾಲ್ ಅವರ ಹಠಾತ್ ಸಾವು ಕುಟುಂಬಸ್ಥರನ್ನು ಶೋಕದಲ್ಲಿ ಮರುಗುವಂತೆ ಮಾಡಿದೆ. ಮನ್ನಾ ಲಾಲ್ ಅವರು ಜೋಧ್‌ಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ಸೋದರನ ಈ ವಿಶೇಷ ಕಾರ್ಯಕ್ರಮದ ಸಲುವಾಗಿಯೇ ಈ ಊರಿಗೆ ಆಗಮಿಸಿದ್ದರು. ಆದರೆ ಅವರ ಹಠಾತ್ ಸಾವು ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
ಪೆಟ್ರೋಲ್ ತುಂಬಿಸಲು ಕಾಯುತ್ತಿದ್ದ ಶಿಕ್ಷಕನಿಗೆ ದಿಢೀರ್ ಹೃದಯಾಘಾತ, ಸಿಸಿವಿಯಲ್ಲಿ ಕೊನೆ ಕ್ಷಣ ಸೆರೆ!
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಇದುವರೆಗೆ ದೇಶದೆಲ್ಲೆಡೆ ಹೀಗೆ ಹಠಾತ್ ಆಗಿ ಹಲವು ಸಾವು ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಏನಾದರೊಂದು ಅಧ್ಯಯನ ಕೈಗೊಂಡು ಪರಿಹಾರ ಹುಡುಕಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಸಾವಿನ ಅರಿವಿರದ ಶಿಕ್ಷಕ ಮಾತ್ರ ಡಾನ್ಸ್ ಮಾಡುತ್ತಾ ಖುಷಿ ಖುಷಿಯಿಂದಲೇ ಇಹಲೋಕ ತ್ಯಜಿಸಿದ್ದರೆ, ಬದುಕುಳಿದವರಿಗೆ ಅವರ ಸಾವು ತೀವ್ರ ಆಘಾತ ನೀಡಿದೆ.