Asianet Suvarna News Asianet Suvarna News

ಹಿಂದೂ ನಂಬಿಕೆಗೆ ಧಕ್ಕೆ ತಂದ ತಿರುಪತಿ ಲಡ್ಡು ಪ್ರಕರಣ, ವರದಿ ಕೇಳಿದ ಕೇಂದ್ರ ಸರ್ಕಾರ!

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನೆಣ್ಣೆ ಬಳಸಲಾಗಿದೆ ಅನ್ನೋ ಆರೋಪ ಲ್ಯಾಬ್ ವರದಿಯಲ್ಲಿ ದೃಢಪಟ್ಟ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ.  ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಈ ಪ್ರಕರಣದ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಘಟನೆ ಕುರಿತು ವರದಿ ಕೇಳಿದೆ.

Health ministry jp nadda ask detail report on tirupati laddu animal fat case ckm
Author
First Published Sep 20, 2024, 3:38 PM IST | Last Updated Sep 20, 2024, 3:38 PM IST

ನವದೆಹಲಿ(ಸೆ.20)  ಹಿಂದೂ ಧಾರ್ಮಿಕ ಬಾವನೆಗೆ ಧಕ್ಕೆ ತಂದಿರುವ ತಿರುಪತಿ ಲಡ್ಡು ಪ್ರಕರಣ ಇದೀಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನನ ಎಣ್ಣೆ ಬಳಸಲಾಗುತ್ತಿದೆ ಅನ್ನೋ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಲ್ಯಾಬ್ ವರದಿಯಲ್ಲಿ ಖಚಿತವಾಗಿದೆ. ಇದು ಕೋಟ್ಯಾಂತರ ಹಿಂದೂ ಭಕ್ತರ ನಂಬಿಕೆಗೆ ಬಗೆದ ದ್ರೋಹವಾಗಿದೆ ಅನ್ನೋ ಆಕ್ರೋಶ ಎಲ್ಲೆಡೆ ಕೇಳಿಬರುತ್ತಿದೆ. ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ಇದೀಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಘಟನೆ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದೆ.

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ತಿರುಪತಿ ಲಡ್ಡು ಪ್ರಕರಣ ಕುರಿತು ವರದಿ ಕೇಳಿದ್ದಾರೆ. ಘಟನೆ ಕುರಿತು ವಿವರವಾದ ವರದಿ ನೀಡುವಂತೆ ನಡ್ಡಾ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಂದ್ರಬಾಬು ನಾಯ್ಡು ತೆಲುಗುದೇಶಂ ಪಾರ್ಟಿ ಮಾಡಿದ ಆರೋಪ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ.

ಆಂಧ್ರದಲ್ಲಿ ಲಡ್ಡು ಲಡಾಯಿ ಕಿಚ್ಚು, ತಿರುಪತಿ ಲಾಡುವಿನಲ್ಲಿ ದನದ ಕೊಬ್ಬು?

ಬುಧವಾರ ಚಂದ್ರಬಾಬು ನಾಯ್ಡು ಈ ಕುರಿತು ಆರೋಪ ಮಾಡಿದ್ದರು. ಇದೇ ವೇಳೆ ಲ್ಯಾಬ್ ವರದಿಯನ್ನು ಬಿಡುಗಡೆ ಮಾಡಿದ್ದರು. ಜಗನ್ ಸರ್ಕಾರ ಹಿಂದೂ ಭಾವನೆಗಳ ಜೊತೆ ಚೆಲ್ಲಾಟವಾಡಿದೆ. ನೈಸರ್ಗಿಕ ತುಪ್ಪ ಟೆಂಡರ್ ನಿಲ್ಲಿಸಿ, ಕಳಪೆ ಮಟ್ಟದ ಕೊಬ್ಬುಗಳನ್ನು ಬಳಸಲಾಗಿದೆ ಅನ್ನೋ ಆರೋಪ ಮಾಡಿದ್ದರು. ಇದೇ ವೇಳೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಅನ್ನೋ ಆರೋಪ ಮಾಡಿದ್ದರು. ಈ ಕುರಿತ ಲ್ಯಾಬ್ ವರದಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಹಾಗೂ ಮೀನನ ಎಣ್ಣೆ ಬಳಸಿದ್ದಾರೆ ಅನ್ನೋ ವರದಿ ಹಿಂದೂ ಶ್ರದ್ಧಾ ಕೇಂದ್ರಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಸರ್ಕಾರ ಮಾಡುತ್ತಿದೆ ಅನ್ನೋ ಆರೋಪ ಬಲವಾಗುವಂತೆ ಮಾಡಿದೆ.

‘ಗುಜರಾತ್‌ನ ಕೇಂದ್ರ ಸರ್ಕಾರದ ಉಸ್ತುವಾರಿಯ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನಲ್ಲಿರುವ ಸಿಎಎಲ್‌ಎಫ್‌ (ಸೆಂಟರ್‌ ಆಫ್‌ ಅನಾಲಿಸಿಸ್‌ ಆ್ಯಂಡ್‌ ಲರ್ನಿಂಗ್‌ ಇನ್‌ ಲೈವ್‌ಸ್ಟಾಕ್‌ ಆ್ಯಂಡ್ ಫುಡ್‌), ಪ್ರಯೋಗಾಲಯವು ತುಪ್ಪದಲ್ಲಿ ಜಾನುವಾರು ಕೊಬ್ಬನ್ನು ಬಳಸಲಾಗಿದೆ’ ಎಂದು ದೃಢಪಡಿಸಿದೆ’ ಎಂದು ಟಿಡಿಪಿ ನಾಯಕರು ಲ್ಯಾಬ್‌ ವರದಿಯ ಪ್ರತಿ ಬಿಡುಗಡೆ ಮಾಡಿದ್ದಾರೆ.ವರದಿಯು ತುಪ್ಪದಲ್ಲಿ ಮೀನಿನ ಎಣ್ಣೆ (ಫಿಶ್‌ ಆಯಿಲ್‌), ದನದ ಕೊಬ್ಬು (ಬೀಫ್‌ ಟ್ಯಾಲೋ) ಮತ್ತು ಹಂದಿ ಕೊಬ್ಬು (ಟ್ಯಾಲೋ) ಕುರುಹುಗಳಿವೆ ಎಂದಿದೆ.

ಇದೀಗ ಸರ್ಕಾರದ ಮುಜರಾಯಿ ಇಲಾಖೆ ಅಡಿಯಲ್ಲಿರುವ ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸುವಂತೆ ಮತ್ತೆ ಧ್ವನಿಗಳು ಜೋರಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಈ ರೀತಿಯ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಮತ್ತೆ ದೇವಸ್ಥಾನಗಳ ಮುಕ್ತಿಗೊಳಿಸಲು ಹೋರಾಟಗಳು ಆರಂಭಗೊಳ್ಳುತ್ತಿದೆ.

History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!
 

Latest Videos
Follow Us:
Download App:
  • android
  • ios