Asianet Suvarna News Asianet Suvarna News

ಚೀನಾ ಅತಂಕದ ಬೆನ್ನಲ್ಲೇ ಕೋವಿಡ್ ಪರೀಕ್ಷೆಗೆ ಕೇಂದ್ರದ ಸೂಚನೆ, ಜೊತೆಗೊಂದು ಎಚ್ಚರಿಕೆ!

ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ದಿಢೀರ್ ಏರಿಕೆಯಾಗಿದೆ. ಇದರ ಪರಿಣಾಮ ಭಾರತದಲ್ಲಿ ಒಂದೊಂದೆ ನಿರ್ಬಂಧಗಳು ಜಾರಿಯಾಗುವ ಲಕ್ಷಣಗಳು ಗೋಚರಿಸಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಕೋವಿಡ್ ತಪಾಸಣೆಗೆ ಸೂಚನೆ ನೀಡಿದೆ. ಇಷ್ಟೇ ಅಲ್ಲ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
 

Health Ministry issues health advisory to states and UT after amid rising covid cases in china ckm
Author
First Published Dec 20, 2022, 9:13 PM IST

ನವದೆಹಲಿ(ಡಿ.20): ಚೀನಾದಲ್ಲಿ ಮತ್ತೊಂದು ಬಾರಿ ಕೋವಿಡ್ ಸ್ಫೋಟಗೊಂಡಿದೆ. ಒಂದೊಂದು ಪ್ರಕರಣಕ್ಕೂ ಲಾಕ್‌ಡೌನ್ ಮಾಡುತ್ತಿದ್ದ ಚೀನಾ ಇದೀಗ ಯಾವುದನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಪರದಾಡುತ್ತಿದೆ. ಚೀನಾ ಮಾತ್ರವಲ್ಲ ಅಮೆರಿಕ, ಬ್ರೆಜಿಲ್, ಜಪಾನ್ ದೇಶಗಳಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮ ಭಾರತದಲ್ಲೂ ಕೋವಿಡ್ ಮುಂಜಾಗ್ರತೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಕೋವಿಡ್ ಸೋಂಕು ಪತ್ತೆಹಚ್ಚಲು ಪರೀಕ್ಷೆ ನಡೆಸಲು ಸೂಚಿಸಿದೆ. ಎಲ್ಲೆಡೆ ಕೋವಿಡ್ ಪರೀಕ್ಷೆ ಮಾಡುವಂತೆ ಸೂಚನೆ ನೀಡಲಾಗಿದೆ. ಪಾಸಿಟೀವ್ ಕೇಸ್ ಪತ್ತೆಯಾದರೆ ಜಿನೋಮ್ ಸೀಕ್ಪೆನ್ಸ್ ತಪಾಸಣೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಪ್ರಮುಖವಾಗಿ ಜೆನೋಮ್ ಸೀಕ್ಪೆನ್ಸ್ ಮೂಲಕ ಕೊರೋನಾ ವೈರಸ್ ತಳಿ ಪತ್ತೆ ಹಚ್ಚಲು ಸೂಚಿಸಲಾಗಿದೆ. INSACOG ಮೂಲಕ ಕೊರೋನಾ ತಳಿ ಹಾಗೂ ಪರಿಣಾಮದ ಮಾಹಿತಿ ಲಭ್ಯವಾಗಲಿದೆ. ಇದರಿಂದ ಈಗಿನಿಂದಲೇ ಸೂಕ್ತ ಕ್ರಮಕೈಗೊಳ್ಳಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಚೀನಾದಲ್ಲಿ ಕೋವಿಡ್ ಸ್ಫೋಟ, ಗಗನಕ್ಕೇರಿತು ನಿಂಬೆ ಹಣ್ಣಿನ ಬೆಲೆ!

ಕೋವಿಡ್ ಸೋಂಕು ಪತ್ತೆ ಹಚ್ಚಲು ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಅಗತ್ಯವಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಕೋವಿಡ್ ತಪಾಸಣೆ ಮಾಡಬೇಕು. ಈ ಮೂಲಕ ಸೋಂಕನ್ನು ಆರಂಭದಲ್ಲೇ ಪತ್ತೆ ಹಚ್ಚಬೇಕು. ಬಳಿಕ ಐಸೋಲೇಶನ್, ಕ್ವಾರಂಟೈನ್ ಸೇರಿದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಮತ್ತೊಂದು ಅಲೆಯಿಂದ ಪಾರಗಬುಹುದು ಎಂದು ಕೇಂದ್ರ ಸರ್ಕಾರ ತನ್ನ ಸಲಹೆಯಲ್ಲಿ ಹೇಳಿದೆ.

ಚೀನಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಫೋಟಗೊಂಡಿರುವ ಕಾರಣ ಪ್ರತಿ ದಿನ ವಿಶ್ವದಲ್ಲಿ ಪ್ರತಿ ದಿನ 35 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಆದರೆ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 112 ಕೇಸ್ ದಾಖಲಾಗುವ ಮೂಲಕ ವೈರಸ್ ನಿಯಂತ್ರಣದಲ್ಲಿದೆ. ಭಾರತದಲ್ಲಿನ ಕೋವಿಡ್  ಸಕ್ರಿಯ ಪ್ರಕರಣಗಳ ಸಂಖ್ಯೆ  3,490. 

ಚೀನಾ ಕೋವಿಡ್ ಸ್ಫೋಟದಿಂದ ಸೋಂಕಿತರಿಗೆ ಸಿಗುತ್ತಿಲ್ಲ ಆಸ್ಪತ್ರೆ, ಭಾರತದ ಅಲರ್ಟ್!

ಚೀನಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿನ ಕೋವಿಡ್ ಏರಿಕೆಯಿಂದ ಭಾರತದಲ್ಲಿ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತದೆ. ಭಾರತದಲ್ಲಿ ಇದೀಗ ಕೋವಿಡ್ ಪರೀಕ್ಷೆ ಜಾರಿಗೆ ಬಂದಿದೆ. ಇತರ ದೇಶಗಳಲ್ಲಿ ಪ್ರಕರಣ ಹೆಚ್ಚಾಗುತ್ತಲೇ ಹೋದರೆ ಮತ್ತೆ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇದೆ. ಕೇಂದ್ರ ತನ್ನ ಮಾರ್ಗಸೂಚಿಯಲ್ಲಿ ಕೆಲ ಎಚ್ಚರಿಕೆಯನ್ನು ನೀಡಿದೆ. ಜನರು ಈ ಹಿಂದಿನಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದೆ. ಮಾಸ್ಕ್, ಸಾಮಾಜಿಕ ಅಂತರ, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದರೆ ಒಳಿತು. 

ಚೀನಾದಲ್ಲಿ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವರು ಆಸ್ಪತ್ರೆ, ಬೆಡ್ ಸಿಗದೆ ನಿಧನರಾಗುತ್ತಿದ್ದಾರೆ. ಚೀನಾ ತುರ್ತು ಆಸ್ಪತ್ರೆ ನಿರ್ಮಿಸುತ್ತಿದೆ. ಕೋವಿಡ್ ಸೋಂಕು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಪರಿಸ್ಥಿತಿ ಕೈಮೀರಿದಂತೆ ಕಾಣುತ್ತಿದೆ. ಇನ್ನು 3 ತಿಂಗಳಲ್ಲಿ ಚೀನಾದ ಶೇಕಡಾ 60 ರಷ್ಟ ಮಂದ ಕೋವಿಡ್ ಸೋಂಕಿನಿಂದ ಬಳಲಲಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios