Asianet Suvarna News Asianet Suvarna News

ಚೀನಾ ಕೋವಿಡ್ ಸ್ಫೋಟದಿಂದ ಸೋಂಕಿತರಿಗೆ ಸಿಗುತ್ತಿಲ್ಲ ಆಸ್ಪತ್ರೆ, ಭಾರತದ ಅಲರ್ಟ್!

ಚೀನಾದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ 3 ತಿಂಗಳಲ್ಲಿ ಚೀನಾದ ಶೇಕಡಾ 60 ರಷ್ಟು ಕೋವಿಡ್‌ ಸೋಂಕಿನಿತ ಬಳಲಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದ ಕೋವಿಡ್ ಸಮಿತಿ ಮಹತ್ವದ ಸೂಚನೆ ನೀಡಿದೆ.

China reports rapid covid surge and hospitals overwhelmed india no need to panic says NTAGI chairman ckm
Author
First Published Dec 20, 2022, 6:02 PM IST

ನವದೆಹಲಿ(ಡಿ.20): ಭಾರತ ಸೇರಿದಂತೆ ಬಹುತೇಕ ದೇಶಗಳಿಂದ ಕೋವಿಡ್ ವೈರಸ್ ದೂರ ಸರಿಯುತ್ತಿದೆ. ಆದರೆ ವೈರಸ್ ಹುಟ್ಟಿದ ಚೀನಾದಲ್ಲಿ ಮಾತ್ರ ಸಂಕಷ್ಟ ಮುಗಿದಿಲ್ಲ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಆಸ್ಪತ್ರೆಗಳೇ ಸಿಗುತ್ತಿಲ್ಲ. ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಚೀನಾ ಒದ್ದಾಡುತ್ತಿದೆ. ಇದರ ನಡುವೆ ತಜ್ಞರು ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ 3 ತಿಂಗಳಲ್ಲಿ ಚೀನಾದ ಶೇಕಡಾ 60 ರಷ್ಟು ಕೋವಿಡ್ ಸೋಂಕಿನಿಂದ ಬಳಲಿದ್ದಾರೆ ಎಂದಿದ್ದಾರೆ. ಈ ವರದಿ ಬೆನ್ನಲ್ಲೇ ಭಾರತ ಅಲರ್ಟ್ ಆಗಿದೆ. ಭಾರತದ ಕೋವಿಡ್ ವರ್ಕಿಂಗ್ ಕಮಿಟಿ ಮುಖ್ಯಸ್ಥ ಎನ್‌ಕೆ ಆರೋರ್ ಮಹತ್ವದ ಸೂಚನೆ ನೀಡಿದ್ದಾರೆ. ಚೀನಾದಲ್ಲಿ ಕೋವಿಡ್ ಗಣನೀಯ ಏರಿಕೆಯಿಂದ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ. ಭಾರತ ಅತ್ಯುತ್ತಮ ಲಸಿಕೆ ಮೂಲಕ ಭಾರತೀಯರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ. ಇದೇ ಕಾರಣದಿಂದ ಭಾರತ ಕೋವಿಡ್ ಹೋರಾಟದಲ್ಲಿ ಬಹುತೇಕ ಯಶಸ್ಸು ಸಾಧಿಸಿದೆ ಎಂದಿದ್ದಾರೆ. ಇದರ ಜೊತೆಗೆ ಕೋವಿಡ್ ಮುಂಜಾಗ್ರತೆ ವಹಿಸಲು ಹಿಂದೇಟು ಹಾಕಬಾರದು ಎಂದಿದ್ದಾರೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಚೀನಾ ಜನರು ತತ್ತರಿಸಿದ್ದಾರೆ. ಆದರೆ ಭಾರತೀಯರು ಕೋವಿಡ್ ಆತಂಕಕ್ಕೆ ಒಳಗಾಗಬೇಕಿಲ್ಲ. ವಿದೇಶಗಳಿಂದ ಬರುವ ಮಂದಿ ಮೇಲೆ ನಿಗಾ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಭಾರತದಲ್ಲಿ ಕೋವಿಡ್ ವೈರಸ್, ಒಮಿಕ್ರಾನ್ ಸೇರಿದಂತೆ ಯಾವುದೇ ಉಪತಳಿಗಳು ನಿಯಂತ್ರಣದಲ್ಲಿದೆ. ಹೀಗಾಗಿ ಆತಂಕ ಬಿಟ್ಟು ಬಿಡಿ ಎಂದು ಎನ್‌ಕೆ ಆರೋರ ಹೇಳಿದ್ದಾರೆ.

90 ದಿನದಲ್ಲಿ ಸ್ಮಶಾನವಾಗುತ್ತಾ ಚೀನಾ? ಕರ್ಮ ಬಿಡೋಲ್ಲ ಬಿಡಿ!

INSACOG ವರದಿ ಪ್ರಕಾರ ಚೀನಾದ ಜೊತೆಗೆ ಇತರ ಕೆಲ ದೇಶಗಳಲ್ಲಿ ಒಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ಭಾರತದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ. ಮಂಗಳವಾರ ಭಾರತದಲ್ಲಿ 112 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದರಲ್ಲಿ ಬಹುತೇಕ ಪ್ರಕರಣಗಳು ಮೈಲ್ಡ್ ಸಿಂಪ್ಟಮ್ಸ್ ಹೊಂದಿದೆ. ಕಳೆದ ಒಂದು ವಾರದಲ್ಲಿ ಭಾರತದಲ್ಲಿ ದಾಖಲಾಗಿರುವ ಕೋವಿಡ್ ಪ್ರಕರಣ ಸಂಖ್ಯೆ 1,103. 

ಚೀನಾ ಕೋವಿಡ್ ಕುರಿತು ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಆರಂಭದಿಂದಲೂ ಕೋವಿಡ್ ಕುರಿತು ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿಲ್ಲ. ಕೋವಿಡ್ ವೈರಸ್ ಕುರಿತು ಮುಚ್ಚಿಡಲಾಗಿತ್ತು. ಬಳಿಕ ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಸುಳ್ಳು ಹೇಳಿತ್ತು. ಇದೀಗ ಕೋವಿಡ್ ಪ್ರಕರಣ ಸಂಖ್ಯೆಯಲ್ಲೂ ಚೀನಾ ಸುಳ್ಳು ಹೇಳುತ್ತಿದೆ. ಇದು ಚೀನಾಗೆ ಹಿನ್ನಡೆ ತಂದಿದೆ.

ಒಂದೊಂದು ಪ್ರಕರಣಕ್ಕೂ ಚೀನಾದಲ್ಲಿ ಲಾಕ್‌ಡೌನ್ ಮಾಡಲಾಗುತ್ತಿತ್ತು. ಆದರೆ ಇದೀಗ ಚೀನಾ ಅತ್ತ ಲಾಕ್‌ಡೌನಿ ಮಾಡಿದರೆ ಪ್ರತಿಭಟನೆ ಬಿಸಿ, ಮಾಡದಿದ್ದರೆ ಕೋವಿಡ್ ಪ್ರಕರಣ ಮತ್ತಷ್ಟು ಹರಡುವ ಭೀತಿ ಎದುರಿಸುತ್ತಿದೆ. 

ಕರಾವಳಿಯಲ್ಲಿ ಮೀನು ಸುಗ್ಗಿಗೆ ಕಾರಣ ಕೊರೊನಾ!

ರಾಜ್ಯದಲ್ಲೇ ಕೇವಲ 12 ಕೋವಿಡ್‌ ಕೇಸ್‌ ಪತ್ತೆ
ರಾಜ್ಯದಲ್ಲಿ ಸೋಮವಾರ 12 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 57 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರು ಸಾವಿಗೀಡಾಗಿಲ್ಲ. 1120 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 0.8 ರಷ್ಟುದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 9 ಇಳಿಕೆಯಾಗಿವೆ (ಭಾನುವಾರ 21 ಪ್ರಕರಣ, ಶೂನ್ಯ ಸಾವು). ಬೆಂಗಳೂರಿನಲ್ಲಿ 9, ಕೊಡಗಿನಲ್ಲಿ ಇಬ್ಬರಿಗೆ ಹಾಗೂ ಕೋಲಾರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 27 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios