ಡಿ-ಪಿಕ್ಚರ್ಸ್, ರಿಷಬ್ ಶೆಟ್ಟಿ ಮುಡಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿಯ ಗರಿ!...

2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮೇಘನಾ ರಾಜ್ 'ಇರುವುದೆಲ್ಲವ ಬಿಟ್ಟು' ಚಿತ್ರದ ಅಭಿನಯನಕ್ಕೆ ಬೆಸ್ಟ್ ನಟಿ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ನಟ 'ಅಮ್ಮನ ಮನೆ' ಚಿತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 


ಕುಮಾರಸ್ವಾಮಿ ಸ್ಫೋಟಕ ವಿಡಿಯೋ ರಿಲೀಸ್: ಒಂದಲ್ಲ ಎರಡಲ್ಲ 35.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.  ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು (ಶುಕ್ರವಾರ) ಸ್ಫೋಟಕ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.


ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ: ಆರೋಪಿಗೆ 7 ವರ್ಷ ಜೈಲು

ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗೆ ಕೊನೆಗೂ ಶಿಕ್ಷೆಯಾಗುತ್ತಿದೆ. ಪ್ರಮುಖ ಆರೋಪಿ ಫಯಾಜ್ ಅಹಮದ್‌ಗೆ 7 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ NIA ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ.

ಕುಟುಂಬಸ್ಥರ ಆಶಿರ್ವಾದದೊಂದಿಗೆ ಸತಿಪತಿಗಳಾಗಿ ಇನ್ನೇನು ಕೊಠಡಿಯಿಂದ ಹೊರ ಬರುತ್ತಿದ್ದಂತೆ, ಬರೀ ಮೂರು ನಿಮಿಷಕ್ಕೇ ಯುವತಿ ತನ್ನ ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ.  ಇದು ಕುವೈತ್‌ ಇತಿಹಾಸದಲ್ಲೇ ಅತ್ಯಂತ ಕಡಿಮೆ ಕಾಲಾವಧಿಗೆ ಉಳಿದಂತಹ ವಿವಾಹ ಸಂಬಂಧ. 

ಬಜೆಟ್ 2020 : ಜನತೆಯಿಂದ ಸಲಹೆ ಆಹ್ವಾನಿಸಿದ ಪ್ರಧಾನಿ ಮೋದಿ

ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಈ ನಡುವೆ, ಗುರುವಾರ ಅವರು ಆರ್ಥಿಕ ತಜ್ಞರು ಹಾಗೂ ಉದ್ಯಮ ತಜ್ಞರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.

ಪೇದೆ ನೆರವಿಂದ ಸಿಕ್ತು ಕೆಲ್ಸ: ಪೊಲೀಸ್‌ ಮುಂದೆ ಕಣ್ಣೀರಾದ್ಲು ಕಾಶ್ಮೀರಿ ಹುಡುಗಿ.

ಇನ್ನೇನು ಸಂದರ್ಶನಕ್ಕೆ ಹೋಗಬೇಕಾದಾಗ ಎಲ್ಲ ದಾಖಲೆಗಳನ್ನೂ ಅಪರಿಚಿತ ನಗರವೊಂದರಲ್ಲಿ ಕಳೆದುಕೊಂಡರೆ ಹೇಗಾಗಬಹುದು..? ಎಷ್ಟು ಅಸಹಾಯಕರಾಗಿ ಬಿಡಬಹುದಲ್ಲ..? ಅದೇ ದಾಖಲೆಗಳು ಮರಳಿ ಸಿಕ್ಕಿದರೆ..? ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಮದುವೆಯಾಗೆಂದು ಶಾಲೆಯಲ್ಲೇ ಶಿಕ್ಷಕಿಯ ಎಳೆದಾಡಿದ ಪೇದೆ..!

ಪ್ರೀತಿಸುತ್ತಿದ್ದ ಯುವತಿಗೆ ಮದುವೆ ಗೊತ್ತಾದಾಗ ಪೊಲೀಸ್ ಪೇದೆ ಮಾಡಿದ್ದೇನು ಗೊತ್ತಾ..? ಪೊಲೀಸ್ ಪೇದೆ ಶಾಲೆಗೆ ಬಂದು ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯನ್ನು ಎಳೆದಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!...

‘ನಾನು ಧೋನಿ ಜತೆ ಚರ್ಚಿಸಿದ್ದೇನೆ. ಅವರ ನಿಲುವೇನು ಎಂದು ನನಗೆ ತಿಳಿದಿದೆ. ಟೆಸ್ಟ್‌ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ, ಸದ್ಯದಲ್ಲೇ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಬಹುದು’ ಎಂದು ಶಾಸ್ತ್ರಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

'ಆ ದಿನಗಳು' ಚೇತನ ಬಾಳ ಸಂಗಾತಿ ಹೀಗಿದ್ದಾರೆ ನೋಡಿ

2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನಟ ಚೇತನ್ ಕುಮಾರ್ ನಂತರ ಹಲವು ವಿವಾದಾತ್ಮಕ ಹೇಳಿಕೆಗಳು ಹಾಗೂ ಬುಡಕಟ್ಟು ಜನರ ನೋವಿಗೆ ಧ್ವನಿಯಾಗಿ ಸುದ್ದಿಯಾದವರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ಆಭರಣ ದರ..!.

ಹೊಸ ವರ್ಷದ ಆರಂಭದಲ್ಲಿ ಏರಿಕೆಯತ್ತ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ದರ, ಎರಡನೇ ವಾರದ ಆರಂಭದಲ್ಲಿ ಇಳಿಕೆಯತ್ತ ಮುಖ ಮಾಡಿರುವುದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.