ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ
ಮದುವೆಯಾಗಿ ಕೆಲವು ತಿಂಗಳುಗಳೊಳಗೆ ಡಿವೋರ್ಸ್ ಕೇಳಿದ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ಕುವೈತ್‌ನಲ್ಲಿ ಮದುವೆಯಾಗಿ ಮೂರೇ ನಿಮಿಷಕ್ಕೆ ಪತ್ನಿ ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ. ಅಷ್ಟಕ್ಕೂ ಪತಿ ಮಾಡಿದ್ದೇನು..? ಮೂರೇ ನಿಮಿಷಕ್ಕೆ ಈತ ಬೇಡ ಎಂದು ಆಕೆಗನಿಸಿದ್ದೇಕೆ..? ಇಲ್ಲಿ ಓದಿ.
ಕುವೈತ್(ಜ.10): ಕುಟುಂಬಸ್ಥರ ಆಶಿರ್ವಾದದೊಂದಿಗೆ ಸತಿಪತಿಗಳಾಗಿ ಇನ್ನೇನು ಕೊಠಡಿಯಿಂದ ಹೊರ ಬರುತ್ತಿದ್ದಂತೆ, ಬರೀ ಮೂರು ನಿಮಿಷಕ್ಕೇ ಯುವತಿ ತನ್ನ ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ. ಇದು ಕುವೈತ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಕಾಲಾವಧಿಗೆ ಉಳಿದಂತಹ ವಿವಾಹ ಸಂಬಂಧ.
ನ್ಯಾಯಾಧೀಶರ ಮುಂದೆ ಕಾನೂನು ಬದ್ಧವಾಗಿ ಸತಿಪತಿಗಳಾದ ಜೋಡಿ ಇನ್ನೇನು ರಿಜಿಸ್ಟ್ರಾರ್ ರೂಂನಿಂದ ಹೊರ ಬರುತ್ತಿದ್ದಂತೆಯೇ ಮದುವೆ ಮುರಿದಿದೆ. ಇಲ್ಲಿಯೇ, ಈ ನಿಮಿಷವೇ ಈ ವಿವಾಹವನ್ನು ಅಸಿಂಧುಗೊಳಿಸಿ ಎಂದು ವಧು ನ್ಯಾಯಾಧೀಶರಿಗೆ ಪಟ್ಟು ಹಿಡಿದಿದ್ದಾಳೆ.
'ನನ್ನ ಜುಟ್ಟು ಹಿಡಿದು ಮನೆಯಿಂದ ಹೊರದಬ್ಬಿದ್ರು' ಅತ್ತೆ ಮೇಲೆ ಐಶ್ವರ್ಯಾ ರೈ ಆರೋಪ
ಅಷ್ಟಕ್ಕೂ ಆಗಿದ್ದೇನು ಅಂತೀರಾ..? ಕಾನೂನು ಬದ್ಧವಾಗಿ ಮದುವೆಯಾಗಿ ಎಲ್ಲ ನಿಯಮಗಳನ್ನು ಪಾಲಿಸಿ ಇನ್ನೇನು ನವ ಜೋಡಿ ಕೊಠಡಿಯಿಂದ ಹೊರಬರುತ್ತಿದ್ದರು. ಈ ಸಂದರ್ಭ ಯುವತಿ ಆಯತಪ್ಪಿ ಎಡವಿದ್ದಾಳೆ. ಅಷ್ಟಕ್ಕೇ ಕೋಪಗೊಂಡ ನವ ವರ, ಸ್ಟುಪಿಡ್ ಎಂದು ಪತ್ನಿಯನ್ನುಎಲ್ಲರ ಮುಂದೆ ಅವಮಾನಿಸಿದ್ದಾನೆ.
ತನ್ನ ಗಂಡನ ರಿಯಾಕ್ಷನ್ ನೋಡಿದ ನವ ವಧು ಸೀದಾ ಜಡ್ಜ್ ಬಳಿ ಬಂದು ಈ ದಿನ, ಈ ನಿಮಿಷವೇ ವಿವಾಹ ಅಸಿಂಧುಗೊಳಿಸಿ ಎಂದು ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ.
ಅವರ ವೈವಾಹಿಕ ಜೀವನ ಉಳಿದಿದ್ದು ಬರೀ ಮೂರು ನಿಮಿಷ.
ಹೆಂಡತಿಯ ಖುಷಿಗಾಗಿ ಆಕೆಯನ್ನು ಪ್ರಿಯಕರನೊಂದಿಗೆ ಸೇರಿಸಿದ ಗಂಡ!
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಯುವತಿ ಬಗ್ಗೆ ಕುವೈತ್ ಜನತೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ವಿವಾಹ ಸಂಬಂಧ ಕೊನೆಗೊಳಿಸಿದ ಆಕೆಯ ನಿರ್ಧಾರ ಸರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮದುವೆ ಆರಂಭದಲ್ಲಿಯೇ ಈತ ಈ ರೀತಿ ವರ್ತಿಸುತ್ತಾನೆಂದರೆ ಅವನಿಗೆ ಡಿವೋರ್ಸ್ ಕೊಡುವುದೇ ಸೂಕ್ತ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಯಾವ ವಿವಾಹದಲ್ಲಿ ಪರಸ್ಪರ ಗೌರವವಿರುವುದಿಲ್ಲವೋ ಅದು ವಿಫಲ ವಿವಾಹ ಎಂದು ಪ್ರತಿಕ್ರಿಯಿಸಿದ್ದಾರೆ.
ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ