ಚಿಕ್ಕಬಳ್ಳಾಪುರ(ಜ.10): ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಪೊಲೀಸ್‌ ಪೇದೆಯೇ ಶಿಕ್ಷಕಿಯೊಂದಿಗ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್‌ ಇಲಾಖೆ ರಾಜೀ ಪಂಚಾಯಿತಿ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಆರೋಪ ಗುರುವಾರ ಕೇಳಿಬಂದಿದೆ.

ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಮಕ್ಕಳು ಮತ್ತು ಸಹ ಶಿಕ್ಷಕರ ಎದುರಿನಲ್ಲಿಯೇ ಶಿಕ್ಷಕಿಯನ್ನು ಪೊಲೀಸ್‌ ಪೇದೆ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ಧ ಕ್ರಮಕ್ಕೆ ಪೊಲೀಸ್‌ ಇಲಾಖೆ ಮುಂದಾಗಿಲ್ಲ.

ಶಿಕ್ಷಕಿಯನ್ನು ಎಳೆದಾಡಿದ ಪೇದೆ

ಗುಡಿಬಂಡೆ ಪೊಲೀಸ್‌ ಠಾಣೆ ಗುಪ್ತವಾರ್ತೆ ಪೊಲೀಸ್‌ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್‌ ಎಂಬುವರು ಗುಡಿಬಂಡೆ ಖಾಸಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಶಿಕ್ಷಕಿಗೆ ಮತ್ತೊಬ್ಬರೊಂದಿಗೆ ಮದುವೆ ಗೊತ್ತುಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರ ಎದುರಿನಲ್ಲಿಯೇ ಮದುವೆಯಾಗುವಂತೆ ಒತ್ತಾಯಿಸಿ ಶಿಕ್ಷಕಿಯನ್ನು ಎಳೆದಾಡಿರುವುದಾಗಿ ತಿಳಿದುಬಂದಿದೆ.

ವಿದ್ಯಾರ್ಥಿನಿಗೆ ಗುಂಡು ಸೂಜಿನಿಂದ 40 ಬಾರಿ ಚುಚ್ಚಿದ ಶಿಕ್ಷಕಿ

ಈ ಸಂಬಂಧ ದೂರು ದಾಖಲಿಸಿದರೆ ಶಿಕ್ಷಕಿಯ ವಿವಾಹಕ್ಕೆ ಅಡ್ಡಿ ಉಂಟಾಗುತ್ತದೆ ಎಂಬ ಕಾರಣದಿಂದ ರಾಜೀ ಸಂಧಾನ ನಡೆಸಿದ್ದಾರೆ. ಶಿಕ್ಷಕಿಯ ಮೇಲೆ ದೌರ್ಜನ್ಯ ನಡೆಸಿದ್ದರೂ ಪೇದೆ ವಿರುದ್ಧ ಇಲಾಖೆ ಯಾವುದೇ ಶಿಸ್ತಿನ ಕ್ರಮಕ್ಕೆ ಮುಂದಾಗಿಲ್ಲ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ.

ಪೇದೆ ವಿರುದ್ಧ ಎಸ್ಪಿಗೆ ದೂರು

ಪೊಲೀಸ್‌ ಪೇದೆಯ ಅಸಭ್ಯ ವರ್ತನೆಯಿಂದ ಶಾಲೆಯಲ್ಲಿ ಕಣ್ಣೀರಿಟ್ಟಿರುವ ಶಿಕ್ಷಕಿಯನ್ನು ಸಮಾಧಾನಪಡಿಸಿ, ರಾಜೀ ವಮಾಡಿಸುವ ಯತ್ನ ವಿರೋಧಿಸಿ ಶಿಕ್ಷಕಿ ಸಂಬಂಧಿಕರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಮಾಡಲು ಮುಂದಾಗಿದ್ದಾರೆ.

ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ