Asianet Suvarna News Asianet Suvarna News

ಮೋದಿ ವಿರುದ್ಧ ದ್ವೇಷ ಭಾಷಣ: ಆಜಂ ಖಾನ್‌ ಖುಲಾಸೆ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 2019ರಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂಖಾನ್‌ಗೆ ನೆಮ್ಮದಿ ದೊರಕಿದೆ. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ 3 ವರ್ಷದ ಶಿಕ್ಷೆಯನ್ನು ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿ, ಅವರನ್ನು ಖುಲಾಸೆಗೊಳಿಸಿದೆ.

Hate speech against Modi Azam Khan acquitted The court quashed the sentence of 3 years akb
Author
First Published May 25, 2023, 6:15 AM IST

ರಾಂಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 2019ರಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂಖಾನ್‌ಗೆ ನೆಮ್ಮದಿ ದೊರಕಿದೆ. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ 3 ವರ್ಷದ ಶಿಕ್ಷೆಯನ್ನು ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿ, ಅವರನ್ನು ಖುಲಾಸೆಗೊಳಿಸಿದೆ. 2019ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆಜಂ ಖಾನ್‌, ಮುಸ್ಲಿಮರು ಬದುಕಲು ಕಷ್ಟಪಡಬೇಕಾದ ಪರಿಸ್ಥಿತಿಯನ್ನು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. 

ಈ ಹೇಳಿಕೆಯ ವಿರುದ್ಧ ಹೂಡಲಾದ ಮಾನನಷ್ಟ ಮೊಕದ್ದಮೆಯ (Defamation case) ವಿಚಾರಣೆ ನಡೆಸಿದ ಮ್ಯಾಜಿಸ್ಪ್ರೇಟ್‌ ಕೋರ್ಟ್ 2022ರ ಅ.27ರಂದು ಖಾನ್‌ಗೆ (Azam Khan) 3 ವರ್ಷಗಳ ಶಿಕ್ಷೆ ವಿಧಿಸಿತ್ತು. ಹೀಗಾಗಿ ಖಾನ್‌ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸೆಷನ್ಸ್‌ ನ್ಯಾಯಾಲಯ ಜೈಲುಶಿಕ್ಷೆಯನ್ನು ರದ್ದುಪಡಿಸಿದೆ. ಬಳಿಕ ಮಾತನಾಡಿದ ಅವರ ವಕೀಲ ವಿನೋದ್‌ ಶರ್ಮಾ (vinod sharma), ನಾವು ದ್ವೇಷಭಾಷಣ ಪ್ರಕರಣದಲ್ಲಿ ಖುಲಾಸೆಗೊಂಡಿದ್ದೇವೆ. ನಮಗೆ ನ್ಯಾಯ ಸಿಕ್ಕಿದ್ದಕ್ಕಾಗಿ ನಮಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Rampur By Elections: ಅಜಂ ಖಾನ್‌ ಭದ್ರಕೋಟೆಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅರಳಿದ ಕಮಲ..!

ಆಜಂ ಖಾನ್‌ ಅವರನ್ನು ವಜಾ ಮಾಡಲಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ ರಾಮಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಕಾಶ್‌ ಸಕ್ಸೇನಾ (Akash saxena) ಜಯಗಳಿಸಿದ್ದಾರೆ. ಆಜಂ ಖಾನ್‌ ಅವರನ್ನು ವಜಾ ಮಾಡಲಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ ರಾಮಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಕಾಶ್‌ ಸಕ್ಸೇನಾ (Akash saxena) ಜಯಗಳಿಸಿದ್ದಾರೆ. ರಾಮ್‌ಪುರ ಅಜಂ ಖಾನ್ ಅವರ ಕುಟುಂಬದ ಭದ್ರಕೋಟೆಯಾಗಿತ್ತು. ಆದರೆ ನಂತರ ನಡೆದ ಚುನಾವಣೆಯಲ್ಲಿ ಇದು ಬಿಜೆಪಿ ಪಾಲಾಗಿತ್ತು.2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಎಸ್‌ಪಿ ಶಾಸಕ ಮತ್ತು ಪಕ್ಷದ ಪ್ರಬಲ ವ್ಯಕ್ತಿ ಅಜಂ ಖಾನ್ ಅವರನ್ನು ಅನರ್ಹಗೊಳಿಸಿದ್ದರಿಂದ ರಾಂಪುರ ಸದರ್‌ನಲ್ಲಿ ಉಪಚುನಾವಣೆ ಅಗತ್ಯವಾಗಿತ್ತು. ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಲ್ಲಿ ಬಿಜೆಪಿಗೆ, ರಾಮ್‌ಪುರದ ಗೆಲುವನ್ನು ಅತ್ಯಂತ ದೊಡ್ಡ ಗೆಲುವೆಂದು ವಿಶ್ಲೇಷಿಸಲಾಗಿತ್ತು. ಬಿಜೆಪಿ ಎಂದಿಗೂ ಈ ಸ್ಥಾನವನ್ನು ಗೆದ್ದಿರಲಿಲ್ಲ, ಆದರೆ ಅಜಂ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ 2002 ರಿಂದ ನಿರಂತರವಾಗಿ ಈ ಕ್ಷೇತ್ರ ಗೆದ್ದಿದ್ದಾರೆ. 1980 ಮತ್ತು 1993 ರ ನಡುವೆ ವಿವಿಧ ಪಕ್ಷಗಳ ಟಿಕೆಟ್‌ಗಳ ಮೇಲೆ ಅಜಂ ಖಾನ್ ಸ್ವತಃ ಗೆದ್ದಿದ್ದಾರೆ. ಅಜಂ ಖಾನ್‌ 10 ಬಾರಿ ಶಾಸಕ ಹಾಗೂ ತಲಾ ಒಂದು ಬಾರಿ ರಾಜಸಭೆ ಹಾಗೂ ಲೋಕಸಭೆ ಸಂಸದರಾಗಿದ್ದರು.

Azam Khan Disqualified: ದ್ವೇಷ ಭಾಷಣದ ಆರೋಪ ಸಾಬೀತು, ಶಾಸಕ ಸ್ಥಾನದಿಂದ ಅಜಂ ಖಾನ್‌ ಅನರ್ಹ

Follow Us:
Download App:
  • android
  • ios