Asianet Suvarna News Asianet Suvarna News

Azam Khan Disqualified: ದ್ವೇಷ ಭಾಷಣದ ಆರೋಪ ಸಾಬೀತು, ಶಾಸಕ ಸ್ಥಾನದಿಂದ ಅಜಂ ಖಾನ್‌ ಅನರ್ಹ

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್‌, ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. 2013ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅನ್ವಯ ಅವರ ಶಾಸಕ ಸ್ಥಾನ ರದ್ದಾಗಿದೆ.

Hate Speech against PM Modi and Yogi Adityanath Convicted Azam Khan Disqualified As UP MLA san
Author
First Published Oct 28, 2022, 8:39 PM IST

ಲಕ್ನೋ (ಅ. 28): ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 2019 ರ ದ್ವೇಷ ಭಾಷಣಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಒಂದು ದಿನದ ನಂತರ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಶುಕ್ರವಾರ ರಾಂಪುರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. 2013 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 74 ವರ್ಷದ ನಾಯಕ ತನ್ನ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. 2013 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕ್ರಿಮಿನಲ್ ಮೊಕದ್ದಮೆಯಲ್ಲಿ ಎಂಎಲ್ಎ, ಎಂಎಲ್ಸಿ ಅಥವಾ ಎಂಪಿ ತಪ್ಪಿತಸ್ಥರಾಗಿದ್ದರೆ ಮತ್ತು ಕನಿಷ್ಠ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರೆ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ. ಈ ತೀರ್ಪಿನಂತೆ ಅಜಂ ಖಾನ್‌ ಈಗ ತಪ್ಪಿತಸ್ಥರಾಗಿರುವ ಕಾರಣ ರಾಂಪುರ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಅಜಂ ಖಾನ್ 2019 ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಜಯಿಸಿದ್ದರು. ಆದರೆ ಮಾರ್ಚ್ 2022 ರಲ್ಲಿ ಯುಪಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಅವರು ಈ ಸ್ಥಾನವನ್ನು ತೆರವು ಮಾಡಿದ್ದರು. ಎಸ್‌ಪಿ ನಾಯಕ ಅವರು ಸೀತಾಪುರ ಜೈಲಿನಲ್ಲಿದ್ದಾಗ 2022 ರ ವಿಧಾನಸಭಾ ಚುನಾವಣೆಯಲ್ಲಿ ರಾಂಪುರದಿಂದ ಗೆದ್ದಿದ್ದರು. ಗುರುವಾರ, ಅಜಂ ಖಾನ್‌ಗೆ ಜಾಮೀನು ನೀಡಲಾಗಿದ್ದು, ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ವಾರದ ಸಮಯವನ್ನು ನೀಡಲಾಗಿದೆ.

ಪ್ರಚೋದನಕಾರಿ ಹೇಳಿಕೆ ಪ್ರಕರಣ 2019, ಯೋಗಿ ವಿರುದ್ಧ ಅಬ್ಬರಿಸಿದ ಅಜಂ ಖಾನ್‌ಗೆ ಜೈಲು!

ಅಜಂ ಖಾನ್ ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಲ್ಲಿ ನಂಬರ್ ಟು ನಾಯಕರಾಗಿ ಕಾಣಿಸಿಕೊಂಡಿದ್ದಾರೆ, ರಾಂಪುರ ಮತ್ತು ಪಶ್ಚಿಮ ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ತಮ್ಮ ಶಕ್ತಿಯನ್ನು ಹೊಂದಿದ್ದಾರೆ. 2017 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜವಾದಿ ನಾಯಕ ಅಜಂ ಖಾನ್‌,  ಭ್ರಷ್ಟಾಚಾರ ಮತ್ತು ಕಳ್ಳತನದೊಂದಿಗೆ ಭೂಕಬಳಿಕೆಯವರೆಗಿನ 87 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Hate Speech: ಧರ್ಮದ ಹೆಸರಿನಲ್ಲಿ ಎಂಥಾ ಸ್ಥಿತಿಗೆ ತಲುಪಿದ್ದೇವೆ..! ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್‌ ಬೇಸರ!

ದ್ವೇಷದ ಭಾಷಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಕೇಳಿದ ಒಂದು ವಾರದ ನಂತರ ಅಜಂ ಖಾನ್‌ಗೆ ಶಿಕ್ಷೆ ವಿಧಿಸಲಾಗಿದೆ, ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲರಾದಲ್ಲಿ ಅಥವಾ ವಿಳಂಬ ಮಾಡಿದಲ್ಲಿ ಅದನ್ನು ನ್ಯಾಯಾಂಗ ನಿಂದನೆಯನ್ನಾಗಿ ಪರಿಗಣನೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿತ್ತು.

ಅಂದಹಾಗೆ, ಅಜಂ ಖಾನ್‌ಗೆ ಇನ್ನೂ ಕೆಲವು ಆಯ್ಕೆಗಳಿವೆ. ರಾಂಪುರ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಅವರು ಕೆಳ ನ್ಯಾಯಾಲಯದ ಮೊರೆ ಹೋಗಬಹುದು. ಅಲ್ಲಿಯೂ ಪರಿಹಾರ ಸಿಗದಿದ್ದರೆ ಹೈಕೋರ್ಟ್ ಮೆಟ್ಟಿಲೇರಬಹುದು. ಸ್ವತಃ ಆಜಂ ಖಾನ್ ಕೂಡ ತಮಗೆ ಹಲವು ಆಯ್ಕೆಗಳಿವೆ ಎಂದು ಹೇಳಿದ್ದಾರೆ. ನ್ಯಾಯಾಲಯದ ಶಿಕ್ಷೆಯ ನಂತರ, ಇದು ಗರಿಷ್ಠ ಶಿಕ್ಷೆಯಾಗಿದೆ ಎಂದು ಹೇಳಿದರು. ಬೆಲ್ ಕಡ್ಡಾಯ ನಿಬಂಧನೆಯಾಗಿದೆ. ಹಾಗಾಗಿ ಜಾಮೀನಿನ ಮೇಲೆ ಇದ್ದೇನೆ. ಆದರೆ ನನಗೆ ನ್ಯಾಯದ ಬಗ್ಗೆ ಮನವರಿಕೆಯಾಗಿದೆ. ಇದು ಮೊದಲ ಹೆಜ್ಜೆ. ಕಾನೂನು ಮಾರ್ಗಗಳು ಈಗ ತೆರೆದಿವೆ. ಹಲವು ಆಯ್ಕೆಗಳಿವೆ. ಸೆಷನ್ಸ್ ನ್ಯಾಯಾಲಯದ ಮೊರೆ ಹೋಗುತ್ತೇವೆ. ಎಲ್ಲಾ ಜೀವನವು ಹೋರಾಟದಿಂದ ಕೂಡಿದೆ ಎಂದಿದ್ದಾರೆ.

Follow Us:
Download App:
  • android
  • ios