Asianet Suvarna News Asianet Suvarna News

Rampur By Elections: ಅಜಂ ಖಾನ್‌ ಭದ್ರಕೋಟೆಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅರಳಿದ ಕಮಲ..!

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಹಾಗೂ ಅವರ ಕುಟುಂಬವೇ ಪ್ರಾಬಲ್ಯ ಸಾಧಿಸಿದ್ದ ಕ್ಷೇತ್ರ ರಾಮ್‌ಪುರ. ಈ ಹಿನ್ನೆಲೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದೆ. 

bjp wins in uttar pradeshs rampur dominated by samajwadis azam khan since 2002 ash
Author
First Published Dec 8, 2022, 5:17 PM IST

ಇಂದು ಗುಜರಾತ್ (Gujarat) ಹಾಗೂ ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results) ಮಾತ್ರವಲ್ಲದೆ, ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿ (Mainpuri) ಲೋಕಸಭೆ ಕ್ಷೇತ್ರ ಸೇರಿ ಇತರೆ 6 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆಯೂ ನಡೆಯುತ್ತಿದೆ. ಈ ಪೈಕಿ, ಉತ್ತರ ಪ್ರದೇಶದ ರಾಮ್‌ಪುರ (Rampur) ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಇದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ (Azam Khan) ಹಾಗೂ ಅವರ ಕುಟುಂಬವೇ ಪ್ರಾಬಲ್ಯ ಸಾಧಿಸಿದ್ದ ಕ್ಷೇತ್ರ. ಅಜಂ ಖಾನ್‌ ಅವರ ಭದ್ರಕೋಟೆಯ ಕ್ಷೇತ್ರವಾಗಿತ್ತು ರಾಮ್‌ಪುರ. ಈ ಹಿನ್ನೆಲೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದೆ. 

ಆದರೆ, ರಾಮ್‌ಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಜನರಿಗೆ ಮತದಾನ ಮಾಡಲು ಯುಪಿ ಸರ್ಕಾರ ಬಿಡುತ್ತಿಲ್ಲ. ಮತದಾನ ನಡೆದ ದಿನ ಅಂದರೆ ಸೋಮವಾರ, ಡಿಸೆಂಬರ್‌ 5 ರಂದು ಪೊಲೀಸರು ಹೊರಗೆ ಬಂದ ತಮ್ಮ ಬೆಂಬಲಿಗರಿಗೆ ಲಾಠಿಯಿಂದ ಹೊಡೆಯುತ್ತಿತ್ತು ಎಂದು ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಆರೋಪಿಸಿತ್ತು. ಇದಕ್ಕೆ ಪೂರಕವೆಂಬಂತೆ ರಾಮ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ನೀರಸ ಮತದಾನ ದಾಖಲಾಗಿದ್ದು, ಶೇ.40ಕ್ಕಿಂತ ಕಡಿಮೆ ಅರ್ಹ ಮತದಾರರು ಮತದಾನ ಕೇಂದ್ರಗಳಿಗೆ ಆಗಮಿಸಿದ್ದರು.

ಇದನ್ನು ಓದಿ: ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿಯದ್ದೇ ಕಾರುಬಾರು: ‘ಸೊಸೆ’ ಡಿಂಪಲ್‌ ಯಾದವ್‌ ಎದುರು ಮಂಕಾದ ಕಮಲ..!

2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಎಸ್‌ಪಿ ಶಾಸಕ ಮತ್ತು ಪಕ್ಷದ ಪ್ರಬಲ ವ್ಯಕ್ತಿ ಅಜಮ್ ಖಾನ್ ಅವರನ್ನು ಅನರ್ಹಗೊಳಿಸಿದ್ದರಿಂದ ರಾಂಪುರ ಸದರ್‌ನಲ್ಲಿ ಉಪಚುನಾವಣೆ ಅಗತ್ಯವಾಗಿತ್ತು. ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಬಿಜೆಪಿಗೆ ರಾಮ್‌ಪುರದ ಗೆಲುವು ದೊಡ್ಡ ಗೆಲುವು ಎಂದರೆ ತಪ್ಪಲ್ಲ. ಬಿಜೆಪಿ ಎಂದಿಗೂ ಈ ಸ್ಥಾನವನ್ನು ಗೆದ್ದಿರಲಿಲ್ಲ, ಆದರೆ ಅಜಂ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ 2002 ರಿಂದ ನಿರಂತರವಾಗಿ ಈ ಕ್ಷೇತ್ರ ಗೆದ್ದಿದ್ದಾರೆ. 1980 ಮತ್ತು 1993 ರ ನಡುವೆ ವಿವಿಧ ಪಕ್ಷಗಳ ಟಿಕೆಟ್‌ಗಳ ಮೇಲೆ ಅಜಂ ಖಾನ್ ಸ್ವತಃ ಗೆದ್ದಿದ್ದಾರೆ. ಅಜಂ ಖಾನ್‌ 10 ಬಾರಿ ಶಾಕ ಹಾಗೂ ತಲಾ ಒಂದು ಬಾರಿ ರಾಜಸಭೇ ಹಾಗೂ ಲೋಕಸಭೆ ಸಂಸದರಾಗಿದ್ದಾರು. 

ತಮ್ಮ ಬೆಂಬಲಿಗರಿಗೆ ಮತದಾನಕ್ಕೆ ಅವಕಾಶವೇ ನೀಡಿಲ್ಲ ಎಂದ ಎಸ್‌ಪಿ..!
ಉಪ ಚುನಾವಣೆಯ ಮತದಾನದ ದಿನ ಪೊಲೀಸರು ಬೆದರಿಕೆ, ಕಿರುಕುಳ ಮತ್ತು ಮತದಾನ ಮಾಡದಂತೆ ತಡೆದಿದ್ದಾರೆ ಎಂದು ಅಜಂ ಖಾನ್ ಅವರ ಕುಟುಂಬ ಸದಸ್ಯರು  ಆರೋಪಿಸಿದ್ದಾರೆ. ಹಾಗೂ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸಹ ತನ್ನ ಬೆಂಬಲಿಗರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: Himachal Pradesh Election Results 2022: ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಿವು..

ರಾಮ್‌ಪುರ ಸದರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ "ಪ್ರಜಾಪ್ರಭುತ್ವದ ಕೊಲೆ" ಯಾಗಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಶಾಸಕರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಗಳವಾರ ಕಲಾಪಕ್ಕೆ ಸಹ ಅಡ್ಡಿಪಡಿಸಿದ್ದರು. "ಪ್ರಜಾಪ್ರಭುತ್ವವನ್ನು ನಾಚಿಕೆಗೇಡು ಮಾಡಲಾಗಿದೆ" ಎಂದು ಪಕ್ಷದ ಶಾಸಕರೊಬ್ಬರು ಹೇಳಿದ್ದು, ಆದರೆ ರಾಜ್ಯ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ. ಹಾಗೂ, ಎಸ್‌ಪಿ ಸದಸ್ಯರ ಕೆಲಸ ಅಂದ್ರೆ ಕೇವಲ ಕೂಗುವುದಷ್ಟೇ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.

ರಾಮ್‌ಪುರ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ಶಿವ ಬಹದ್ದೂರ್ ಸಕ್ಸೇನಾ ಅವರ ಪುತ್ರ ಆಕಾಶ್ ಸಕ್ಸೇನಾ ಅವರನ್ನು ಅಜಂ ಖಾನ್ ಅವರ ಆಪ್ತ ಆಸಿಂ ರಾಜಾ ವಿರುದ್ಧ ಕಣಕ್ಕಿಳಿಸಿತ್ತು. ಆಕಾಶ್ ಸಕ್ಸೇನಾ ಅವರು 62 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದರೆ,  ಆಸಿಂ ರಾಜಾ ಅವರು 36.16 ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. 

ಇದನ್ನೂ ಓದಿ: Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ

Follow Us:
Download App:
  • android
  • ios