Car Accident: ಅಸ್ಥಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ಕಾರು ಅಪಘಾತಕ್ಕೀಡಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಜೈಪುರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜೈಪುರ: ಹರಿದ್ವಾರದಲ್ಲಿ ಹಿರಿಯರ ಅಸ್ಥಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ಕಾರ್ ಅಪಘಾತಕ್ಕೊಳಗಾಗಿ ಏಳು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ತಡರಾತ್ರಿ ಜೈಪುರದ ಶಿವದಾಸಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದ್ರೆ ಕಾರ್‌ನಲ್ಲಿದ್ದ ಎಲ್ಲಾ ಏಳು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಅಪಘಾತಕ್ಕೊಳಗಾದ ಕಾರ್ ತೆರವುಗೊಳಿಸಿದ್ದಾರೆ.

ಜೈಪುರ ಮತ್ತು ಭಿಲ್ವಾರ ಮೂಲದ ಕುಟುಂಬದ ಏಳು ಜನರು ಕಾರ್‌ನಲ್ಲಿ ಹರಿದ್ವಾರಕ್ಕೆ ತೆರಳಿತ್ತು. ಹರಿದ್ವಾರದಲ್ಲಿ ಚಿತಾಭಸ್ಮವನ್ನ ವಿಸರ್ಜನೆ ಮಾಡಿ ಏಳು ಜನರು ಊರಿಗೆ ಹಿಂದಿರುಗುತ್ತಿತ್ತು. ಈ ಸಂದರ್ಭ ತಡರಾತ್ರಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಕಾಲುವೆಗೆ ಬಿದ್ದಿದೆ. ತಡರಾತ್ರಿ ಕಾರ್‌ ಬಿದ್ದಿದ್ದರೂ, ಈ ಪ್ರಕರಣ ಮಧ್ಯಾಹ್ನ ಬೆಳಕಿಗೆ ಬಂದಿದೆ.

ರಾತ್ರಿ ಕಾರ್ ಬಿದ್ದರೂ, ಗೊತ್ತಾಗಿದ್ದು ಮಧ್ಯಾಹ್ನ!

ಇಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ದಾರಿಹೋಕರೊಬ್ಬರು ಕಾಲುವೆ ಕೆಳಗೆ ಕಾರ್ ಬಿದ್ದಿರೋದನ್ನು ಗಮನಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡುವಷ್ಟರಲ್ಲಿ ಕಾರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕ್ರೇನ್ ಮೂಲಕ ಕಾರ್ ಮೇಲೆಕ್ಕೆತ್ತಲಾಗಿದೆ. ಎಲ್ಲಾ ಮೃತದೇಹಗಳನ್ನು ಶವಾಗರಕ್ಕೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಕ್ಕಳು ಸೇರಿದಂತೆ ಏಳು ಜನರ ಸಾವು

ಸ್ಥಳೀಯರಿಂದ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಕಾಲುವೆಯಲ್ಲಿದ್ದ ಕಾರ್ ಮೇಲೆಕ್ಕೆತ್ತಲಾಗಿದೆ. ಮೃತ ಏಳು ಜನರಲ್ಲಿ ಇಬ್ಬರು ಮಕ್ಕಳಿದ್ದಾರೆ. ಮೃತರ ಬಳಿಯಲ್ಲಿದ್ದ ಐಡಿ ಕಾರ್ಡ್‌ನಿಂದ ಎಲ್ಲರೂ ಜೈಪುರ ಮತ್ತು ಶಹಾಪುರ (ಭಿಲಿವಾಡ) ನಿವಾಸಿಗಳು ಎಂದು ತಿಳಿದು ಬಂದಿದೆ. ಮೂರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾಸನ ಗಣಪತಿ ವಿಸರ್ಜನೆ ವೇಳೆ ಅಪಘಾತ: ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ಯುವಕ

ವಾಹನ ಡಿಕ್ಕಿಯಾಗಿ ಚಿರತೆ ಮರಿ ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಮರಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ಮಾರ್ಗದಲ್ಲಿ ನಡೆದಿದೆ. ಸೊರಬ ತಾಲೂಕಿನ ಅವಲುಗೋಡು ಬಳಿ ರಸ್ತೆಯಲ್ಲಿ ಅಂದಾಜು ಏಳು ತಿಂಗಳ ಹೆಣ್ಣು ಚಿರತೆ ಮರಿ ಸಾವಿಗೀಡಾಗಿದೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಾಹನ ಸವಾರರು ರಾತ್ರಿ ವೇಳೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಬೇಕು.

ಇದನ್ನೂ ಓದಿ: Bengaluru Accident: ಆಟೋಗೆ ಡಿಕ್ಕಿಯಾಗಿ ಕಟ್ಟಡಕ್ಕೆ ಗುದ್ದಿ ನಿಂತ ಕಂಟೈನರ್ ಲಾರಿ; ಚಾಲಕ ಸೇರಿದಂತೆ ಮೂವರ ಸಾವು

ಅರಣ್ಯ ಇಲಾಖೆಯಿಂದ ಗಸ್ತು ನಡೆಸಲು ಸಿಬ್ಬಂದಿ ನೇಮಿಸಿದ್ದು, ತಾಯಿ ಚಿರತೆ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಸಂಚರಿಸ ಬಹುದಾದ ಸಾರ್ವಜನಿಕರು ಎಚ್ಚರ ಎಚ್ಚರ ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಶ್ರೀಪಾದ ನಾಯ್ಕ ಮಾಹಿತಿ ನೀಡಿದ್ದಾರೆ . ಸಾವನ್ನಪ್ಪಿದ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಜೊತೆಗೆ ಪ್ರಕರಣ ಒಂದನ್ನು ಅರಣ್ಯ ಇಲಾಖೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಇದನ್ನೂ ಓದಿ: ಫ್ಲೈಒವರ್‌ನಿಂದ ಪಲ್ಟಿಯಾಗಿ ರೈಲ್ವೆ ಹಳಿಗೆ ಬಿದ್ದ ಕಾರು: ರೈಲುಗಳ ಸಂಚಾರದಲ್ಲಿ ವ್ಯತ್ಯಯ