Asianet Suvarna News Asianet Suvarna News

Har Ghar Jal Utsav: ಸರ್ಕಾರ ರಚಿಸೋಕೆ ಮಾತ್ರವಲ್ಲ, ದೇಶ ಕಟ್ಟೋಕು ಶ್ರಮ ವಹಿಸಿ: ಪ್ರಧಾನಿ ಮೋದಿ

21ನೇ ಶತಮಾನದ ಬಹುದೊಡ್ಡ ಸವಾಲು ಜಲ ಭದ್ರತೆ ಎಂದು ವಿಶ್ವದ ದೊಡ್ಡ ಸಂಸ್ಥೆಗಳು ಹೇಳುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಅದಕ್ಕಾಗಿಯೇ ನಮ್ಮ ಸರ್ಕಾರ ಕಳೆದ 8 ವರ್ಷಗಳಿಂದ ಈ ಮನೋಭಾವದಿಂದ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಈಡೇರಿಕೆಗೆ ನೀರಿನ ಕೊರತೆಯೂ ಅಡ್ಡಿಯಾಗಬಹುದು ಎಂದಿದ್ದಾರೆ.

Har Ghar Jal Utsav PM Narendra Modi lauds India achievements san
Author
First Published Aug 19, 2022, 1:46 PM IST

ನವದೆಹಲಿ (ಆ.19): ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಗೋವಾದಲ್ಲಿ ಆರಂಭವಾದ ಹರ್‌ ಘರ್‌ ಜಲ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು. ಮೊದಲಿಗೆ ದೇಶದ ಜನತೆಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಮೃತ್ ಅವಧಿಯಲ್ಲಿ ಭಾರತವು ಕೆಲಸ ಮಾಡುತ್ತಿರುವ ಬೃಹತ್ ಗುರಿಗಳಿಗೆ ಸಂಬಂಧಿಸಿದಂತೆ ಇಂದು ನಾವು ಮೂರು ಪ್ರಮುಖ ಮೈಲಿಗಲ್ಲುಗಳನ್ನು ದಾಟಿದ್ದೇವೆ ಎಂದು ಹೇಳಿದರು. ಇಂದು ಗೋವಾ ದೇಶದಲ್ಲೇ ಪ್ರತಿ ಮನೆಯಲ್ಲೂ ನೀರಿ ಪ್ರಮಾಣ ಪತ್ರ ಪಡೆದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು. ಈ ರಾಜ್ಯದ ಪ್ರತಿ ಮನೆಯಲ್ಲೂ ನೀರಿನ ಕುರಿತಾದ ಪ್ರಮಾಣಪತ್ರವಿದೆ ಎಂದರು. ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೂಡ ಹರ್ ಘರ್ ಜಲ್ ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಇದಕ್ಕಾಗಿ ಗೋವಾದ ಜನತೆಗೆ ಹಾಗೂ ಅಲ್ಲಿನ ಮುಖ್ಯಮಂತ್ರಿಗಳಿಗೆ ನನ್ನ ಅಭಿನಂದನೆಗಳು ತಿಳಿಸುತ್ತೇನೆ. ಇಂದು ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್‌ಲೈನ್‌ನಲ್ಲಿ ಶುದ್ಧ ನೀರಿನ ಸೌಲಭ್ಯ ಕಲ್ಪಿಸಿರುವುದು ಎರಡನೇ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮನೆ ಮನೆಗೆ ನೀರು ತಲುಪಿಸುವ ಸರ್ಕಾರದ ಅಭಿಯಾನಕ್ಕೆ ಇದೊಂದು ದೊಡ್ಡ ಯಶಸ್ಸು. ಪ್ರತಿಯೊಬ್ಬರ ಶ್ರಮಕ್ಕೆ ಇದೊಂದು ಉತ್ತಮ ಉದಾಹರಣೆಯೂ ಹೌದು ಎಂದು ಹೇಳಿದ್ದಾರೆ.

ಒಂದು ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಒಡಿಎಫ್ ಪ್ಲಸ್: ಗ್ರಾಮಗಳನ್ನು ಒಡಿಎಫ್ ಪ್ಲಸ್ (ಬಯಲು ಶೌಚ ಮುಕ್ತ) ಮಾಡುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೇವೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ದೇಶವೂ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ದೇಶದ ವಿವಿಧ ರಾಜ್ಯಗಳ ಒಂದು ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಒಡಿಎಫ್ ಪ್ಲಸ್ ಆಗಿವೆ ಎಂದು ಈ ವೇಳೆ ಹೇಳಿದ್ದಾರೆ.

ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

ಜಲ ಭದ್ರತೆ 21ನೇ ಶತಮಾನದ ದೊಡ್ಡ ಸವಾಲು: 21ನೇ ಶತಮಾನದ ಬಹುದೊಡ್ಡ ಸವಾಲು ಜಲ ಭದ್ರತೆ ಎಂದು ವಿಶ್ವದ ದೊಡ್ಡ ಸಂಸ್ಥೆಗಳು ಹೇಳುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಅದಕ್ಕಾಗಿಯೇ ನಮ್ಮ ಸರ್ಕಾರ ಕಳೆದ 8 ವರ್ಷಗಳಿಂದ ಇದರ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಈಡೇರಿಕೆಗೆ ನೀರಿನ ಕೊರತೆಯೂ ಅಡ್ಡಿಯಾಗಬಹುದು. ನೀರಿನ ಬಗ್ಗೆ ದೊಡ್ಡ ದೃಷ್ಟಿಯ ಅಗತ್ಯವಿದೆ ಎಂದರು. ಹಿಂದಿನ ಸರ್ಕಾರಗಳು ನೀರಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದವು ಆದರೆ, ಕಾರ್ಯ ನಿರ್ವಹಿಸುತ್ತಿರಲಿಲ್ಲ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ನ್ಯೂಜೆರ್ಸಿಗೆ ತಲುಪಿದ ಯೋಗಿ, ಬುಲ್ಡೋಜರ್ ಬಾಬಾ ಅಮೆರಿಕದಲ್ಲೂ ಫೇಮಸ್‌!

ದೇಶ ಕಟ್ಟೋಕು ಶ್ರಮವಹಿಸಿ: ಸರ್ಕಾರ ರಚಿಸಲು ಕಷ್ಟಪಡಬೇಕಾಗಿಲ್ಲ, ಆದರೆ ದೇಶವನ್ನು ಅಭಿವೃದ್ಧಿ ಹೊಂದಿದ ಸಮಸ್ಯೆಗಳೇ ಇಲ್ಲದಂತೆ ರೂಪಿಸಲು ಕಷ್ಟಪಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ನಾವೆಲ್ಲರೂ ದೇಶವನ್ನು ನಿರ್ಮಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ, ಆದ್ದರಿಂದ ನಾವು ದೇಶದ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ನಿರಂತರವಾಗಿ ಪರಿಹರಿಸುತ್ತಿದ್ದೇವೆ. ಈಗ ಭಾರತದಲ್ಲಿ ರಾಮ್‌ಸರ್ ಸೈಟ್‌ಗಳ ಸಂಖ್ಯೆಯೂ 75 ಕ್ಕೆ ಏರಿದೆ. ಈ ಪೈಕಿ ಕಳೆದ 8 ವರ್ಷಗಳಲ್ಲಿ 50 ಸೈಟ್‌ಗಳನ್ನು ಸೇರಿಸಲಾಗಿದೆ. ಭಾರತವು ನೀರಿನ ಭದ್ರತೆಗಾಗಿ ಸರ್ವಾಂಗೀಣ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅದು ಎಲ್ಲಾ ದಿಕ್ಕುಗಳಲ್ಲಿಯೂ ಫಲಿತಾಂಶಗಳನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಏಳು ಕೋಟಿ ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪ್‌ಲೈನ್ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಸ್ವಾತಂತ್ರ್ಯದ 7 ದಶಕಗಳಲ್ಲಿ, ದೇಶದಲ್ಲಿ ಕೇವಲ 30 ಮಿಲಿಯನ್ ಗ್ರಾಮೀಣ ಕುಟುಂಬಗಳು ಪೈಪ್‌ಲೈನ್‌ನಲ್ಲಿ ನೀರನ್ನು ಹೊಂದಿದ್ದವು ಎಂದಿದ್ದಾರೆ.
 

Follow Us:
Download App:
  • android
  • ios