Gyanvapi Case: ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಒಪ್ಪಿಗೆ ನೀಡಿದ ಅಲಹಾಬಾದ್ ಹೈಕೋರ್ಟ್!
ಗ್ಯಾನವಾಪಿ ಕೇಸ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದ್ದು, ಮಸೀದಿಯ ಒಳಗೆ ಸಿಕ್ಕಿರುವ ಶಿವಲಿಂಗದ ಆಕೃತಿಯ ಕಾರ್ಬನ್ ಡೇಟಿಂಗ್ ನಡೆಸಲು ಒಪ್ಪಿಗೆ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಇದನ್ನು ಮಾಡುವಂತೆ ಎಎಸ್‌ಐಗೆ ಸೂಚನೆ ನೀಡಿದೆ.
ಅಲಹಾಬಾದ್ (ಮೇ.12): ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಗ್ಯಾನವಾಪಿ ಮಸೀದಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ನ್ಯಾಯಾಲಯ ಶುಕ್ರವಾರ ಮಹತ್ವದ ಆದೇಶವನ್ನು ನೀಡಿದೆ. ಮಸೀದಿಯ ವಝುಕಾನಾ ಎನ್ನಲಾಗುವ ಪ್ರದೇಶದಲ್ಲಿ ಕಂಡಿರುವ ಶಿವಲಿಂಗದ ರೂಪದ ಕಾರ್ಬನ್ ಡೇಟಿಂಗ್ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಅಲ್ಲಿ ಸಿಕ್ಕಿರುವ ಶಿವಲಿಂಗದ ರೂಪದ ಆಕೃತಿಯ ಮೂಲಸ್ವರೂಪಕ್ಕೆ ಯಾವುದೇ ಧಕ್ಕೆಯಾಗಬಾರದು ಎನ್ನುವ ಸೂಚನೆಯನ್ನು ನೀಡಿದೆ. ಅಲಹಾಬಾದ್ ಹೈಕೋರ್ಟ್ ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದೆ. ಶುಕ್ರವಾರ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ ಅವರ ಪೀಠವು ಶಿವಲಿಂಗದ ಮೇಲಿನ ಭಾಗವನ್ನು ಸಮೀಕ್ಷೆ ಮಾಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಆದೇಶಿಸಿದೆ. ಯಾವುದೇ ಕಾರಣಕ್ಕೂ ಶಿವಲಿಂಗದ ರೂಪದ ಆಕೃತಿಯಲ್ಲಿಯ ಹತ್ತು ಗ್ರಾಮ್‌ಗಿಂತ ಹೆಚ್ಚಿನ ಅಂಶವನ್ನು ತೆಗೆದುಕೊಳ್ಳುವಂತಿಲ್ಲ. ಈ ಶಿವಲಿಂಗವು 2022ರ ಮೇ 16 ರಂದು ಗ್ಯಾನವಾಪಿ ಕ್ಯಾಂಪಸ್‌ನಲ್ಲಿರುವ ವುಜುಖಾನಾದಲ್ಲಿ ಕಂಡುಬಂದಿದೆ. ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದರು.
ಎಎಸ್‌ಐ ಗುರುವಾರ ಮುಚ್ಚಿದ ಲಕೋಟೆಯನ್ನು ನೀಡಿದ್ದು, ವೈಜ್ಞಾನಿಕ ಸಮೀಕ್ಷೆಯ ಮೂಲಕ, ಶಿವಲಿಂಗವು ಎಷ್ಟು ಹಳೆಯದು ಎಂದು ಕಂಡುಹಿಡಿಯಲು ಸಾಧ್ಯವಾಗಲಿದೆ. ಅದು ನಿಜವಾಗಿಯೂ ಶಿವಲಿಂಗವೇ ಅಥವಾ ಬೇರೆ ಯಾವುದೋ ಎಂದು ಖಚಿತಪಡಿಸಿಕೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಐ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಗುರುವಾರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು.
ಮಾರ್ಚ್ 20 ರಂದು ನಡೆದ ವಿಚಾರಣೆಯಲ್ಲಿ, ಶಿವಲಿಂಗಕ್ಕೆ ಹಾನಿಯಾಗದಂತೆ ಕಾರ್ಬನ್ ಡೇಟಿಂಗ್ ತನಿಖೆಯನ್ನು ಮಾಡಬಹುದೇ ಎಂದು ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು (ಎಎಸ್‌ಐ) ಕೇಳಿತ್ತು. ಈ ತನಿಖೆಯ ಮೂಲಕ ಶಿವಲಿಂಗ ಎಷ್ಟು ವರ್ಷ ಹಳೆಯದು ಎನ್ನುವುದು ತಿಳಿಯಲಿದೆ ಎಂದು ಅರ್ಜಿದಾರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ, ಆದರೆ ಇದುವರೆಗೆ ಎಎಸ್‌ಐ ಹೈಕೋರ್ಟ್‌ಗೆ ಯಾವುದೇ ಉತ್ತರವನ್ನು ಸಲ್ಲಿಸಿರಲಿಲ್ಲ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಉತ್ತರ ನೀಡಲು ಎಎಸ್‌ಐಗೆ ಕೊನೆಯ ಅವಕಾಶ ನೀಡಿತ್ತು. ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಹಾನಿಯಾಗದಂತೆ ಕಾರ್ಬನ್ ಡೇಟಿಂಗ್ ಪರೀಕ್ಷೆಯನ್ನು ಮಾಡಬಹುದೇ ಎಂದು ನ್ಯಾಯಾಲಯವು ಎಎಸ್ಐಗೆ ಕೇಳಿತ್ತು.
Gyanvapi Case: ಮುಂದಿನ ಆದೇಶದವರೆಗೂ ಶಿವಲಿಂಗವನ್ನು ಸಂರಕ್ಷಿಸಬೇಕು, ಸುಪ್ರೀಂ ಆದೇಶ!
ಗ್ಯಾನವಾಪಿಯಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, “2022 ಮೇ 16 ರಂದು ಗ್ಯಾನವಾಪಿ ಆವರಣದಲ್ಲಿ ಪತ್ತೆಯಾದ ಶಿವಲಿಂಗವನ್ನು ವೈಜ್ಞಾನಿಕವಾಗಿ ತನಿಖೆ ಮಾಡಬೇಕು ಎಂದು ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ವೈಜ್ಞಾನಿಕ ತನಿಖೆಯಿಂದ ಶಿವಲಿಂಗಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯವು 14 ಅಕ್ಟೋಬರ್ 2022 ರಂದು ನಮ್ಮ ಅರ್ಜಿಯನ್ನು ತಿರಸ್ಕರಿಸಿತ್ತು' ಎಂದಿದ್ದರು. ಎಎಸ್‌ಐ 52 ಪುಟಗಳ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಇದರಲ್ಲಿ, ಐಐಟಿ ರೂರ್ಕಿ, ಐಐಟಿ ಖರಗ್‌ಪುರ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ಶಿವಲಿಂಗವನ್ನು ಹಾನಿಯಾಗದಂತೆ ಪರೀಕ್ಷಿಸಲು ಹಲವು ಮಾರ್ಗಗಳಿವೆ ಎಂದು ಹೇಳಿದ್ದನ್ನು ತಿಳಿಸಿದೆ. ಎಎಸ್‌ಐನ ಈ ವರದಿಯ ಆಧಾರದ ಮೇಲೆ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಆದೇಶ ನೀಡಲಾಗಿದೆ.
Gyanvapi: ರಂಜಾನ್ ಸಮಯದಲ್ಲಿ ವುಜುಕಾನಾ ಬಳಕೆಗೆ ಅನುಮತಿ ಕೇಳಿದ ಮುಸ್ಲಿಮರು, ಸುಪ್ರೀಂ ಕೋರ್ಟ್ ಹೇಳಿದ್ದೇನು?