Gyanvapi: ರಂಜಾನ್‌ ಸಮಯದಲ್ಲಿ ವುಜುಕಾನಾ ಬಳಕೆಗೆ ಅನುಮತಿ ಕೇಳಿದ ಮುಸ್ಲಿಮರು, ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ರಂಜಾನ್‌ ಸಮಯದಲ್ಲಿ ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ವುಜುಕಾನಾ ಬಳಕೆಗೆ ಅನುಮತಿ ನೀಡಬೇಕು ಎಂದು ಮುಸ್ಲಿಂಮರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಇದನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಪ್ರಮುಖ ನಿರ್ಧಾರವನ್ನು ತಿಳಿಸಿದೆ.

Gyanvapi Masjid Dispute The Muslim side sought permission for Wuju Supreme Court comments san

ನವದೆಹಲಿ (ಏ.17): ಜ್ಞಾನವಾಪಿಯ ಆವರಣದಲ್ಲಿ ಶಿವಲಿಂಗ ಕಾಣಿಸಿಕೊಂಡಿರುವ ಪ್ರದೇಶವಾದ ವುಜುಕಾನಾವನ್ನು ಬಳಸಲು ಅನುಮತಿ ಕೊಡುವಂತೆ ಮುಸ್ಲಿಮರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ. ಈ ಕುರಿತಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆ ಮಾಡಿದೆ. ವಾರಣಾಸಿ ಜಿಲ್ಲಾಧಿಕಾರಿಗಳು ಏಪ್ರಿಲ್ 18 ರಂದು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಅದರಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್ ಅವರ ಪೀಠ ಹೇಳಿದೆ. ಅಲ್ಲಿ ಆಗುವ ತೀರ್ಮಾನದ ಬಳಿಕವೇ ಜ್ಞಾನವಾಪಿ ಆವರಣದಲ್ಲಿರುವ ವುಜುಕಾನಾವನ್ನು ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಈ ಅರ್ಜಿ ಸಲ್ಲಿಸಿದೆ. ಇದರಲ್ಲಿ ಮಸೀದಿಯ ಒಳಗಡೆ ನಿರ್ಮಿಸಿರುವ ಮುಜುಕಾನಾವನ್ನು ಬಳಸಲು ಅನುಮತಿ ನೀಡಬೇಕು ಎಂದು ಹೇಳಲಾಗಿದೆ. ಜ್ಞಾನವಾಪಿಯ ಆವರಣದಲ್ಲಿರುವ ವುಜುಕಾನಾದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನುವ ಕಾರಣಕ್ಕೆ ಆ ಪ್ರದೇಶವನ್ನು ಸುಪ್ರೀಂ ಕೋರ್ಟ್‌ ಸೀಲ್‌ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಸರ್ಕಾರ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅವರು ಹೇಳುತ್ತಿರುವ ವುಜುಕಾನಾ ಪ್ರದೇಶವು, ವಿವಾದಿತ ಸ್ಥಳವಾಗಿದೆ. ಅಲ್ಲಿ ಶಿವಲಿಂಗವಿದೆ ಎಂದು ಹೇಳಲಾಗಿದೆ. ಆದ್ದರಿಂದ ಅವರಿಗೆ ಈ ಅನುಮತಿ ನೀಡಿದರೆ ಅದು ಸಮಸ್ಯೆಗೆ ಕಾರಣವಾಗಬಹುದು.  ಆದರೂ ಜಿಲ್ಲಾಧಿಕಾರಿ ಹಾಗೂ ಮಸೀದಿ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದರು. ಮುಸ್ಲಿಂ ಪರ ವಕೀಲ ಹುಝೈಫಾ ಅಹ್ಮದಿ ಇದಕ್ಕೆ ಪ್ರತಿಕ್ರಿಯಿಸಿದದು,  ರಂಜಾನ್‌ ಹಬ್ಬವಿದೆ. ಅಧಿಕಾರಿಗಳು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.

ನೀವು ಆವರಣದಲ್ಲಿ (Gyanvapi Masjid) ಮೊಬೈಲ್‌ ಟಾಯ್ಲೆಟ್‌ ಸೇರಿದಂತೆ ಏನೇ ವ್ಯವ್ಯಸ್ಥೆ ಮಾಡಿ. ಆದರೆ, ಸ್ಥಳದ ಪ್ರಾವಿತ್ಯತೆಗೆ (Kashi Vishwanath) ಧಕ್ಕೆ ಆಗದಂತೆ ಮಾಡಿ. ಅದಕ್ಕಾಗಿ ನೀವು ಅಧಿಕಾರಿಗಳೊಂದಿಗೆ ಕೈಜೊಡಿಸಿ ಸರಿಯಾದ ನಿರ್ಧಾರ ಮಾಡಿ ಎಂದು ತುಷಾರ್‌ ಮೆಹ್ತಾ ವಾದಿಸಿದರು.

ಅರ್ಜಿದಾರರು ಬಾತ್‌ರೂಮ್‌ ಮತ್ತು ಶೌಚಾಲಯಗಳಿಗೆ ಸಾಕಷ್ಟು ಸ್ಥಳವನ್ನು ಕೇಳುತ್ತಿದ್ದಾರೆ. ಇದಕ್ಕಾಗಿ ವಾರಣಾಸಿ ಜಿಲ್ಲಾಧಿಕಾರಿ ಏಪ್ರಿಲ್ 18ರಂದು ಸಭೆ ಕರೆದು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ಏಪ್ರಿಲ್ 21 (Gyanvapi Mosque Case) ರಂದು ಈ ವಿಷಯವನ್ನು ಮತ್ತೆ ವಿಚಾರಣೆ ಮಾಡಲಿದ್ದೇವೆ. ಸಭೆಯಲ್ಲಿ ಪರಸ್ಪರ ಒಪ್ಪಿಗೆಯಿಂದ ಮೊಬೈಲ್ ಶೌಚಾಲಯ ಮತ್ತು ವುಜುಕಾನಾ ನಿರ್ಧಾರವನ್ನು ತೆಗೆದುಕೊಂಡರೆ, ನ್ಯಾಯಾಲಯದ ಮುಂದಿನ ಆದೇಶಕ್ಕೆ ಕಾಯದೆ ಅದನ್ನು ಜಾರಿಗೊಳಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಹೇಳಿದರು.

ಮುಸ್ಲಿಂ ಸಮುದಾಯದ ಬೇಡಿಕೆಗಳೇನು

- ಮೇ 13 ರಂದು, ವಾರಣಾಸಿ ನ್ಯಾಯಾಲಯವು ಮಸೀದಿಯೊಳಗೆ ನಡೆಸಿದ ಸಮೀಕ್ಷೆಯ ಬಳಿಕ ಶಿವಲಿಂಗ ಪತ್ತೆಯಾಗಿದ್ದರಿಂದ ಮುಜುಕಾನಾವನ್ನು ಸೀಲ್‌ ಮಾಡಲು ಆದೇಶಿಸಿತ್ತು.

Gyanvapi Case: ಮುಂದಿನ ಆದೇಶದವರೆಗೂ ಶಿವಲಿಂಗವನ್ನು ಸಂರಕ್ಷಿಸಬೇಕು, ಸುಪ್ರೀಂ ಆದೇಶ!

- ಮೇ 17 ರಂದು, ವಾರಣಾಸಿ ನ್ಯಾಯಾಲಯದ ಆದೇಶವು ಮುಸ್ಲಿಮರು ಮಸೀದಿಗಳಿಗೆ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ನಿರ್ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಏತನ್ಮಧ್ಯೆ, ಶಿವಲಿಂಗದ ರಕ್ಷಣೆಯನ್ನು ಅನಿರ್ದಿಷ್ಟವಾಗಿ ವಿಸ್ತರಿಸಲಾಯಿತು.

Gyanvapi Case: ಇಂದು 3 ಕೋರ್ಟ್‌ಗಳಲ್ಲಿ ಜ್ಞಾನವಾಪಿಯ 4 ಕೇಸ್‌ ವಿಚಾರಣೆ!

- ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠವು ರಂಜಾನ್ ಸಮಯದಲ್ಲಿ ವುಝುಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಕೋರಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 21 ರಂದು ನಿಗದಿಪಡಿಸಿತು.

Latest Videos
Follow Us:
Download App:
  • android
  • ios