ಗ್ಯಾನವಾಪಿ ಮಸೀದಿಯೊಳಗೆ ಪ್ರತಿ ದಿನ 5 ಬಾರಿ ಹಿಂದೂ ದೇವರ ಪೂಜೆ, ನಂದಿಗೂ ಕೇಳಿಸಲಿದೆ ಶಂಖನಾದ!

31 ವರ್ಷಗಳ ಬಳಿಕ ಗ್ಯಾನವಾಪಿ ಮಸೀದಿಯೊಳಗಿರುವ ಹಿಂದೂ ದೇವರ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಪೂಜೆ ಕೂಡ ನಡೆದಿದೆ.ಮತ್ತೊಂದು ವಿಶೇಷ ಅಂದರೆ ಪ್ರತಿ ದಿನ 5 ಬಾರಿ ಪೂಜೆ ನಡೆಯಲಿದೆ. ಆರತಿ ಬೆಳಗಿ, ಗಂಟೆ ಶಬ್ದ, ಶಂಖನಾದದ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ಹಾಗಾದರೆ ಬೆಳಗ್ಗೆ ಎಷ್ಟು ಗಂಟೆಗೆ ಪೂಜೆ ಆರಂಭಗೊಳ್ಳಲಿದೆ?

Gyanvapi case Daily 5 times arati to be held in Vyas ka Tahkana says Hindu side lawyer ckm

ವಾರಣಾಸಿ(ಫೆ.01) ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಗ್ಯಾನವಾಪಿ ಮಸೀದಿಯಲ್ಲಿ ಪೂಜೆ, ಆರತಿ, ಶಂಖನಾದ ಕೇಳಿಸುತ್ತಿದೆ. 31 ವರ್ಷಗಳ ಬಳಿಕ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್‌ ಕೆ ಠಿಖಾನಾ’ದಲ್ಲಿನ ಶೃಂಗಾರ ಗೌರಿ ಸೇರಿದಂತೆ ಇತರ ಹಿಂದೂ ದೇವರ ಮೂರ್ತಿಗಳಿಗೆ ಪೂಜೆ ನಡೆದಿದೆ. ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್ ಸದಸ್ಯರು, ವ್ಯಾಸ ಕುಟುಂಬದ ಅರ್ಚಕರು ಇಂದು ಗ್ಯಾನವಾಪಿಯೊಳಗೆ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಅಂದರೆ ಇನ್ನು ಮುಂದೆ ಪ್ರತಿ ದಿನ 5 ಬಾರಿ ಗ್ಯಾನವಾಪಿ ಮಸೀದಿಯೊಳಗಿರುವ ಹಿಂದೂ ಮೂರ್ತಿಗಳಿಗೆ ಪೂಜೆ ನೆರವೇರಲಿದೆ. ಇಲ್ಲಿನ ಪೂಜೆ, ಆರತಿ, ಶಂಖನಾದ ಆವರಣದ ಹೊರಗಿರುವ ನಂದಿಗೂ ಕೇಳಿಸಲಿದೆ

ಈ ಕುರಿತು ವಕೀಲ ವಿಷ್ಣುಶಂಕರ್ ಜೈನ್ ಕೆಲ ಮಹತ್ವದ ಮಾಹಿತಿ ನೀಡಿದ್ದಾರೆ. ಗ್ಯಾನವಾಪಿ ಪೂಜೆಗೆ ವಾರಣಾಸಿ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಶಾಸ್ತ್ರೋಕ್ತ ಪೂಜೆ ನಡೆಯಲಿದೆ. ಪ್ರತಿ ದಿನ 5 ಬಾರಿ ವಿಶೇಷ ಆರತಿ ನಡೆಯಲಿದೆ. ಮುಂಜಾನೆ 3.30ಕ್ಕೆ ಮಂಗಳ ಆರತಿ ನಡೆಯಲಿದೆ. ಇನ್ನು ಮಧ್ಯಾಹ್ನ 12 ಗಂಟೆಗೆ ಭೋಗ ಆರತಿ, ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಂಯಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ನಡೆಯಲಿದೆ ಎಂದ ವಿಷ್ಣುಶಂಕರ್ ಜೈನ್ ಹೇಳಿದ್ದಾರೆ. 

ಗ್ಯಾನವಾಪಿ ಪೂಜೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಸೀದಿ ಸಮಿತಿಗೆ ಹಿನ್ನೆಡೆ!

ಹಿಂದೂ ಪೂಜಾ ಪದ್ಧತಿಯಂತೆ ಆರತಿ ವೇಳೆ ಗಂಟೆ, ಶಂಖನಾದ ಮೊಳಗಲಿದೆ. ನಿಲ್ಲಿಸಲಾದ ಪೂಜೆ ಹಾಗೂ ಪದ್ಧತಿಯನ್ನು ಪುನರ್ ಆರಂಭಿಸಲಾಗಿದೆ ಎಂದು ವಿಷ್ಣುಶಂಕರ್ ಜೈನ್ ಹೇಳಿದ್ದಾರೆ. ಇತ್ತ ಪೂಜೆ ಸಲ್ಲಿಸಿರುವ ವ್ಯಾಸ ಕುಟಂಬದ ಅರ್ಚಕ ಜಿತೇಂದ್ರ ನಾಥ ವ್ಯಾಸ ಸಂತಸ ವ್ಯಕ್ತಪಡಿಸಿದ್ದಾರೆ. ಮಸೀದಿಯಲ್ಲಿರುವ ವ್ಯಾಸ್‌ ಕೆ ಠಿಖಾನಾ ಸಂಕೀರ್ಣ ವ್ಯಾಸ ಕುಟುಂಬದ ವಶದಲ್ಲಿದೆ. ಆದರೆ ಕೆಲ 31 ವರ್ಷಗಳಿಂದ ಪೂಜೆ ಸಲ್ಲಿಸಲು ಅವಕಾಶವಿರಲಿಲ್ಲ. ಇದೀಗ ಕೋರ್ಟ್ ನೀಡಿರುವ ಅನುಮತಿಯಿಂದ ಮಹದೇವನಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಜಿತೇಂದ್ರ ನಾಥ ವ್ಯಾಸ ಹೇಳಿದ್ದಾರೆ.

ವಾರಣಾಸಿ ಕೋರ್ಟ್ ಹಿಂದೂಗಳಿಗೆ ಪೂಜೆಗೆ ಅನುಮತಿ ನೀಡುತ್ತಿದ್ದಂತೆ  ಗ್ಯಾನವಾಪಿ  ಅಂಜುಮ್‌ ಇನ್ತೆಜಾಮಿಯಾ ಮಸೀದಿ ಸಮಿತಿಯ ಕೆರಳಿ ಕೆಂಡವಾಗಿತ್ತು. ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿತ್ತು. ವಾರಣಾಸಿ ಕೋರ್ಟ್ ಹಿಂದೂಗಳಿಗೆ ಪೂಜೆ ಸಲ್ಲಿಸಲು ನೀಡಿದ್ದ ಅನುಮತಿಯಲ್ಲಿ ತಡೆಹಿಡಿಯಬೇಕು. ಗ್ಯಾನವಾಪಿಯಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿತು. ಹೈಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಮಸೀದಿ ಸಮಿತಿಗೆ ಸೂಚನೆ ನೀಡಿದೆ. 

ಮುಲಾಯಂ ಸಿಂಗ್‌ ಯಾದವ್‌ ಸೀಲ್‌ ಮಾಡಿದ 31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ!
 

Latest Videos
Follow Us:
Download App:
  • android
  • ios