ಮುಲಾಯಂ ಸಿಂಗ್ ಯಾದವ್ ಸೀಲ್ ಮಾಡಿದ 31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ!
ಉತ್ತರ ಪ್ರದೇಶ ಸಿಎಂ ಆಗಿದ್ದ ಮುಲಾಯಂ ಸಿಂಗ್ ಯಾದವ್ ಜ್ಞಾನವಾಪಿಯ ಆವರಣವನ್ನು ಹಿಂದುಗಳಿಗೆ ಸೀಲ್ ಮಾಡಿದ 31 ವರ್ಷಗಳ ಬಳಿಕ ಬುಧವಾರ ಮೊದಲ ಬಾರಿಗೆ ಜ್ಞಾನವಾಪಿಯಲ್ಲಿ ಗಂಟೆಯ ನಾದ ಮೊಳಗಿದೆ.
ನವದೆಹಲಿ (ಫೆ.1): ಕೊನೆಗೂ ಕಾಶಿ ವಿಶ್ವನಾಥನಿಗೆ ಹಿಂದುಗಳ ಮೊರೆ ಕೇಳಿದೆ. ವಾರಣಾಸಿ ಕೋರ್ಟ್ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದುಗಳು ಪೂಜೆ ಮಾಡಬಹುದು ಎಂದು ತೀರ್ಪು ನೀಡಿದ ಬೆನ್ನಲ್ಲಿಯೇ ಅಲ್ಲಿ ಪೂಜಾ ಕಾರ್ಯ ನೆರವೇರಿದೆ. 31 ವರ್ಷಗಳ ಹಿಂದೆ ಈಗಿನ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ತಂದೆ ಹಾಗೂ ಮಾಜಿ ಉತ್ತರ ಪ್ರದೇಶ ಸಿಎಂ ಇದೇ ನೆಲಮಾಳಿಗೆಯನ್ನು ಹಿಂದೂಗಳಿಗೆ ಬಂದ್ ಮಾಡಿದ್ದರು. 31 ವರ್ಷಗಳ ಬಳಿಕ ಬುಧವಾರ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಗಂಟೆಯ ನಾದ ಮೊಳಗಿದೆ. ಇಷ್ಟು ವರ್ಷಗಳ ಬಳಿಕ ನಡೆದ ಪೂಜೆಗೆ ವಿಶ್ವನಾಥ ದೇಗುಲ ಟ್ರಸ್ಟ್‌ನ 5 ಸದಸ್ಯರು ಹಾಗೂ ಅರ್ಚಕ ವ್ಯಾಸ್ ಅವರ ಕುಟುಂಬ ಭಾಗಿಯಾಗಿದೆ. ಬುಧವಾರ ಮಧ್ಯರಾತ್ರಿಯೇ ಹರಹರ ಮಹದೇವ ಘೋಷಣೆ ಮೊಳಗಿದೆ. ಗಂಗಾಜಲದ ಅಭಿಷೇಕದ ಮೂಲಕ ಮೊದಲ ಪೂಜೆ ನಡೆಸಲಾಗಿದೆ. ಬುಧವಾರವಷ್ಟೇ ವಾರಣಾಸಿ ಜಿಲ್ಲಾ ಕೋರ್ಟ್, ಜ್ಞಾನವಾಪಿಉಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು.
ಕೋರ್ಟ್ ಆದೇಶ ನೀಡಿದ 8 ಗಂಟೆಯೊಳಗೆ ಜ್ಞಾನವಾಪಿಯಲ್ಲಿ ಪೂಜಾ ಕಾರ್ಯ ನಡೆದಿದೆ. ಇದಕ್ಕೂ ಮುನ್ನ ಕಾಶಿ ವಿಶ್ವನಾಥ ಟ್ರಸ್ಟ್ ಸಿಬ್ಬಂದಿಯಿಂದ ನೆಲಮಹಡಿ ಸ್ವಚ್ಛತಾ ಕಾರ್ಯ ನಡೆದಿದೆ. ಮೂಲ ದೇಗುಲ ಅರ್ಚಕರಾದ ಜಿತೇಂದ್ರನಾಥ ವ್ಯಾಸ್ ಕುಟುಂಬದಿಂದ ಜ್ಞಾನವಾಪಿಯ ಪೂಜೆ ನಡೆದಿದೆ. ನೆಲಮಹಡಿಯಲ್ಲಿದ್ದ ಗಣೇಶ, ಲಕ್ಷ್ಮೀ ದೇವಿಗೆ ಅರ್ಚಕರು ಆರತಿ ಬೆಳಗಿದ್ದಾರೆ. ವಾರಾಣಸಿ ಡಿಎಂ, ಆಯುಕ್ತರ ಉಪಸ್ಥಿತಿಯಲ್ಲಿ ಪೂಜೆ ನೆರವೇರಿದೆ. ಆ ಬಳಿಕ ಪರಸ್ಪರ ಸಿಹಿ ಪ್ರಸಾದ ತಿನಿಸಿ ಹಿಂದೂ ಭಕ್ತರು ಸಂತಸ ಹಂಚಿಕೊಂಡಿದ್ದಾರೆ. ಪೂಜೆ ವೇಳೆ ಮಸೀದಿ ಆವರಣದಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕಲ್ಪಿಸಿತ್ತು.
ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು,ಪೂಜೆಗೆ ಅವಕಾಶ ನೀಡಿದ ಕೋರ್ಟ್!
ಜ್ಞಾನವಾಪಿ ಪೂಜೆ ಟೈಮ್ ಲೈನ್:
ಬುಧವಾರ ಮಧ್ಯಾಹ್ನ 3 ಗಂಟೆ: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆಗೆ ವಾರಾಣಸಿ ಕೋರ್ಟ್ ಗ್ರೀನ್ ಸಿಗ್ನಲ್
ಸಂಜೆ 5 ಗಂಟೆ: :ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಸಂಜೆ 7 ಗಂಟೆ: ಜ್ಞಾನವಾಪಿ ಪರಿಸರದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ.
ರಾತ್ರಿ 8.15: ಕಾಶಿ ವಿಶ್ವನಾಥ ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ.
ರಾತ್ರಿ 9 : ದೇಗುಲದ ಐವರು ಅರ್ಚಕರಿಗೆ ಬುಲಾವ್.
ರಾತ್ರಿ 10.30: ಬ್ಯಾರಿಕೇಡ್ ತೆರವು, ಸ್ವಚ್ಛತಾ ಕಾರ್ಯ. ದೇಗುಲಕ್ಕೆ ಬಂದ ಅರ್ಚಕರು.
ರಾತ್ರಿ 11.00 : 31 ವರ್ಷಗಳ ನಂತರ ಜ್ಞಾನವಾಪಿಯಲ್ಲಿ ನಡೆದ ಪೂಜೆ
ಜ್ಞಾನವಾಪಿಯ ಗೋಡೆಗಳಲ್ಲಿ ಸಿಕ್ಕ ತೆಲುಗು ಶಾಸನಗಳಲ್ಲಿದೆ ಮಂದಿರದ ಮಾಹಿತಿ!