Asianet Suvarna News Asianet Suvarna News

ಅಮೆರಿಕಾ ವಧು, ವಿಜಯಪುರದ ವರ: ವಿಜಯಪುರದಲ್ಲಿ ಅಪರೂಪದ ಮದುವೆ!

ವಿಜಯಪುರದ ಹುಡುಗ ಅಮೇರಿಕಾದ ಬೆಡಗಿ. ವಿಜಯಪುರದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಈ ಅಪರೂಪದ ಮದುವೆಗೆ ನಗರದ ಟೌನ್‌ ಹಾಲ್‌ ಸಾಕ್ಷಿಯಾಗಿದೆ. ವಿಜಯಪುರದ ವರ ಅಮೇರಿಕಾದ ವಧುವಿನ ಕೈ ಹಿಡಿದು ದಾಂಪತ್ಯಕ್ಕೆ ಕಾಲಿಟಿದ್ದಾನೆ.

vijayapura village man married america woman in hindu culture gvd
Author
Bangalore, First Published Jul 5, 2022, 12:10 AM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜು.04): ವಿಜಯಪುರದ ಹುಡುಗ ಅಮೇರಿಕಾದ ಬೆಡಗಿ. ವಿಜಯಪುರದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಈ ಅಪರೂಪದ ಮದುವೆಗೆ ನಗರದ ಟೌನ್‌ ಹಾಲ್‌ ಸಾಕ್ಷಿಯಾಗಿದೆ. ವಿಜಯಪುರದ ವರ ಅಮೇರಿಕಾದ ವಧುವಿನ ಕೈ ಹಿಡಿದು ದಾಂಪತ್ಯಕ್ಕೆ ಕಾಲಿಟಿದ್ದಾನೆ.

ಅಮೆರಿಕ ವಧು, ಬಿಜಾಪುರದ ವರ: ಹೌದು! ನಗರದ ಅಥಣಿ ರಸ್ತೆಯ ಟೌನ್‌ ಹಾಲ್‌ನಲ್ಲಿ ನಡೆದ ಅದೊಂದು ಮದುವೆ ಎಲ್ಲರ ಗಮನ ಸೆಳೆಯಿತು. ಉತ್ತರ ಅಮೇರಿಕದ ಕೆನಡಾ ವಧು, ವಿಜಯಪುರ ನಗರದ ವರ ಮದುವೆಯಲ್ಲಿ ಗಮನ ಸೆಳೆದರು. ವಿಜಯಪುರ ನಗರದ ವಿಶ್ವನಾಥ ಚಿಮ್ಮಲಗಿ, ಶೋಭಾ ದಂಪತಿಗಳ ಪುತ್ರ ರವಿಕುಮಾರ್‌ ಹಾಗೂ ಕೆನಡಾದ ರೋಜ್‌ಮೇರಿ ಪ್ಲಾಟ್‌, ಹ್ಯಾರಿ ಪೋಲಾರ್ಡ್‌ ದಂಪತಿಗಳ ಪುತ್ರಿ ಸಾರಾ ನಡುವೆ ಅದ್ದೂರಿಯಾಗಿ ಮದುವೆ ನಡೆಯಿತು. ಅಪರೂಪದ ಜೋಡಿಗಳ ಮದುವೆ ಕಂಡು ವಿಜಯಪುರದ ಜನ ಶುಭ ಹಾರೈಸಿದರು.

ವಿಜಯಪುರ: ಸಾತಾಪುರದಲ್ಲಿ ವಾಂತಿ-ಭೇದಿ ಕಾಟ: ಆತಂಕದಲ್ಲಿ ಜನತೆ..!

ಹಿಂದೂ ಸಂಪ್ರದಾಯದಂತೆ ನಡೆದ ಮದುವೆ: ವಧು ಸಾರಾ ಕ್ರಿಶ್ಚಿಯನ್‌ ಧರ್ಮಿ, ರವಿಕುಮಾರ್‌ ಹಿಂದೂ ಧರ್ಮಿಯರಾದ್ರೂ ಮದುವೆ ಮಾತ್ರ ಪಕ್ಕಾ ಹಿಂದೂ ಸಂಪ್ರದಾಯದಂತೆಯೇ ನಡೆಯಿತು. ಸಾರಾ ಸಹ ಸೀರೆಯನ್ನ ಉಟ್ಟು ನೇರಿಗೆ ಹೊದ್ದು ಮದುವೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಸಾರಾ ವಿಜಯಪುರ ಮೂಲದವಳೇ ಇರಬಹುದಾ ಎನ್ನುವ ಮಟ್ಟಿದೆ ದೇಶಿ ಸಾಂಪ್ರದಾಯದಂತೆಯೆ ಉಡುಗೆ ತೊಡುಗೆ ಹಾಕಿಕೊಂಡಿದ್ದು ಮದುವೆಗೆ ಬಂದವರನ್ನ ಅಚ್ಚರಿಗೊಳಿಸಿತು.

ಲವ್‌ ಕಂ ಅರೆಂಜ್‌ ಮ್ಯಾರೇಜ್: ರವಿಕುಮಾರ್‌ ಹಾಗೂ ಸಾರಾ ನಡುವೆ ಪ್ರೀತಿ ಚಿಗರೊಡೆದು ಈಗ ಮದುವೆ ಮೂಲಕ ದಾಂಪತ್ಯದ ಬೆಸೆದುಕೊಂಡಿದೆ. ಕೆನಡಾದ ಒಂದೆ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ್‌ ಹಾಗೂ ಸಾರಾ ನಡುವೆ 2017ರಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು. ಬಳಿಕ ಈಗ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದಾರೆ.

ಭಾರತೀಯ ಹಿಂದೂ ಸಂಪ್ರದಾಯಕ್ಕೆ ಮನಸೋತ ಸಾರಾ: ಭಾರತೀಯ ಮೂಲಕ ಕರ್ನಾಟಕದ ವಿಜಯಪುರದ ರವಿಕುಮಾರ್‌ ಚಿಮ್ಮಲಗಿಯನ್ನ ಪ್ರೀತಿಸಿದ ಸಾರಾಗೆ ಭಾರತೀಯ ಸಂಪ್ರದಾಯ, ಹಿಂದೂ ಆಚರಣೆಗಳು ಎಂದರೇ ಬಲು ಅಚ್ಚುಮೆಚ್ಚಂತೆ. ಹೀಗಾಗಿ ಇಬ್ಬರ ನಡುವಿನ ಪ್ರೀತಿ ಮದುವೆ ಮೂಲಕ ಮತ್ತಷ್ಟು ಗಟ್ಟಿಗೊಂಡಿದೆ. ಮದುವೆಯಲ್ಲು ಸಾರಾ ಹಿಂದೂ ಸಂಪ್ರದಾಯದಂತೆ ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ.

ವಿಜಯಪುರದಲ್ಲಿ ಮಳೆಗಾಗಿ ಗ್ರಾಮಸ್ಥರಿಂದ ಭಜನೆ: ನಿರಂತರ ಶಿವಧ್ಯಾನ

ಗಣ್ಯರು ಅಪರೂಪದ ಮದುವೆಯಲ್ಲಿ ಭಾಗಿ: ವಿಜಯಪುರ ನಗರದ ಗಣ್ಯರು, ರಾಜಕಾರಣಿಗಳು ಅಪರೂಪದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ವಿಶೇಷ ಜೋಡಿಗಳಿಗೆ ಆಶೀರ್ವದಿಸಿದ್ದಾರೆ. ನೂರು ಕಾಲ ಸುಖ ಸಂಸಾರ ನಡೆಸುವಂತೆ ಹಾರೈಸಿದ್ದಾರೆ.

Follow Us:
Download App:
  • android
  • ios