ಗುಜರಾತಿನ 2ನೇ ಹಂತದ ಚುನಾವಣೆ ಸೋಮವಾರ ನಡೆಯಲಿದ್ದು, ಶನಿವಾರ ಅಬ್ಬರದ ಪ್ರಚಾರ ಅಂತ್ಯವಾಗಿದೆ. ನಾಳೆ ಮತದಾನ ನಡೆಯಲಿದೆ. 2ನೇ ಹಂತದಲ್ಲಿ ಒಟ್ಟು 182 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಹಮದಾಬಾದ್‌: ಗುಜರಾತಿನ 2ನೇ ಹಂತದ ಚುನಾವಣೆ ಸೋಮವಾರ ನಡೆಯಲಿದ್ದು, ಶನಿವಾರ ಅಬ್ಬರದ ಪ್ರಚಾರ ಅಂತ್ಯವಾಗಿದೆ. ನಾಳೆ ಮತದಾನ ನಡೆಯಲಿದೆ. 2ನೇ ಹಂತದಲ್ಲಿ ಒಟ್ಟು 182 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ (Aam Aadmi Party) ಸೇರಿ 60ಕ್ಕೂ ಹೆಚ್ಚು ರಾಜಕೀಯ ಪಕ್ಷಕ್ಕೆ ಸೇರಿದ 833 ಜನರು ಚುನಾವಣಾ ಕಣದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮತದಾರರ ಓಲೈಕೆಗಾಗಿ ಪಕ್ಷಗಳು ಕೊನೆಯ ಬಾರಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) 50 ಕಿ.ಮೀ. ಉದ್ದ ರೋಡ್‌ ಶೋ ನಡೆಸಿದ್ದು, ರಾರ‍ಯಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಕೂಡಾ ಭಾಗವಹಿಸಿದ್ದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಕೂಡಾ ಭರ್ಜರಿ ಪ್ರಚಾರ ನಡೆಸಿದ್ದರು. ಮತದಾನ ಪ್ರಕ್ರಿಯೆ ಸೋಮವಾರ ಅಂದರೆ ನಾಳೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.


ಮೋದಿ ತವರಲ್ಲಿ ರಾವಣ ಸಂಗ್ರಾಮ: 'ನಮೋ' ಸಮರ ಘೋಷದ ಸಂದೇಶವೇನು?

ನನ್ನ ಮೋದಿ ಶೂರ್ಪನಖಿ ಎಂದಿದ್ದರು... ಮೋದಿ, ರೇಣುಕಾ ಹಳೆ ವಿಡಿಯೋ ವೈರಲ್

Gujarat Election: ಆಪ್‌ ಒಂದು ಸೀಟೂ ಗೆಲ್ಲಲ್ಲ, ಕೈ ಸೋಲು ನಿಶ್ಚಿತ: ಅಮಿತ್ ಶಾ