ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಹೇಳಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಹಿಂದೆದಿಗಿಂತಲೂ ಅಭೂತಪೂರ್ವವಾಗಿ ಬಿಜೆಪಿ ಜಯ ಸಾಧಿಸಲಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ, ಗುಜರಾತ್‌ನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಗೆ ಗೆಲುವು ತಂದುಕೊಡಲಿದೆ’ ಎಂದು ನುಡಿದಿದ್ದಾರೆ.

ಪಿಟಿಐ ಅಹಮದಾಬಾದ್‌ ಡಿ.1) : ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಹೇಳಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಹಿಂದೆದಿಗಿಂತಲೂ ಅಭೂತಪೂರ್ವವಾಗಿ ಬಿಜೆಪಿ ಜಯ ಸಾಧಿಸಲಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ, ಗುಜರಾತ್‌ನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಗೆ ಗೆಲುವು ತಂದುಕೊಡಲಿದೆ’ ಎಂದು ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಎಲ್ಲ ಪಕ್ಷಗಳಿಗೂ ಸ್ಪರ್ಧಿಸುವ ಹಕ್ಕಿದೆ. ಆದರೆ ಪಕ್ಷಗಳನ್ನು ಸ್ವೀಕಾರ ಮಾಡುವುದು ಜನರಿಗೆ ಬಿಟ್ಟಿದ್ದು. ಗುಜರಾತ್‌ ಜನರ ಮನಸ್ಸಿನಲ್ಲಿ ಆಪ್‌ಗೆ ಸ್ಥಾನವೇ ಇಲ್ಲ. ಫಲಿತಾಂಶಕ್ಕಾಗಿ ಕಾಯಿರಿ. ಗೆದ್ದವರ ಪಟ್ಟಿಯಲ್ಲಿ ಬಹುಶಃ ಆಪ್‌ನ ಒಬ್ಬರ ಹೆಸರೂ ಇರುವುದಿಲ್ಲ’ ಎಂದರು.

Gujarat Election: ಗುಜರಾತ್‌ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ

ಇನ್ನು ಕಾಂಗ್ರೆಸ್‌ ಬಗ್ಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಇಂದಿಗೂ ಪ್ರಮುಖ ಪ್ರತಿಪಕ್ಷ. ಆದರೆ ಪಕ್ಷ ಬಿಕ್ಕಟ್ಟಿನಲ್ಲಿದೆ. ಇದರ ಪರಿಣಾಮ ಫಲಿತಾಂಶದಲ್ಲಿ ಗೋಚರವಾಗಲಿದೆ’ ಎಂದರು. ರಾಹುಲ್‌ ಗಾಂಧಿ ಅವರ ಭಾರತ ಜೋಡೋ ಯಾತ್ರೆಗೆ ಪ್ರತಿಕ್ರಿಯಿಸಿದ ಶಾ, ‘ನಿರಂತರ ಪ್ರಯತ್ನ ಮಾತ್ರ ಫಲಿಸುತ್ತವೆ. ನೋಡೋಣ’ ಎಂದರು.

ಇತರ ರಾಜ್ಯಗಳಲ್ಲೂ ಮೂಲಭೂತವಾದ ನಿಗ್ರಹ ಘಟಕ

ಅಹಮದಾಬಾದ್‌: ಗುಜರಾತ್‌ನಲ್ಲಿ ಉಗ್ರರ ಸ್ಲೀಪರ್‌ ಸೆಲ್‌ ಘಟಕಗಳನ್ನು ಮಟ್ಟಹಾಕಲು ‘ಮೂಲಭೂತವಾದ ನಿಗ್ರಹ ಸೆಲ್‌’ ಆರಂಭಿಸುವ ಭರವಸೆ ನೀಡಲಾಗಿದೆ. ಇದೊಂದು ಉತ್ತಮ ಹೆಜ್ಜೆ. ಇದನ್ನು ಇತರ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಗಳೂ ಪರಿಗಣಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

‘ಪಿಎಫ್‌ಐನಂಥ ಸಂಘಟನೆಗಳು ಜನರನ್ನು ಮೂಲಭೂತವಾದಕ್ಕೆ ತಳ್ಳುತ್ತವೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಅಂಶ ಪರಿಶೀಲಿಸಿಯೇ ಅನೇಕ ರಾಜ್ಯಗಳು ಇರಿಸಿದ ಬೇಡಿಕೆ ಪರಿಗಣಿಸಿ ಪಿಎಫ್‌ಐ ನಿಷೇಧಿಸಲಾಯಿತು. ಹೀಗಾಗಿಯೇ ಇಂಥ ಚಟುವಟಿಕೆ ತಡೆಯಲು ಮೂಲಭೂತವಾದ ನಿಗ್ರಹ ಸೆಲ್‌ ಸ್ಥಾಪನೆಯನ್ನು ಎಲ್ಲ ರಾಜ್ಯಗಳು ಕೇಂದ್ರ ಪರಿಗಣಿಸಬೇಕು’ ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದರು. ಬೆಲೆ ಏರಿಕೆ ಬಗ್ಗೆ ಉತ್ತರಿಸಿದ ಅವರು, ‘ಇಡೀ ವಿಶ್ವ ಇಂದು ಬೆಲೆ ಏರಿಕೆಯಿಂದ ಬಳಲುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಆದ ಪರಿಣಾಮ ಕಮ್ಮಿ’ ಎಂದರು.

ಮಾತೃಭಾಷೆಯಲ್ಲಿ ವೈದ್ಯಕೀಯ ತಾಂತ್ರಿಕ ಶಿಕ್ಷಣಕ್ಕೆ ಶಾ ಒತ್ತು

ಅಹಮದಾಬಾದ್‌: ತಾಂತ್ರಿಕ, ವೈದ್ಯಕೀಯ ಹಾಗೂ ಕಾನೂನು ಶಿಕ್ಷಣವನ್ನು ಹಿಂದಿ ಹಾಗೂ ಆಯಾ ಮಾತೃಭಾಷೆಯಲ್ಲೇ ನೀಡಲು ರಾಜ್ಯಗಳು ಕ್ರಮ ಜರುಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ.

News Hour: ಗುಜರಾತ್‌ ಚುನಾವಣೆ ಬಳಿಕ ಬಿಜೆಪಿಗೆ ಕರ್ನಾಟಕವೇ ಟಾರ್ಗೆಟ್‌!

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವುದರಿಂದ, ಇಂಗ್ಲಿಷ್‌ ಗೊತ್ತಿಲ್ಲದೇ ಇದ್ದರೂ ಜಾಣರಾಗಿರುವ ಅನೇಕ ಸುಪ್ತ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಮಾತೃಭಾಷೆ ಸುಲಭವಾಗಿರುವ ಕಾರಣ ಮಕ್ಕಳು ವೇಗವಾಗಿ ಕಲಿಯುತ್ತಾರೆ’ ಎಂದರು.