Asianet Suvarna News Asianet Suvarna News

ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ : 8 ಕಾರ್ಮಿಕರ ದಾರುಣ ಸಾವು

ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌  ಕುಸಿದು 8 ಜನ ಕಾರ್ಮಿಕರು ದಾರುಣವಾಗಿ ಸಾವಿಗೀಡಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ.

Gujarat under construction building lift collapsed in Ahmedabad 8 labor killed akb
Author
First Published Sep 14, 2022, 2:50 PM IST

ಅಹ್ಮದಾಬಾದ್: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌  ಕುಸಿದು 8 ಜನ ಕಾರ್ಮಿಕರು ದಾರುಣವಾಗಿ ಸಾವಿಗೀಡಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಬಹುಮಹಡಿ ಕಟ್ಟಡದಲ್ಲಿದ್ದ ತಾತ್ಕಾಲಿಕ ಲಿಫ್ಟ್ ಕಾರ್ಮಿಕರನ್ನು ಮೇಲೆ ಕರೆದೊಯ್ಯುತ್ತಿದ್ದು 7 ನೇ ಮಹಡಿಗೆ ತಲುಪಿದಾಗ ಅಲ್ಲೇ ಸ್ಥಗಿತಗೊಂಡು ಅಲ್ಲಿಂದ ಕೆಳಗೆ ಬಿದ್ದಿದೆ. ಪರಿಣಾಮ 8 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಗುಜರಾತ್ ವಿಶ್ವವಿದ್ಯಾನಿಲಯದ ಸಮೀಪದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ 7ನೇ ಮಹಡಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಲಿಫ್ಟ್‌  ಸ್ಥಗಿತಗೊಂಡ ವೇಳೆ ಇದರಲ್ಲಿ ಎಂಟು ಜನ ಕಾರ್ಮಿಕರು ಇದ್ದರು. ಇವರು ಜೊತೆಯಲ್ಲಿ ಕಟ್ಟಡ ನಿರ್ಮಾಣದ ಹಲವು ವಸ್ತುಗಳನ್ನು ಲಿಫ್ಟ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಮಹೇಂದ್ರ (Mahedra) ಎಂಬುವವರು ಹೇಳಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲರೂ ಪಂಚಮಾಲಾ ಜಿಲ್ಲೆಗೆ ಸೇರಿದವರು ಎಂದು ಅವರು ಹೇಳಿದ್ದಾರೆ. 

ಗುಜರಾತ್‌ನಲ್ಲಿ ಭಯಾನಕ ದುರಂತ, ಉಪ್ಪಿನ ಫ್ಯಾಕ್ಟರಿಯ ಗೋಡೆ ಕುಸಿದು 12 ಕಾರ್ಮಿಕರು ಸಾವು!

ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಅಹ್ಮದಾಬಾದ್‌ನ ಮುನ್ಸಿಪಲ್ ಕಾರ್ಪೋರೇಷನ್‌ನ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ವಿಭಾಗಕ್ಕೆ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದೆ. ಹೀಗಾಗಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ತಂಡ (fire and police team ) ತಡವಾಗಿ ಭೇಟಿ ನೀಡಿದೆ. 

ಈ ರೀತಿ ಒಂದು ಘಟನೆ ನಡೆದಿದೆ ಎಂದು ನಮಗೆ ಮಾಧ್ಯಮಗಳಿಂದ ಕರೆ ಬಂದ ಬಳಿಕ ತಿಳಿದಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಿಳಿಸಿದ್ದಾರೆ. ನಂತರ ನಾವು ಘಟನಾ ಸ್ಥಳಕ್ಕೆ ಹೋಗಿ ಏನಾಗಿದೆ ಎಂದು ನೋಡಿದ್ದೇವೆ. ಕಟ್ಟಡದ ಬಿಲ್ಡರ್‌ಗಳಾಗಲಿ ಅಥವಾ ಇತರ ಏಜೆನ್ಸಿಯವರಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಅಗ್ನಿ ಶಾಮಕ ಇಲಾಖೆ ಮುಖ್ಯ ಅಧಿಕಾರಿ ಜಯೇಶ್ ಖಡೀಯ ಹೇಳಿದ್ದಾರೆ.  ಈ ಬಗ್ಗೆ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್‌  (Ahmedabad Municipal Corporation) ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಶ ಬರೋಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಖಾಸಗಿಯಾಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದೆ. ಕಟ್ಟಡ ನಿರ್ಮಾಣ ಯೋಜನೆ ಹಾಗೂ ಇತರ ಅನುಮೋದನೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಗುಜರಾತ್‌ನ ಭರೂಚ್‌ನಲ್ಲಿ ದುರಂತ, ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ, 6 ಕಾರ್ಮಿಕರು ಸಾವು!

ಮೃತರನ್ನು ಸಂಜಯ್ ಭಾಯ್ ಬಾಬುಭಾಯ್ ನಾಯಕ್ (Sanjaybhai Babubhai Nayak), ಜಗದೀಶ್‌ ಭಾಯ್ ರಮೇಶ್‌ಭಾಯ್ ನಾಯಕ್ (Jagdishbhai Rameshbhai Nayak), ಅಶ್ವಿನಿ ಭಾಯ್ ಸೊಮಭಾಯ್ ನಾಯಕ್ (Ashwinbhai Sombhai Nayak), ಮುಕೇಶ್ ಭರತ್‌ಭಾಯ್ ನಾಯಕ್ (Mukesh Bharatbhai Nayak), ಮುಕೇಶ್‌ಭಾಯ್‌ಭರತ್ ಭಾಯ್ ನಾಯಕ್ (Mukeshbhai Bharatbhai Nayak), ರಾಜ್‌ಮಲ್ ಸುರೇಶ್ ಭಾಯ್ ಖರಡಿ (Rajmal Sureshbhai Kharadi) ಹಾಗೂ ಪಂಕಜ್‌ಭಾಯ್ ಶಂಕರ್ಭಾಯ್ ಖರಡಿ ( Pankajbhai Shankarbhai Kharadi) ಮೃತ ಕಾರ್ಮಿಕರು

Follow Us:
Download App:
  • android
  • ios